ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 17.8.2021

ಮೇಷ: ಭೂವ್ಯವಹಾರದಲ್ಲಿ ಲಾಭ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ ಸಾಧ್ಯತೆ. ನೀಡಿದ ಸಾಲ ತಿರುಗಿ ಬರಬಹುದು.

ವೃಷಭ: ನ್ಯಾಯಾಲಯದ ವ್ಯವಹಾರದಲ್ಲಿ ಜಯ ನಿಮ್ಮದಾಗಲಿದೆ. ಹೊಸ ನಿವೇಶನ ಖರೀದಿ ಸಾಧ್ಯತೆ. ಕುಟುಂಬದೊಂದಿಗೆ ಮನಸ್ತಾಪ.

ಮಿಥುನ: ಸ್ನಾಯು ಸಂಬಂಧಿತ ರೋಗ ಕಾಡಬಹುದು. ಹಿರಿಯರ ಮಾತಿಗೆ ಮನ್ನಣೆ ನೀಡಿ. ವಿವಾಹ ಅಪೇಕ್ಷಿತರಿಗೆ ಹಿನ್ನಡೆಯಾದೀತು.

ಕಟಕ: ಭೂ ವಿವಾದದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದ ಕಿರಿಕಿರಿ. ಸಕಾಲಿಕ ತೀರ್ವನದಿಂದ ಧನಲಾಭ.

ಸಿಂಹ: ಸ್ತ್ರೀಯರಿಗೆ ಲಾಭ. ಸಮಾರಂಭದಲ್ಲಿ ಪಾಲ್ಗೊಳ್ಳುವಿಕೆ ಬಂಧುಗಳೊಂದಿಗೆ ಭೋಜನ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ಕನ್ಯಾ: ಅಪಾಯದ ಕೆಲಸದಿಂದ ದೂರವಿರಿ. ಕಾರ್ಯಗಳಲ್ಲಿ ವೈಫಲ್ಯ ಕಾಡಬಹುದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ.

ತುಲಾ: ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಭಯ ನಿವಾರಣೆಯಾಗಿ ನಿರಾಳ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ವ್ಯಾಪಾರದಲ್ಲಿ ನಷ್ಟ.

ವೃಶ್ಚಿಕ: ಕೆಲಸಗಳು ಸುಗಮವಾಗಲಿದೆ. ಉನ್ನತ ವಿದ್ಯಾ ಭ್ಯಾಸದ ಕನಸು ನನಸಾಗಲಿದೆ. ವಿವಾಹ ಆಕಾಂಕ್ಷಿ ಗಳಿಗೆ ಕಂಕಣಭಾಗ್ಯ ಸಾಧ್ಯತೆ.

ಧನುಸ್ಸು: ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ನಿರೀಕ್ಷೆ. ಆಸ್ತಿಗೆ ಸಂಬಂಧಿಸಿ ಆತಂಕ ನಿವಾರಣೆ. ಕಚೇರಿಯಲ್ಲಿ ಪ್ರಶಂಸೆಯ ಮಹಾಪೂರ.

ಮಕರ: ಸ್ವಉದ್ಯೋಗಿಗಳಿಗೆ ಲಾಭ. ಖರೀದಿಯಲ್ಲಿ ಹುಷಾರು. ಉದ್ಯೋಗ ಬದಲಾವಣೆ ಆದೀತು. ತಾಯಿ ಆರೋಗ್ಯ ನಿರ್ಲಕ್ಷಿಸಬೇಡಿ.

ಕುಂಭ: ಸ್ಥಿರಾಸ್ತಿ ಪ್ರಾಪ್ತವಾಗುವ ಯೋಗ ಇದೆ. ಭೂ ಖರೀದಿಗೆ ಯೋಗ್ಯ ದಿನ. ವಿದೇಶ ಪ್ರಯಾಣದ ಅವಕಾಶ. ಕುಟುಂಬದಲ್ಲಿ ಸಂತಸ.

ಮೀನ: ಬೆಲೆಬಾಳುವ ವಸ್ತು ಕಳೆದುಕೊಳ್ಳುವ ಸಾಧ್ಯತೆ. ಮಿತ್ರರೊಂದಿಗೆ ಮನಸ್ತಾಪ ಆಗಬಹುದು. ಸಂಗಾತಿಯಿಂದ ಸೂಕ್ತ ಸಲಹೆ.

Edited By : Nirmala Aralikatti
PublicNext

PublicNext

17/08/2021 07:13 am

Cinque Terre

20.12 K

Cinque Terre

0