ಮೇಷ: ಬಹಳ ಆತ್ಮೀಯರಾದ ಮಿತ್ರರ ಜತೆಯಲ್ಲಿಯೇ ಮನಸ್ತಾಪಗಳು ಬರಬಹುದು. ಆದರೆ ಜಗಳ ಮಾಡಬೇಡಿ. ತಾಳ್ಮೆಯಿಂದ ಸಿದ್ಧಿ.
ವೃಷಭ: ಚಿತ್ರರಂಗದಲ್ಲಿ ಮಿಂಚಬೇಕೆಂಬ ಆಸೆಯು ತಪ್ಪೇನಲ್ಲ. ಆದರೆ ವಿನೂತನವಾದ ರೀತಿಯಲ್ಲಿ ಅದನ್ನು ಗಮನಿಸಿದರೆ ಸೂಕ್ತ.
ಮಿಥುನ: ಯಾರನ್ನೂ ನಂಬದೆ ಇರುವುದು ಸರಿಯಲ್ಲ. ನಂಬಿ ಕೆಟ್ಟವರಿಲ್ಲ ಎಂಬ ಮಾತಿದೆ. ನಂಬುವುದಕ್ಕೆ ಮಾತ್ರ ಅವಸರ ಮಾಡದಿರಿ.
ಕಟಕ: ಸ್ನಾನದ ಬಳಿಕ ಗರಿಕೆಗಳಿಂದ ಗಣಪತಿಯನ್ನು ಆರಾಧಿಸಿ. ಮನಸ್ಸಿನಲ್ಲಿರುವ ನಾನಾ ರೀತಿಯ ಚಿಂತೆಗಳು ದೂರವಾಗಲಿವೆ.
ಸಿಂಹ: ಮತ್ಸ್ಯೊತ್ಪನ್ನ ವ್ಯಾಪಾರಸ್ಥರಿಗೆ ಅನೇಕ ಥರದ ಲಾಭಕ್ಕೆ ಅವಕಾಶಗಳು ತೆರೆಯಲಿವೆ. ಜಲದುರ್ಗಾ ಆರಾಧನೆ ಮಾಡಿದರೆ ಉತ್ತಮ.
ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ತಲ್ಲಣಗಳನ್ನು ಅನುಭವಿಸುತ್ತೀರಿ. ಭಕ್ತಿಯಿಂದ ಕುಲದೇವರನ್ನು ಧ್ಯಾನಿಸಿ.
ತುಲಾ: ಮಾಯಾಮೃಗದ ಹಿಂದೆ ಬಿದ್ದಿದ್ದೀರಿ. ಹೀಗಾಗಿ ತರ್ಕವಿರದೆಯೇ ಮುನ್ನುಗ್ಗಲು ಹೊರಟರೆ ನಿರಾಶೆಯನ್ನೇ ಅನುಭವಿಸುವಿರಿ.
ವೃಶ್ಚಿಕ: ಆಯಾಸವಷ್ಟೇ ಆಗಿದೆ, ಪರಿಶ್ರಮಕ್ಕೆ ತಕ್ಕಂತಹ ಫಲವಿಲ್ಲ ಎಂಬ ಮಾತುಗಳನ್ನು ಬಿಡಿ. ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.
ಧನುಸ್ಸು: ಹೊಸಬರೊಬ್ಬರ ಬೆಂಬಲ ಸಿಗಲಿದೆ. ಆದರೆ ಯಾವುದೇ ಕಾರಣಗಳೂ ಇಲ್ಲದೆ ಯಾರನ್ನೂ ವಿರೋಧಿಸಲು ಮುಂದಾಗದಿರಿ.
ಮಕರ : ಎಲ್ಲೋ ಇರುವ ಗೆಳೆಯರನ್ನು ಆಕಸ್ಮಿಕವಾಗಿ ಭೇಟಿಯಾಗಲಿದ್ದೀರಿ. ನಿಮ್ಮ ಯೋಜನೆಗಳಿಗೆ ಹೊಸದೇ ಆದ ತಿರುವು ಸಿಗಲಿದೆ.
ಕುಂಭ : ಪರಿಣತರಾದ ತಜ್ಞರನ್ನು ಭೇಟಿ ಮಾಡಿ ವಿನೂತನ ಯೋಜನೆಗಳ ಬಗ್ಗೆ ರ್ಚಚಿಸುವ ಅವಕಾಶವಿದೆ. ಆರೋಗ್ಯದಲ್ಲೂ ಚೇತರಿಕೆಯಿದೆ.
ಮೀನ : ವೃತ್ತಿಜೀವನದ ಬಗ್ಗೆ ಬಾಳಸಂಗಾತಿಯಿಂದ ವಿಶಿಷ್ಟ ಸಲಹೆ ಸ್ವೀಕರಿಸುವಿರಿ. ಮನೆಯಲ್ಲಿ ಸಂತಸದ ವಾತಾವರಣವೇ ತುಂಬಿರಲಿದೆ.
PublicNext
06/01/2021 07:29 am