ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 07.01.2021

ಮೇಷ: ಹಳೆಯ ವಿವಾದಗಳು ಬಳಲಿಕೆ ತರಿಸುತ್ತಿವೆ. ಆದರೆ ಶಾಂತಿಯಿಂದಿರಿ. ಮಾತುಕತೆಗೂ ಅವಕಾಶ ಲಭ್ಯವಾಗಲಿದೆ.

ವೃಷಭ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಇದರಿಂದ ಪದೋನ್ನತಿಗೆ ಕೂಡ ದಾರಿ ನಿರಾಳವಾಗಿದೆ.

ಮಿಥುನ: ಆಕಸ್ಮಿಕವಾದ ಆಘಾತ ಎದುರಾದೀತು. ಆದರೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದಿರಿ. ಅಂತಿಮ ಗೆಲುವು ಮಾತ್ರ ನಿಮಗೇ ಸಿಗಲಿದೆ.

ಕಟಕ: ನಿಮ್ಮ ಮಾತಿಗೆ ಬೆಲೆ ಇರುವುದು ನಿಜವೇ ಆದರೂ ಸ್ವೀಕರಿಸುವ ಜನ ಒಂದೇ ರೀತಿ ಇರಲಾರರು ಎಂದು ಅರಿತಿರಿ.

ಸಿಂಹ : ಯಾರು ಏನೆಂದರೂ ನಾನು ಹೀಗೆಯೇ ಇರುವುದು ಎಂಬ ನಿಲುವು ಬಿಡಿ. ಇಲ್ಲವಾದರೆ ತೊಂದರೆ ಎದುರಾದೀತು.

ಕನ್ಯಾ: ಹತ್ತಿರದ ಜನರೇ ವಿನಾಕಾರಣ ಜಗಳ ಮಾಡುವುದಕ್ಕೆ ಮುಂದಾಗಬಹುದು. ಬೇಸರಪಡದಿರಿ. ತಾಳ್ಮೆ ಅಗತ್ಯ.

ತುಲಾ: ದೂರದ ಬಂಧುಗಳಿಂದ ಕೊಂಕು ಮಾತುಗಳು ಎದುರಾಗಬಹುದು. ಪ್ರತಿಕ್ರಿಯಿಸದೆ ನಸುನಕ್ಕು ಸುಮ್ಮನಿದ್ದುಬಿಡಿ, ಸಾಕು.

ವೃಶ್ಚಿಕ: ಗುರಿಯ ಹಿಂದೆ ಹೊರಟಿರುವಂತಹ ನೀವು ಸೋಲಿಗೆ ಅಂಜಬೇಡಿ. ಮುನ್ನುಗ್ಗಿ ನಡೆದರೆ ನಿಶ್ಚಿತವಾಗಿ ಯಶಸ್ಸು ಲಭ್ಯ.

ಧನುಸ್ಸು: ಎಷ್ಟೋ ಥರದ ಜನರನ್ನು ನೋಡಿದ್ದೀರಿ. ಆದರೆ ಇಂದು ಸಿಗುವವರು ಎಂದಿಗಿಂತ ಭಿನ್ನ ಎಂಬುದು ನೆನಪಿರಲಿ.

ಮಕರ : ಹಿರಿಯರ ಆರೋಗ್ಯದಲ್ಲಿ ತುಸು ವ್ಯತ್ಯಾಸ ಉಂಟಾಗಬಹುದು. ಜಗನ್ಮಾತೆಯಾದ ಅಂಬಾಭವಾನಿಯನ್ನು ಸ್ಮರಿಸಿ.

ಕುಂಭ: ಬರಬೇಕಾದ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಿ. ಶ್ರೀಹರಿಯ ಅನುಗ್ರಹವಿದೆ. ನಿರಾಳತೆಯಿಂದಲೇ ಇರಿ.

ಮೀನ : ಥಟ್ಟನೆ ನಿರ್ಣಯ ಮಾಡುವ ಅವಸರ ಬೇಡ. ಮಹತ್ವದ ಬೇರೊಂದು ಜವಾಬ್ದಾರಿ ಹೊರಬೇಕಾದ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

07/01/2021 08:00 am

Cinque Terre

44.01 K

Cinque Terre

1