ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 22.1.2021

ಮೇಷ: ಅನಪೇಕ್ಷಿತ ಜನರಿಂದ ದಿನದ ಬಹುಭಾಗವಿಡೀ ಕಿರಿಕಿರಿ ಉಂಟಾಗಬಹುದು. ಆತ್ಮವಿಶ್ವಾಸವಿರಲಿ. ಇದರಿಂದ ಸಂತಸಪಡುವಿರಿ.

ವೃಷಭ: ನಿಮ್ಮ ಅತಿಯಾದ ಮಾತುಗಳು ವಿಮರ್ಶೆಗೆ ಒಳಪಡಬಹುದು. ನಿಮ್ಮನ್ನು ತಪ್ಪುಗಾರರು ಎನ್ನುವವರಿಂದ ದೂರವಿರಿ.

ಮಿಥುನ: ಸಂಕಲ್ಪಿತ ಕಾರ್ಯಗಳಲ್ಲಿ ಸಿದ್ಧಿ ದೊರೆಯಲಿದೆ. ಸಿಗಬಹುದಾದ ಲಾಭ ಕಡಿಮೆಯಾದರೂ ವಾಮಮಾರ್ಗ ಹಿಡಿಯಬೇಡಿ.

ಕಟಕ: ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಠಿಸಿ. ವ್ಯಥೆ ಕೊನೆಗೊಳ್ಳಲಿದೆ.

ಸಿಂಹ: ಸಾಗುವ ದಾರಿ ದೂರದಲ್ಲಿದೆ ಎಂದು ನಿರಾಸೆ ಮೂಡಬಹುದು. ಚಿಂತೆ ಬಿಟ್ಟು ಮುನ್ನಡೆದರೆ ಗೆಲುವಾಗಲಿದೆ.

ಕನ್ಯಾ: ಆರೋಗ್ಯದಲ್ಲಿ ವ್ಯತ್ಯಯ ಸಂಭವಿಸಬಹುದು. ನಾಲಗೆ ರುಚಿ ನಿಯಂತ್ರಿಸಿದರೆ ಆದಷ್ಟು ಬೇಗ ಚೇತರಿಕೆ ಹೊಂದಲಿದ್ದೀರಿ.

ತುಲಾ: ದಾರಿ ತಪ್ಪಿಸುವ ಜನರು ಭೇಟಿಯಾಗುತ್ತಾರೆ. ನಿಮ್ಮ ಸತ್ಯದ ನಡೆಗೆ ಜಯ ಸಿಗಲಿದ್ದರೂ ದುಷ್ಟರ ಬಗ್ಗೆ ಸ್ವಲ್ಪ ಎಚ್ಚರವಾಗಿರಿ.

ವೃಶ್ಚಿಕ: ನಿಮ್ಮ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಡುವಂತಹ ಮಹನೀಯರು ಸಿಗಲಿದ್ದಾರೆ. ಸಹಜ ಸಿದ್ಧಿಯೇ ಲಭ್ಯ.

ಧನಸ್ಸು: ತಿಳಿದಷ್ಟು ಸುಲಭವಾಗಿ ಸರ್ಕಾರಿ ಕೆಲಸಗಳು ಕೈಗೂಡಲಾರವು. ಸತತ ಪ್ರಯತ್ನದಿಂದ ಕಾರ್ಯಗಳಲ್ಲಿ ಜಯವಿದೆ.

ಮಕರ: ಹಳೆಯ ತಗಾದೆಯೊಂದಕ್ಕೆ ಮುಕ್ತಿ ದೊರೆತು ಲಾಭದ ದಾರಿ ತೆರೆದುಕೊಳ್ಳಲಿದೆ. ಶ್ರೀದೇವಿ ಮಹಾಲಕ್ಷ್ಮೀ ಸ್ತೋತ್ರ ಪಠಿಸಿ.

ಕುಂಭ: ನಡೆದಷ್ಟೂ ದಾರಿ ಇದೆ ಎಂದು ನಿಮಗೆ ಗೊತ್ತು. ನಿಮ್ಮ ಅದೃಷ್ಟದ ಅಮೂಲ್ಯ ಕೋಶವನ್ನು ಶೀಘ್ರವೇ ಅರಿತುಕೊಳ್ಳಲಿದ್ದೀರಿ.

ಮೀನ : ಮನದ ತುಂಬ ಗೊಂದಲ ತುಂಬಿಕೊಳ್ಳಬಹುದು. ನಿಮ್ಮೊಳಗಿನ ಕಷ್ಟಗಳನ್ನು ಸಜ್ಜನರ ಬಳಿ ಹೇಳಿದರೆ ಕಿರಿಕಿರಿಗೆ ಬೇಗ ಮುಕ್ತಿ ಸಿಗಲಿದೆ.

Edited By : Nirmala Aralikatti
PublicNext

PublicNext

22/01/2021 07:49 am

Cinque Terre

42 K

Cinque Terre

0