ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 26.10.2021

ಮೇಷ: ಯಶಸ್ಸಿನಲ್ಲಿ ಕುಟುಂಬದೊಂದಿಗೆ ಸಂಭ್ರಮ. ನಿಮ್ಮ ಮನಸ್ಥೈರ್ಯಕ್ಕೆ ಮೆಚ್ಚುಗೆ. ವೈದ್ಯರ ಸಲಹೆ ಪಡೆದು ಮುಂದುವರೆಯಿರಿ.

ವೃಷಭ: ಆತ್ಮವಿಶ್ವಾಸದಿಂದ ಕೆಲಸ ನಿರ್ವಹಣೆ ಮಾಡಿ, ಗೆಲವು ನಿಮ್ಮದೇ. ದುಂದು ವೆಚ್ಚ ಮಾಡಬೇಡಿ. ಮಕ್ಕಳಿಂದ ಚಿಂತೆ.

ಮಿಥುನ: ನಿಮ್ಮ ನಡವಳಿಕೆ ಮನಸ್ಸಿನ ನಿಯಂತ್ರಣದಲ್ಲಿರಲಿ. ಹಲವು ದಿನಗಳಿಂದ ಪಟ್ಟ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ.

ಕಟಕ: ಬೇರೆಯವರ ಶಿಫಾರಸಿಗೆ ಕಾಯಬೇಡಿ, ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಜಯ ನಿಮ್ಮದೇ. ಆರೋಗ್ಯದಲ್ಲಿ ಏರುಪೇರು.

ಸಿಂಹ: ಪರರಿಂದ ನಿಮ್ಮ ಕಾರ್ಯಕ್ಕೆ ಆಕ್ಷೇಪ, ಮನಸ್ಸಿಗೆ ಬೇಸರ. ಸಂಗಾತಿಯಿಂದ ಸಲಹೆ. ವಿದೇಶ ವಿದ್ಯಾಭ್ಯಾಸದ ಕನಸು ನನಸು.

ಕನ್ಯಾ: ಹಿರಿಯರ ಸಲಹೆಯನ್ನು ನಿರಾಕರಿಸಬೇಡಿ. ಆಸ್ತಿ ವಿಚಾರದಲ್ಲಿ ಕಿರಿಕಿರಿ. ಸಾರ್ವಜನಿಕ ಜೀವನದಲ್ಲಿ ತಾಳ್ಮೆಯಿಂದ ವರ್ತಿಸಿ.

ತುಲಾ: ಕುಟುಂಬದಲ್ಲಿ ಶುಭಕಾರ್ಯ. ಆಕಸ್ಮಿಕ ಧನಲಾಭ. ಯೋಚಿಸಿ ನಿರ್ವಹಿಸಿ. ಸಂಗಾತಿಯೊಂದಿಗೆ ಧಾರ್ವಿುಕ ಕ್ಷೇತ್ರಕ್ಕೆ ಭೇಟಿ.

ವೃಶ್ಚಿಕ: ನಿರೀಕ್ಷೆಗೂ ಮೀರಿ ನಿಮ್ಮ ಪ್ರಯತ್ನದ ಸಫಲತೆ. ಸ್ನೇಹಿತರಿಂದ ವಿಶೇಷ ಮನ್ನಣೆ. ಕುಟುಂಬದಲ್ಲಿ ವಿಶೇಷ ಗೌರವ.

ಧನುಸ್ಸು: ಕಷ್ಟಕಾಲದಲ್ಲಿ ಕುಟುಂಬದಿಂದ ಸಾಂತ್ವನ. ತಾಯಿಯಿಂದ ವಿಶೇಷ ಸಲಹೆ ಮಾರ್ಗದರ್ಶನ. ಮಕ್ಕಳ ವಿದ್ಯಾಭ್ಯಾಸದ ಚಿಂತೆ.

ಮಕರ: ಧಾರ್ವಿುಕ ಕ್ಷೇತ್ರದಲ್ಲಿ ತೊಡಗಿಕೊಳ್ಳಿ, ಮನಸ್ಸಿಗೆ ಸಮಾಧಾನ ಸಿಗುತ್ತದೆ. ಕಾರ್ಯದಲ್ಲಿ ಸಿಗದ ಯಶಸ್ಸು. ದುರ್ಗೆಯನ್ನು ಆರಾಧಿಸಿ.

ಕುಂಭ: ಅನಿರೀಕ್ಷಿತವಾಗಿ ಧನಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಗಳಿಗೆ ಮದುವೆ ನಿಶ್ಚಯ.

ಮೀನ: ಕಲಾವಿದರಿಗೆ ಇದು ವಿಶೇಷ ದಿನ. ಬರಹಗಾರರಿಗೆ ಮಾನ ಸನ್ಮಾನ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ.

Edited By : Nirmala Aralikatti
PublicNext

PublicNext

26/10/2021 07:03 am

Cinque Terre

42.69 K

Cinque Terre

0