ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 31.8.2021

ಮೇಷ: ವ್ಯಾಪಾರಸ್ಥ ಮಹಿಳೆಯರಿಗೆ ಆದಾಯ ವೃದ್ಧಿ. ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ. ಧಾನ್ಯ ಮಾರಾಟಗಾರರಿಗೆ ಲಾಭ.

ವೃಷಭ: ಸರ್ಕಾರದ ಕೆಲಸದ ವಿಚಾರದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಗಳ ಬಾಧೆ ನಿವಾರಣೆಯಾಗಲಿದೆ.

ಮಿಥುನ: ರಾಜಕೀಯ ಉನ್ನತಿಗಾಗಿ ಚಿಂತನ ನಡೆಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಲಿದ್ದೀರಿ. ವ್ಯವಹಾರದಲ್ಲಿ ಸ್ಥಿರತೆ.

ಕಟಕ: ವಾಹನ ಮಾರಾಟದಲ್ಲಿ ಉತ್ತಮ ಲಾಭ. ಕಳೆದುಕೊಂಡ ವಸ್ತು ಸಿಗಬಹುದು. ಮಗಳ ವಿವಾಹ ಸಂಬಂಧ ಒತ್ತಡ ಉಂಟಾದೀತು.

ಸಿಂಹ: ಖಾಸಗಿ ನೌಕರರಿಗೆ ಸುದಿನ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನ. ಸಂಗಾತಿಯ ಸಲಹೆ ಮನ್ನಿಸಿ.

ಕನ್ಯಾ: ಪಾಲುದಾರಿಕೆ ವ್ಯಾಪಾರದಲ್ಲಿ ಪ್ರಗತಿ. ನೌಕರಿಯಲ್ಲಿ ಬಿಡುವು ದೊರಕುವ ಸಾಧ್ಯತೆ. ಮಕ್ಕಳಿಂದ ಸಂತಸ ಮೂಡಲಿದೆ.

ತುಲಾ: ಸುಖ, ಸಂತೋಷ ನೆಮ್ಮದಿ ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ನಿರೀಕ್ಷಿತ ಯಶ ಇಲ್ಲ. ಕೆಲಸಗಾರರಿಗೆ ಒತ್ತಡ.

ವೃಶ್ಚಿಕ: ಆಸ್ತಿ ಖರೀದಿ ಸಾಧ್ಯತೆ. ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ದೃಢ ನಿರ್ಧಾರ ತೆಗೆದುಕೊಳ್ಳಿ. ಸಂತಾನ ಅಪೇಕ್ಷಿತರಿಗೆ ಸಿಹಿ.

ಧನುಸ್ಸು: ವಿದೇಶಿ ಕಂಪನಿಯಲ್ಲಿ ಕೆಲಸದ ಅವಕಾಶ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಕಿರಿಕಿರಿ. ದಿನಾಂತ್ಯದಲ್ಲಿ ಶುಭವಾರ್ತೆ.

ಮಕರ: ಕೇಂದ್ರ ಸರ್ಕಾರದ ಹುದ್ದೆ ದೊರಕುವ ಸಾಧ್ಯತೆ. ಆದಾಯ ಹೆಚ್ಚಳದಿಂದ ನೆಮ್ಮದಿ. ವಿವಾಹ ಪ್ರಯತ್ನದಲ್ಲಿ ಕಾರ್ಯಸಿದ್ದಿ.

ಕುಂಭ: ಅಧಿಕಾರಿಗಳಿಂದ ಒತ್ತಡ. ಕುಟುಂಬದ ಹಿರಿಯರಿಗೆ ಅನಾರೋಗ್ಯ. ಮಗನ ಭವಿಷ್ಯದ ಚಿಂತೆ. ಕಳೆದು ಹೋದ ವಸ್ತು ಪ್ರಾಪ್ತಿ.

ಮೀನ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಆಘಾತ. ಕುಟುಂಬದ ಸಮಸ್ಯೆಗೆ ಹಿರಿಯರಿಂದ ಪರಿಹಾರ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ.

Edited By : Nirmala Aralikatti
PublicNext

PublicNext

31/08/2021 07:30 am

Cinque Terre

47.73 K

Cinque Terre

0