ಮೇಷ: ಅನವಶ್ಯಕವಾಗಿ ಋಣಾತ್ಮಕವಾಗಿ ಚಿಂತಿಸದಿರಿ. ಬಹಳ ದಿನಗಳ ಬಳಿಕ ಬಂಧು-ಮಿತ್ರರ ಒಡನಾಟ ಸಂತೋಷ ತರಲಿದೆ.
ವೃಷಭ: ನ್ಯಾಯಾಂಗ ಇಲಾಖೆಯವರಿಗೆ ಮುಂಬಡ್ತಿ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಕಂಡುಬರುವುದು.
ಮಿಥುನ: ಬೇರೆಯವರ ಕೆಲಸವನ್ನು ನಿಮ್ಮದೆಂದೇ ತಿಳಿದು ಮಾಡಿ ಮುಗಿಸುವಿರಿ. ಮಗನಿಗಾಗಿ ವ್ಯಾಪಾರ ಮಳಿಗೆ ಆರಂಭಿಸಬಹುದು.
ಕಟಕ: ಚಾಲಕ ವೃತ್ತಿಯವರಿಗೆ ಸ್ವಂತ ವಾಹನ ಖರೀದಿ ಯೋಗ. ವಿವೇಚನೆಯಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಸಿಂಹ: ತಂದೆ -ತಾಯಿಯ ಆರೋಗ್ಯದತ್ತ ಗಮನವಿರಲಿ. ಮನೆಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಹೊಣೆಗಾರಿಕೆ ನಿಮ್ಮದಾಗಿರುತ್ತದೆ.
ಕನ್ಯಾ: ಹೊಸ ಮನೆಯನ್ನು ಕೊಳ್ಳುವ ಬಗ್ಗೆ ದಲ್ಲಾಳಿಗ ಳೊಂದಿಗೆ ಮಾತುಕತೆ. ಕಚೇರಿಯಲ್ಲಿ ಸಹೋದ್ಯೋಗಿ ಗಳ ನಡುವೆ ಮನಸ್ತಾಪ.
ತುಲಾ: ಭವಿಷ್ಯದ ಬಗ್ಗೆ ಅನಗತ್ಯ ಚಿಂತೆ ಬಿಟ್ಟು ಈಗಿನ ಅಗತ್ಯಗಳನ್ನು ಪೂರೈಸಿಕೊಳ್ಳುವ ಕಡೆಗೆ ಗಮನಹರಿಸಿ. ವರ್ಗಾವಣೆಯ ಸಂಭವ.
ವೃಶ್ಚಿಕ: ದಿನಸಿ ವ್ಯಾಪಾರಿಗಳಿಗೆ ಅಲ್ಪ ಲಾಭ. ಆಕಸ್ಮಿಕವಾಗಿ ಹಳೆಯ ಗೆಳೆಯನ ಭೇಟಿ. ಖಾಸಗಿ ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ.
ಧನುಸ್ಸು: ಮನಪರಿವರ್ತನೆಯಾಗಲಿದೆ. ಆರ್ಥಿಕ ಕೆಲಸಗಳಲ್ಲಿ ಪ್ರಗತಿ. ಮನೆ ಮತ್ತು ಉದ್ಯೋಗ ಬದಲಾವಣೆ ವಿಚಾರದಲ್ಲಿ ತೀರ್ವನ.
ಮಕರ: ಕಾರ್ವಿುಕರಿಗೆ ಈ ದಿನ ಅಶುಭ. ಮಕ್ಕಳಿಂದ ಅಧಿಕ ಖರ್ಚು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ.
ಕುಂಭ: ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ. ಆದಾಯದಲ್ಲಿ ಅಭಿವೃದ್ಧಿ . ವಿವಾಹದ ಪ್ರಯತ್ನದಲ್ಲಿ ಯಶಸ್ಸು. ಗಾಯಕರಿಗೆ ಶುಭ ದಿನ.
ಮೀನ: ಕಬ್ಬಿಣದ ಕೆಲಸಗಾರರಿಗೆ ಲಾಭವಾಗಲಿದೆ. ಅನವಶ್ಯಕವಾಗಿ ಋಣಾತ್ಮಕ ಚಿಂತನೆ ಮಾಡದಿರಿ. ದೇಹದ ಆರೋಗ್ಯದಲ್ಲಿ ವ್ಯತ್ಯಾಸ.
PublicNext
13/04/2022 07:16 am