ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 17.12.2021

ಮೇಷ: ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಸಂಬಂಧವಿರದ ವಿಷಯದಿಂದ ಅಂತರ ಕಾಯ್ದುಕೊಳ್ಳುವುದು ಜಾಣತನ.

ವೃಷಭ: ನಿಮ್ಮನ್ನು ದೂರುವವರನ್ನು ನಿರ್ಲಕ್ಷಿಸಿ. ದುರ್ಬಲರಿಗೆ ದಾನ ಮಾಡಿ. ರಾಜಕೀಯ ರಂಗದಲ್ಲಿ ಇರುವವರಿಗೆ ಸೋಲು.

ಮಿಥುನ: ಒತ್ತಡದ ಜೀವನದಲ್ಲಿ ಮಕ್ಕಳನ್ನು ನಿರ್ಲಕ್ಷಿಸಬೇಡಿ. ಮಹಿಳೆಯರೊಂದಿಗೆ ವಾಗ್ವಾದ. ಹಿರಿಯರಿಂದ ವಿಶೇಷ ಜವಾಬ್ದಾರಿ.

ಕಟಕ: ತಂದೆಯ ಆರೋಗ್ಯದ ಕಾಳಜಿ ಇರಲಿ. ದುಂದು ವೆಚ್ಚ ಬೇಡ. ಭೂವಿವಾದದಲ್ಲಿ ತಿರುವು. ಸಹೋದ್ಯೋಗಿ ಜತೆ ಸಹನೆ ಅಗತ್ಯ.

ಸಿಂಹ: ಆತ್ಮಾಭಿಮಾನಕ್ಕೆ ಧಕ್ಕೆ. ಬಡವರಿಗೆ ಸಹಾಯ ಮಾಡಿ. ಆತ್ಮೀಯ ಸ್ನೇಹಿತನ ಆಗಮನ. ಆರ್ಥಿಕ ಮುಗ್ಗಟ್ಟು ಕಾಡಬಹುದು.

ಕನ್ಯಾ: ಆತುರದ ನಿರ್ಧಾರದಿಂದ ಕುಟುಂಬಕ್ಕೆ ತೊಂದರೆ. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಅಪಘಾತ ಸಾಧ್ಯತೆ.

ತುಲಾ: ಭಾವನಾತ್ಮಕವಾಗಿ ಯೋಚಿಸಿ. ಆರ್ಥಿಕ ನಷ್ಟ. ಶತ್ರುಗಳಿಂದ ತೊಂದರೆ. ಸಂಗಾತಿ ಜತೆ ವಾಗ್ವಾದ. ದಿನಾಂತ್ಯದಲ್ಲಿ ಶುಭಸುದ್ದಿ.

ವೃಶ್ಚಿಕ: ವ್ಯಾಪಾರದಲ್ಲಿ ಹೊಸ ಪಾಲುದಾರರು. ಸಾಲಗಾರರಿಂದ ಕಿರುಕುಳ. ತಾಯಿಗೆ ಅನಾರೋಗ್ಯದ ಸಮಸ್ಯೆ. ಕಚೇರಿಯಲ್ಲಿ ಒತ್ತಡ.

ಧನುಸ್ಸು: ಬಹಳ ದಿನಗಳಿಂದ ಬಾಧಿಸುತ್ತಿದ್ದ ರೋಗದ ಉಪಶಮನ. ಸಹೋದ್ಯೋಗಿಗಳಿಂದ ವಿವಾದ. ಸಮಾಧಾನದಿಂದ ವ್ಯವಹರಿಸಿ.

ಮಕರ: ಮಹಿಳೆಯರಿಗೆ ವಿಶೇಷ ದಿನ. ಸ್ನೇಹಿತನಿಂದ ಮೋಸ. ಖರೀದಿಯಲ್ಲಿ ಎಚ್ಚರದಿಂದಿರಿ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ.

ಕುಂಭ: ಅನಗತ್ಯ ದುಂದುವೆಚ್ಚ. ಹಣದ ವಿಷಯದಲ್ಲಿ ನಿರಾಸೆ. ನೂತನ ಮನೆ ಖರೀದಿ ನಿರ್ಧಾರ. ಮನೆಯಲ್ಲಿ ಶುಭಕಾರ್ಯ ಸಂಭ್ರಮ.

ಮೀನ: ಮಿತ್ರರೇ ಶತ್ರುವಾಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗರಿಷ್ಠ ಪ್ರಯತ್ನಕ್ಕೆ ನಿರಾಸೆ.

Edited By : Nirmala Aralikatti
PublicNext

PublicNext

17/12/2021 07:14 am

Cinque Terre

34.52 K

Cinque Terre

0