ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 11.01.2021

ಮೇಷ: ಆಪ್ತ ಜನರು ಎನಿಸಿಕೊಂಡವರೇ ನೆರವಾಗಲು ಬಂದುನಿಲ್ಲುವುದು ಅನುಮಾನವಾಗಿದೆ. ಆದರೂ ಕೂಡ ಇತರರ ಬೆಂಬಲ ಲಭ್ಯ.

ವೃಷಭ: ದಾರಿಯೇ ಕಾಣುತ್ತಿಲ್ಲ ಎಂಬಂತಹ ನಿಷ್ಕ್ರಿಯತೆ ಬೇಡ. ಕ್ರಿಯಾಶೀಲತೆಯ ಅಪಾರ ಶಕ್ತಿಯನ್ನು ನಂಬಿಕೊಂಡು ಮುಂದಕ್ಕೆ ಸಾಗಿ.

ಮಿಥುನ: ಸಿದ್ಧಿದಾಯಕಿಯಾದ ದುರ್ಗಾದೇವಿಯನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸಿ. ಮಾನಸಿಕವಾದ ತಳಮಳ ಪರಿಹಾರವಾಗಲಿದೆ.

ಕಟಕ: ನಿಮ್ಮ ಪ್ರಾಮಾಣಿಕತೆ ಗುಣದಿಂದಾಗಿ ಜನರ ಮೆಚ್ಚುಗೆ ಗಳಿಸುವಿರಿ. ಇದು ಮನೆಯಲ್ಲಿ ಸಂತಸದ ಅನುಭವಕ್ಕೆ ದಾರಿ ಮಾಡಲಿದೆ.

ಸಿಂಹ : ಎಲ್ಲ ಬಾರಿಯೂ ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲೇ ಇರಲಾರವು. ಆದರೂ ಕೂಡ ಇಂದು ಚಂದ್ರದೇವನಿಂದಾಗಿ

ಲಾಭವಿದೆ.

ಕನ್ಯಾ: ಅಧಿಕ ಪರಿಶ್ರಮಪಡುವುದರಿದಿಂದಲೇ ನಿಮ್ಮ ಇಚ್ಛಿತ ಯೋಜನೆಗಳಿಗೆ ಸಾಕಾರದ ಸಿದ್ಧಿಯನ್ನು ಪಡೆಯಲು ಸಾಧ್ಯವಾಗಲಿದೆ.

ತುಲಾ: ವಿದ್ಯಾರ್ಥಿಗಳಾಗಿದ್ದಲ್ಲಿ ಉನ್ನತ ವಿದ್ಯಾಭ್ಯಾಸದ ಕನಸು ಈಡೇರಲು ಆಕಸ್ಮಿಕವಾದ ಸಹಾಯ ಸಹಕಾರಗಳು ದೊರೆಯುತ್ತವೆ.

ವೃಶ್ಚಿಕ: ಉತ್ತಮವಾದ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದೀರಿ. ಈ ಯತ್ನಗಳಲ್ಲಿ ಸೋಲು ಉಂಟಾಗದ ಸಿದ್ಧಿ ಹೊಂದುವಿರಿ.

ಧನುಸ್ಸು: ತೊಂದರೆಗಳನ್ನು ದೂರ ಮಾಡಿ ಸಫಲತೆಯು ಕೈಗೆ ಬಂದೊದಗಲು ಶ್ರೀ ಮಹಾಗಣಪತಿಯನ್ನು ಗರಿಕೆಗಳಿಂದ ಆರಾಧನೆ

ಮಾಡಿ.

ಮಕರ : ಮಕ್ಕಳಿಂದ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆಯುವುದಕ್ಕಾಗಿ ಈ ಕಾಲಘಟ್ಟವೇ ನಿಮ್ಮನ್ನು ಕೈಹಿಡಿದು ಮುಂದೆ ನಡೆಸಲಿದೆ.

ಕುಂಭ : ಪರಿಪೂರ್ಣವಾದ ನೆಮ್ಮದಿಯನ್ನು ಇಚ್ಛಿಸಿ ಮುಂದಿನ ಯೋಜನೆಗಳನ್ನು ರೂಪಿಸಿದರೆ ಗೆಲುವು, ಪ್ರಶಂಸೆಗಳು ಸಿಗಲಿವೆ.

ಮೀನ : ಅಪ್ರತಿಮ ಜನಸಂಘಟನಾ ಶಕ್ತಿಯನ್ನು ಹೊಂದಿದ ನಿಮಗೆ ಅದನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸದ್ಯದಲ್ಲಿಯೇ

ಕೂಡಿಬರಲಿದೆ.

Edited By : Nirmala Aralikatti
PublicNext

PublicNext

11/01/2021 07:19 am

Cinque Terre

23.45 K

Cinque Terre

1