ಮೇಷ: ಸಾಮಾನ್ಯ ಜೀವನಕ್ಕೆ ಧಕ್ಕೆ, ಚಿನ್ನ – ಬೆಳ್ಳಿ ವ್ಯವಹಾರದಲ್ಲಿ ಎಚ್ಚರದಿಂದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
ವೃಷಭ: ಅಕಾಲ ಭೋಜನದಿಂದ ಅನಾರೋಗ್ಯ. ವಾದ-ವಿವಾದಗಳಲ್ಲಿ ಎಚ್ಚರ. ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ಧನ ನಷ್ಟ.
ಮಿಥುನ: ಸ್ತ್ರೀಯರಿಗೆ ಶುಭ. ಕೃಷಿ ಕಾರ್ಯಗಳಲ್ಲಿ ಭಾಗಿ. ಕಾರ್ಯಸಾಧನೆಗಾಗಿ ತಿರುಗಾಟ. ವ್ಯಸನದಿಂದ ತೊಂದರೆ ಉಂಟಾದೀತು.
ಕಟಕ: ಮಾತಾಪಿತರ ಸಲಹೆಯಿಂದ ಅನಿರೀಕ್ಷಿತ ಲಾಭವಾಗಲಿದೆ. ನಂಬಿದ ಜನರಿಂದ ಮೋಸವಾಗುವ ಸಾಧ್ಯತೆ. ಅಧಿಕ ಖರ್ಚು.
ಸಿಂಹ: ಅವಿವಾಹಿತರಿಗೆ ವಿವಾಹಯೋಗ. ಸ್ನೇಹಿತರ ಭೇಟಿ. ಸಾಲದ ಸಮಸ್ಯೆ ನಿವಾರಣೆ. ಸ್ವಂತ ಉದ್ಯೋಗ ದವರಿಗೆ ಸಾಧಾರಣ ಪ್ರಗತಿ.
ಕನ್ಯಾ: ಕಾರ್ಯಸಿದ್ಧಿಯ ಹಾದಿಯಲ್ಲಿ ನಾನಾ ವಿಘ್ನಗಳು. ಪರಸ್ಥಳ ವಾಸ. ಆರೋಗ್ಯದ ಕಡೆ ಗಮನ ಹರಿಸಿ. ಕೃಷಿಕರಿಗೆ ನಷ್ಟ.
ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೋವ್ಯಥೆ ಕಾಡಲಿದೆ. ಶ್ರಮಕ್ಕೆ ತಕ್ಕ ಫಲ. ಕುಲದೇವತಾ ಕೃಪೆಗಾಗಿ ಪ್ರಾರ್ಥಿಸಿ.
ವೃಶ್ಚಿಕ: ಶತ್ರುಬಾಧೆ. ಸಹೋದ್ಯೋಗಿಗಳಿಂದ ಸಲ್ಲದ ಅಪವಾದ. ವಾಹನ ಅಪಘಾತ ಸಾಧ್ಯತೆ. ಅಲ್ಪ ಲಾಭ. ಆಪ್ತರೊಡನೆ ಕಲಹ.
ಧನುಸ್ಸು: ಸಗಟು ವ್ಯಾಪಾರದಲ್ಲಿ ಧನಲಾಭ. ಮನೆಯಲ್ಲಿ ಶುಭಕಾರ್ಯ. ವ್ಯಾಪಾರದಲ್ಲಿ ಲಾಭ. ದುಷ್ಟರಿಂದ ದೂರವಿರಿ. ಇಷ್ಟಾರ್ಥಸಿದ್ಧಿ.
ಮಕರ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ. ಚಂಚಲ ಮನಸ್ಸು. ಶರೀರದಲ್ಲಿ ಆತಂಕ. ಯತ್ನ ಕಾರ್ಯಗಳಲ್ಲಿ ಜಯ.
ಕುಂಭ: ಆರೋಗ್ಯದ ಕಡೆ ಗಮನ. ಗೆಳೆಯರಿಗಾಗಿ ಖರ್ಚು. ಸಂಗಾತಿಯೊಂದಿಗೆ ವೈಮನಸ್ಸು. ದ್ರವ್ಯಲಾಭ. ಉದ್ಯೋಗದಲ್ಲಿ ತೊಂದರೆ.
ಮೀನ: ನ್ಯಾಯಾಲಯದ ಆದೇಶದ ಅನುಸಾರ ಆಸ್ತಿಯಿಂದ ಲಾಭ. ಸಾಲದಿಂದ ಮುಕ್ತಿ. ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ.
PublicNext
14/04/2022 07:17 am