ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಯಾನಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಹಾಸನ: ಹೆಮ್ಮಾರಿ ಸೋಂಕಿನಿಂದ ಯಾವಾಗ ಮುಕ್ತಿ ಎಂದು ಚಿಂತೆಯಲ್ಲಿರುವ ಜನರ ಚಿಂತೆಯನ್ನು ಮತ್ತಷ್ಟು ಎಚ್ಚಿಸುವಂತೆ ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹೌದು ‘ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಆಪತ್ತು ಕಾಡಲಿದೆ. ಭೂಮಿ ನಡುಗಲಿದೆ, ರಾಜ ಭಯ ಎಲ್ಲವೂ ಇದೆ. ಕಾರ್ತಿಕ ಮಾಸದವರೆಗೂ ಇದೇ ವಿಪತ್ತು ಇರಲಿದೆ’ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ಪೂಜೆಯಲ್ಲಿ ಪಾಲ್ಗೊಂಡ ಕೋಡಿಮಠದ ಶ್ರೀ ಭವಿಷ್ಯ ನುಡಿದಿದ್ದಾರೆ.

ಒಂದೂವರೆ ವರ್ಷದ ಹಿಂದೆ ದೇಶವೊಂದು ಭೂಪಟದಿಂದ ಕಾಣೆಯಾಗುವ ಭವಿಷ್ಯ ಹೇಳಿದ್ದೆ. ಈಗ ಅಫ್ಘಾನಿಸ್ತಾನ ಅಳಿಸಿ ಹೋಯಿತು ಎಂದು ನೆನಪಿಸಿಕೊಂಡ ಅವರು, ಆ ಭಯ ಜಗತ್ತಿನಾದ್ಯಂತ ಇದೆ, ಇನ್ನೂ ಹೆಚ್ಚಲಿದೆ. ಅಫ್ಘಾನಿಸ್ತಾನದಿಂದ ಇಡೀ ಜಗತ್ತಿಗೆ ಭಯ ಇದೆ ಎಂದು ಎಚ್ಚರಿಕೆ ನೀಡಿದರು. ಕೊರೊನಾ ಇನ್ನೂ 2-3 ವರ್ಷ ಹೊಸ ರೂಪ ತಾಳಲಿದೆ. ಆತ್ಮಗಳು ಭಂಗವಾಗಿ ಕಾಡುತ್ತವೆ. ಮುಂದಿನ ದಿನಗಳಲ್ಲಿ ಗಾಳಿಯಾಗಿ ಬೀಸಿ ಸಾವು ಹೆಚ್ಚಲಿದೆ. ಸರ್ಕಾರ ಸುಭದ್ರವಾಗಿರಲಿದೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

09/09/2021 04:36 pm

Cinque Terre

59.53 K

Cinque Terre

56