ಮೇಷ: ಪತ್ನಿಯೊಂದಿಗೆ ಸಮಸ್ಯೆಗಳನ್ನ ಹಂಚಿಕೊಳ್ಳಿ. ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗಳಿಂದ ಶುಭಸುದ್ದಿ.
ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಗಳನ್ನು ಮಾತುಕತೆಯಿಂದ ಬಗೆಹರಿಸಿ ಕೊಳ್ಳಿ. ಬಂಧುವರ್ಗದಲ್ಲಿ ವಿರಸ.
ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಿ. ಅತಿಥಿ ಸತ್ಕಾರದಿಂದ ಸಮಾಧಾನ. ದಿನಾಂತ್ಯದಲ್ಲಿ ಶುಭ ಸುದ್ದಿ.
ಕಟಕ: ಬಹಳ ದಿನಗಳಿಂದ ನಿರೀಕ್ಷೆಯಲ್ಲಿ ಇದ್ದ ಭೂಮಿ ಖರೀದಿಗೆ ಚಾಲನೆ. ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೇಟಿ.
ಸಿಂಹ: ಸಹೋದರಿ ಮನೆಯಲ್ಲಿ ಭೋಜನ. ಸಹೋದರರೊಂದಿಗೆ ತಾಳ್ಮೆಯಿಂದಿರಿ. ಜವಾಬ್ದಾರಿಯುತ ಕೆಲಸದ ಹೊಣೆ.
ಕನ್ಯಾ: ಮಹತ್ವದ ನಿರ್ಣಯ ತೆಗೆದುಕೊಳ್ಳುವಲ್ಲಿ ಗೊಂದಲ. ನಿಮ್ಮ ಮಾತಿನಿಂದ ಶತ್ರುಗಳು ಸೃಷ್ಟಿ ಆಗುತ್ತಾರೆ ಜೋಕೆ.
ತುಲಾ: ಕಾರ್ಯಕ್ಕೆ ವಿಘ್ನ. ಆದರೆ ನಿಮ್ಮ ಕಲೆಯ ಅನಾವರಣಕ್ಕೆ ಉತ್ತಮ ಅವಕಾಶವಿದೆ. ಸಂಜೆಯ ವೇಳೆಗೆ ಹಿತೈಷಿಗಳ ಭೆೇಟಿ.
ವೃಶ್ಚಿಕ: ಕೆಲಸದಲ್ಲಿ ಚುರುಕಿತನದ ಕೊರತೆಯಿಂದ ವೇಗವಿಲ್ಲ. ಸೋಮಾರಿತನ ಬಿಟ್ಟರೆ ಉತ್ತಮ ಭವಿಷ್ಯ. ಅಕ್ಕನಿಂದ ಸಾಂತ್ವನ.
ಧನಸ್ಸು: ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯರ ಸಲಹೆ ಮರೆಯಬೇಡಿ. ಉತ್ತಮ ಅನ್ನಪಾನ. ದಿನಾಂತ್ಯದಲ್ಲಿ್ಲ ಸಂತಸ ಕಾದಿದೆ.
ಮಕರ: ಪಂಚಗ್ರಹ ಯೋಗದಲ್ಲಿದ್ದೀರಿ. ಹೀಗಾಗಿ ಗೊಂದಲಗಳಾಗುವುದು ಸಹಜ. ಧೃತಿಗೆಡಬೇಡಿ. ಈಶ್ವರನ ಆರಾಧಿಸಿ.
ಕುಂಭ: ಮನಸ್ಸಿಗೆ ಕ್ಲೇಶ ಉಂಟಾಗಬಹುದು. ಮನೆಯಲ್ಲಿ ಅವಮಾನ ಎದುರಿಸುವಂತಾಗುತ್ತದೆ. ನಟನಾ ವೃತ್ತಿಯ ವಿಪುಲ ಅವಕಾಶ.
ಮೀನ : ಸಾಮಾಜಿಕವಾಗಿ ತೊಡಗಿಸಿಕೊಳ್ಳಿ, ಮನಸ್ಸಿಗೆ ಸಮಾಧಾನ ಸಿಗುತ್ತದೆ. ಖರೀದಿಗೆ ಹೋದಾಗ ವಿಶೇಷ ವಸ್ತು ದೊರೆತು ಸಂತಸ.
PublicNext
06/02/2021 07:18 am