ಮೇಷ: ಸಾರ್ವಜನಿಕ ಕ್ಷೇತ್ರದಲ್ಲಿ ಕೀರ್ತಿ ವೃದ್ಧಿ. ಕೈಹಾಕಿದ ಕೆಲಸಗಳಲ್ಲಿ ಬಂಧು ಮಿತ್ರರ ಸಹಾಯದಿಂದ ಅನುಕೂಲವಾಗುತ್ತದೆ.
ವೃಷಭ: ಯತ್ನ ಕಾರ್ಯಗಳಲ್ಲಿ ಅಲ್ಪ ಪ್ರಗತಿ. ಮಂಗಳ ಕಾರ್ಯಕ್ಕೆ ಚಾಲನೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಮಕ್ಕಳಿಂದ ಖರ್ಚು.
ಮಿಥುನ: ಉದ್ಯೋಗ ನಿಮಿತ್ತ ಪರಸ್ಥಳ ವಾಸ. ಸರ್ಕಾರಿ ಕೆಲಸದಲ್ಲಿ ಅಡಚಣೆ. ಸೇವಕ ವರ್ಗದಿಂದ ಕಿರುಕುಳ. ಬಂಧುಗಳಿಂದ ಸಹಾಯ.
ಕಟಕ: ಸ್ನೇಹಿತರಲ್ಲಿ ವಿರಸ. ಅಮೂಲ್ಯ ವಸ್ತು ಕಳೆದುಕೊಳ್ಳುವ ಸಂಭವ. ಬಹುದಿನಗಳ ಋಣ ಭಾರ ಕಳೆದುಕೊಂಡ ಸಮಾಧಾನ.
ಸಿಂಹ: ಧರ್ಮ ಕಾರ್ಯಾಸಕ್ತಿ. ಸಜ್ಜನರ ಸಹವಾಸ. ಪಾಲುದಾರಿಕೆಯಲ್ಲಿ ಅಭಿವೃದ್ಧಿ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಶುಭ.
ಕನ್ಯಾ: ವ್ಯವಹಾರದಲ್ಲಿ ಧನ ನಷ್ಟ. ದಾಯಾದಿಗಳಿಂದ ಅಪಪ್ರಚಾರ. ಅನಾರೋಗ್ಯ ಕಾಡಬಹುದು. ವೈದ್ಯರ ಸಲಹೆ ಪಾಲಿಸಿ.
ತುಲಾ: ತಂದೆ-ತಾಯಿಯ ಸಲಹೆಯಿಂದ ಸಮಾಧಾನ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಲಾಭ.
ವೃಶ್ಚಿಕ: ಶತ್ರುಗಳು ನಿಮ್ಮ ಮುಂದೆ ವಿಜೃಂಭಿಸಬಹುದು. ಅನಿರೀಕ್ಷಿತವಾಗಿ ದೂರಪ್ರಯಾಣ. ಕೃಷಿ ಭೂಮಿ ಖರೀದಿ ಸಾಧ್ಯತೆ ಇದೆ.
ಧನುಸ್ಸು: ಶುಭಕಾರ್ಯ ಯತ್ನ ಸಫಲ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಹೊಸ ಜವಾಬ್ದಾರಿ. ಸಾಲಬಾಧೆಯಿಂದ ಅನಾರೋಗ್ಯ.
ಮಕರ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದಲ್ಲಿ ಸೌಖ್ಯ. ಕಲಾವಿದರಿಗೆ ಪೋ›ತ್ಸಾಹ. ಪತ್ರಕರ್ತರು, ಸಾಹಿತಿಗಳಿಗೆ ಕಿರಿಕಿರಿ.
ಕುಂಭ: ಶ್ರಮದಿಂದ ಗಳಿಸಿದ ಹಣದ ಅಪವ್ಯಯ. ದೂರದಿಂದ ಹಳೆಯ ಸ್ನೇಹಿತನ ಆಗಮನ. ಸಂಗಾತಿಯ ಸಲಹೆಯಿಂದ ಯಶಸ್ಸು.
ಮೀನ: ರಾಜಕೀಯದಲ್ಲಿ ಇರುವವರಿಗೆ ಪದವಿನಷ್ಟದ ಭೀತಿ. ನಟರಿಗೆ ಹೊಸ ಅವಕಾಶ ಪ್ರಾಪ್ತಿ. ಮನೆ ಬದಲಾವಣೆಗೆ ತೀರ್ಮಾನ.
PublicNext
28/08/2021 07:19 am