ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 26.3.2022

ಮೇಷ: ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ. ಅರಣ್ಯ ಮಾರ್ಗದಲ್ಲಿ ಪ್ರಯಾಣ.

ವೃಷಭ: ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ. ಮಕ್ಕಳ ವಿಚಾರದಲ್ಲಿ ಚರ್ಚೆ, ಗೊಂದಲಕ್ಕೆ ಅವಕಾಶ ನೀಡದಿರಿ.

ಮಿಥುನ: ಜಲೋತ್ಪನ್ನ ವಸ್ತುಗಳ ವ್ಯವಹಾರದಿಂದ ಲಾಭ. ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ. ಧನಲಾಭ.

ಕಟಕ: ಸಹಾಯ ಪಡೆದುಕೊಳ್ಳುವವರಿಂದ ಮೋಸ ಹೋಗದಿರಿ. ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ. ನಿರೀಕ್ಷಿತ ಧನಾಗಮ.

ಸಿಂಹ: ಉತ್ತಮ ಬುದ್ಧಿಶಕ್ತಿ, ಧೈರ್ಯ, ಉದಾರ ಗುಣಗಳಿಂದ ಕಾರ್ಯಕ್ಷೇತ್ರದಲ್ಲಿ ಮನ್ನಣೆ. ಪಾಲುದಾರಿಕಾ ವ್ಯವಹಾರದಲ್ಲಿ ಪೋ›ತ್ಸಾಹ.

ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ. ನಿರೀಕ್ಷಿತ ಲಾಭ ಪಡೆಯಿರಿ.

ತುಲಾ: ಅನಿರೀಕ್ಷಿತ ಅಭಿವೃದ್ಧಿಯಿಂದ ಸಂತೋಷ. ಮಾತೃಸಮಾನರಿಂದ ಸಹಕಾರ, ಪೋ›ತ್ಸಾಹ ಲಭ್ಯ. ಉದ್ಯೋಗದಲ್ಲಿ ಪ್ರಗತಿ.

ವೃಶ್ಚಿಕ: ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಿರಲಿ.

ಧನುಸ್ಸು: ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯದಲ್ಲಿ ಏರುಪೇರು. ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಕಾರ್ಯೋನ್ಮುಖರಾಗಿ.

ಮಕರ: ಉದ್ಯೋಗದಲ್ಲಿ ಪ್ರಗತಿ. ಭೂಮಿ ವಿಚಾರದಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ಹುಷಾರು.

ಕುಂಭ: ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ.

ಮೀನ: ಸಣ್ಣ ಪ್ರಯಾಣದಿಂದ ಲಾಭ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಿದ್ಯಾರ್ಥಿಗಳಿಗೆ ಶುಭ.

Edited By : Nirmala Aralikatti
PublicNext

PublicNext

26/03/2022 07:08 am

Cinque Terre

30.58 K

Cinque Terre

0