ಮೇಷ: ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಆತ್ಮೀಯರ ಭೇಟಿಯಿಂದ ಸಂತಸ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ.
ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು.
ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ ತರುವ ಘಟನೆ ನಡೆದೀತು. ಮನಸ್ಸಿನ ಚಂಚಲತೆಯೇ ಸಮಸ್ಯೆಗಳಿಗೆ ಕಾರಣವಾದೀತು.
ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ವಸ್ತುಲಾಭ ಸಾಧ್ಯತೆ.
ಸಿಂಹ: ಮನಸ್ಸಿಗೆ ಕ್ಲೇಶ. ಸಾರ್ವಜನಿಕವಾಗಿ ಅವಮಾನ ಸಾಧ್ಯತೆ, ತಾಳ್ಮೆಯಿಂದಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ಯಶ.
ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತ ವಾಗಿ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಬಂಧುಗಳ ಭೇಟಿ.
ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಸಹನೆ ಇರಲಿ.
ವೃಶ್ಚಿಕ: ಎಲ್ಲ ಕೆಲಸಗಳಲ್ಲಿ ವಿಲಂಬವಾಗಬಹುದು. ಕಚೇರಿ ಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಪರಿಶ್ರಮಕ್ಕೆ ಸರಿಯಾದ ಕಾರ್ಯಸಿದ್ಧಿ.
ಧನುಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ದಿನಾಂತ್ಯದಲ್ಲಿ ಸಿಹಿಸುದ್ದಿ.
ಮಕರ: ದೈಹಿಕ ಶ್ರಮ. ಮಕ್ಕಳ ಪ್ರಗತಿಯ ಬಗ್ಗೆ ನಿರಾಸೆ ಕಾಡೀತು. ಒತ್ತಡದ ಜೀವನ. ಸ್ನಾಯುಗಳಿಗೆ ಸಂಬಂಧಪಟ್ಟಂತೆ ನೋವು.
ಕುಂಭ: ಶತ್ರುಗಳಿಂದ ತೊಂದರೆ. ದೃಢತೆಯ ಕೊರತೆ. ಆಹಾರ ಸೇವನೆಯಲ್ಲಿ ಎಚ್ಚರ, ಮಿತಿ ಇರಲಿ. ಆಪ್ತರ ಮಾತಿಗೆ ಮನ್ನಣೆ ಕೊಡಿ.
ಮೀನ: ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಉತ್ತಮ ಭೋಜನದಿಂದ ಖುಷಿ. ಧನಲಾಭವೂ ಆಗಲಿದೆ. ಆಸ್ತಿ ವಿವಾದಕ್ಕೆ ಅಂತ್ಯ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886043199
PublicNext
21/08/2021 07:18 am