ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 17.10.2021

ಮೇಷ: ಕುಟುಂಬದ ಸದಸ್ಯರೊಂದಿಗೆ ಉತ್ತಮ ಮತ್ತು ಆನಂದದಾಯಕ ಸಮಯ ಕಳೆಯಬಹುದು. ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ.

ವೃಷಭ: ಹಳೆ ಸ್ನೇಹಿತರ ಭೇಟಿಯಿಂದ ಸಮಸ್ಯೆ ಗಳಿಗೆ ಸ್ವಲ್ಪಮಟ್ಟಿನ ಪರಿಹಾರ ಸಿಗಲಿವೆ.

ಮಿಥುನ: ಆರೋಗ್ಯದ ದೃಷ್ಟಿಯಿಂದ ಯಾವುದೇ ವಿಷಯವನ್ನು ಹೆಚ್ಚಾಗಿ ಮನಸ್ಸಿಗೆ ತೆಗೆದುಕೊಳ್ಳಬೇಡಿ.

ಕಟಕ: ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ.

ಸಿಂಹ: ಮಕ್ಕಳು ಸ್ಕೂಲ್ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಲು ನಿಮ್ಮ ಸಹಾಯ ಪಡೆಯಬಹುದು.

ಕನ್ಯಾ: ಅನಗತ್ಯ ಕೆಲಸಗಳಿಗಾಗಿ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.

ತುಲಾ: ಕಚೇರಿಯಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳು ಬೆಂಬಲ ನೀಡುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ.

ವೃಶ್ಚಿಕ: ಕುಟುಂಬದ ಜತೆ ನಿಮ್ಮ ಸಮಯವನ್ನು ಹೆಚ್ಚಾಗಿ ಕಳೆದು ಒಂಟಿತನದ ಭಾವನೆ ಬಿಡಿ.

ಧನುಸ್ಸು: ಯಾವುದೇ ನಿರ್ಧಾರವನ್ನು ತರಾತುರಿ ಯಲ್ಲಿ ತೆಗೆದುಕೊಳ್ಳದೆ, ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳುವುದು ಉತ್ತಮ.

ಮಕರ: ನಿಮ್ಮ ಸಂಜೆಯ ಹೆಚ್ಚಿನ ಸಮಯವನ್ನು ಅತಿಥಿಗಳೊಂದಿಗೆ ಕಳೆಯುವಿರಿ.

ಕುಂಭ: ಅತಿಥಿಗಳು ನಿಮ್ಮ ಮನೆಗೆ ಬರುವ ನಿರೀಕ್ಷೆಯಿದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ.

ಮೀನ: ಸ್ನೇಹಿತರು ಒಬ್ಬರು ಇನ್ನೊಬ್ಬರ ದೃಷ್ಟಿಕೋನ ಅರ್ಥಮಾಡಿಕೊಳ್ಳುವ ಮೂಲಕ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

Edited By : Nirmala Aralikatti
PublicNext

PublicNext

17/10/2021 07:22 am

Cinque Terre

21.45 K

Cinque Terre

0