ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 15.1.2022

ಮೇಷ: ಕೌಟುಂಬಿಕ ಪರಿಸ್ಥಿತಿ ಸುಖಕರ. ದುರಹಂಕಾರ ಮತ್ತು ಆಲಸ್ಯವನ್ನು ನಿಯಂತ್ರಿಸಿ. ಧಾರ್ವಿುಕ ಸಮಾರಂಭಕ್ಕೆ ಖರ್ಚು.

ವೃಷಭ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಅನಗತ್ಯ ವಿಶ್ಲೇಷಣೆಯಿಂದ ದೂರವಿರಿ. ವೈವಾಹಿಕ ಜೀವನದಲ್ಲಿ ವೈಮನಸ್ಯ.

ಮಿಥುನ: ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಸುದ್ದಿ. ವ್ಯಾಪಾರಿಗಳು ಅಥವಾ ಸಂಬಳ ಪಡೆಯುವ ಜನರಿಗೆ ಉತ್ತಮ ಅವಕಾಶ.

ಕಟಕ: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಹಣ-ಸಂಬಂಧಿತ ಸಮಸ್ಯೆಗಳು ಪರಿಹಾರವಾಗುತ್ತವೆ.

ಸಿಂಹ: ಆರೋಗ್ಯದ ದೃಷ್ಟಿಯಿಂದ ಉತ್ತಮ. ನಿಮಗೆ ಬಿಪಿ ಸಮಸ್ಯೆಗಳು ಅಥವಾ ಸ್ನಾಯುವಿನ ಸಮಸ್ಯೆಇದ್ದರೆ, ಎಚ್ಚರಿಕೆಯಿಂದ ಇರಿ.

ಕನ್ಯಾ: ವ್ಯಾಪಾರಿಗಳು ಈ ದಿನ ಸರಾಸರಿ ಲಾಭ ಗಳಿಸುವ ಸಾಧ್ಯತೆ. ವ್ಯಾಪಾರ ವಿಸ್ತರಣೆಯ ಅತ್ಯುತ್ತಮ ಅವಕಾಶ ಪ್ರಾಪ್ತಿ.

ತುಲಾ: ವೃತ್ತಿಪರ ಕೋರ್ಸ್ಗೆ ಪ್ರವೇಶಾವಕಾಶ. ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಸಮಸ್ಯೆ.

ವೃಶ್ಚಿಕ: ಸಾಲದಿಂದ ಮುಕ್ತರಾಗುವ ಸಾಧ್ಯತೆ. ಜೀವನ ಸಂಗಾತಿಯೊಂದಿಗೆ ಸಾಮರಸ್ಯದ ಸಂಬಂಧ ಕಾಪಾಡಿಕೊಳ್ಳುತ್ತೀರಿ.

ಧನುಸ್ಸು: ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ. ಉನ್ನತ ಹುದ್ದೆಗೆ ಬಡ್ತಿ ಸಾಧ್ಯತೆ. ವ್ಯಾಪಾರಸ್ಥರು ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ ಯಶ.

ಮಕರ: ಕೆಲಸದ ಒತ್ತಡ ಸಂಪೂರ್ಣವಾಗಿ ದಣಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಘರ್ಷಣೆ. ಖರ್ಚು ಮಾಡುವಾಗ ಯೋಚಿಸಿ.

ಕುಂಭ: ಹಣವನ್ನು ಹೂಡಿಕೆ ಮಾಡಿ ಲಾಭ ಪಡೆಯಲು ಶುಭದಿನ. ಹೊಸ ಮೂಲಗಳಿಂದ ಹಣದ ಒಳಹರಿವು. ಬಳಸಿಕೊಳ್ಳಿ.

ಮೀನ: ನಿಮ್ಮ ಕೋಪವು ಕೌಟುಂಬಿಕ ಸಮಸ್ಯೆಗಳಿಗೆ ಕಾರಣ ಆಗಲಿದೆ. ಸಹನೆ ಕಾಪಾಡಿಕೊಳ್ಳಿ. ಹಣಕಾಸಿನ ಸ್ಥಿತಿಯು ಉತ್ತಮ.

Edited By : Nirmala Aralikatti
PublicNext

PublicNext

15/01/2022 07:08 am

Cinque Terre

24.43 K

Cinque Terre

0