ಮೇಷ: ಯೋಗ್ಯರಲ್ಲದವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವಂತಹ ಆತುರದಲ್ಲಿದ್ದೀರಿ. ಆದರೆ ಅದು ಕೆಡುಕಿಗೆ ಕಾರಣವಾದೀತು.
ವೃಷಭ: ಕೆಲವರು ಹರಳುಗಳನ್ನು ಖರೀದಿ ಮಾಡಲು ಮುಂದಾಗಬಹುದು. ತೊಂದರೆ ಇಲ್ಲ. ಆದರೆ ಪರಿಣತ ಜನರನ್ನು ಸಂರ್ಪಸಿ.
ಮಿಥುನ: ಹೃದಯದ ಆರೋಗ್ಯದ ಬಗ್ಗೆ ಅಲಕ್ಷಿಸುತ್ತಿದ್ದೀರಿ. ಹಾಗೆ ನಿರ್ಲಕ್ಷ್ಯ ತೋರಿಸದೆಯೇ ಯೋಗ್ಯರಾದ ವೈದ್ಯರ ಸಲಹೆಗಳನ್ನು ಸ್ವೀಕರಿಸಿ.
ಕಟಕ: ಸದ್ಯಕ್ಕೆ ಮಾನಸಿಕ ದೃಢತೆಯೇ ಮುಖ್ಯವಾಗಿದೆ. ಅದರಿಂದ ಹೊಸ ಲಾಭದಾಯಕ ಕಾರ್ಯಕ್ಷಮತೆಗೆ ಸಿದ್ಧಿಯ ಸಾಫಲ್ಯ ಲಭಿಸುತ್ತದೆ.
ಸಿಂಹ: ಭಾವನಾತ್ಮಕ ಸ್ಪಂದನೆಗಳು ತೀವ್ರವಾಗಿಲ್ಲದಿದ್ದರೆ ಉತ್ತಮ. ಇಲ್ಲದಿದ್ದರೆ ವ್ಯಾವಹಾರಿಕ ಸೋಲುಗಳು ಮತ್ತೆ ಮತ್ತೆ ಕಾಡಬಹುದಾಗಿದೆ.
ಕನ್ಯಾ: ದುರಾಸೆಗಳಿಂದ ಕೆಲಸಗಳನ್ನು ಪೂರೈಸಿಕೊಳ್ಳಲು ಮುಂದಾಗದಿರಿ. ಸಾಧ್ಯವಾದಷ್ಟು ಸೌಹಾರ್ದವಾದ ನಡತೆಯಿಂದಲೇ ನೆಮ್ಮದಿ ಇದೆ.
ತುಲಾ: ತಪ್ಪುತಪ್ಪಾದ ಮಾಹಿತಿ ನೀಡುವಂತಹ ಜನರೂ ಇದ್ದೇ ಇರುತ್ತಾರೆ. ಅಂತಹ ವ್ಯಕ್ತಿಗಳ ಬಗ್ಗೆ ಸ್ವಲ್ಪ ಎಚ್ಚರ, ಕಠಿಣ ಭಾವನೆ ಬೇಕು.
ವೃಶ್ಚಿಕ: ಹೆಚ್ಚುವರಿಯಾದ ಲಾಭವನ್ನು ವೃಥಾ ಖರ್ಚು ಮಾಡಬೇಕು ಎನಿಸಬಹುದು. ಸುರಕ್ಷಿತವಾಗಿ ತೊಡಗಿಸಿದರೆ ಲಾಭವಾಗಲಿದೆ.
ಧನುಸ್ಸು: ಬಾಳಸಂಗಾತಿಯ ಆರೋಗ್ಯದ ಬಗೆಗೆ ಕಾಳಜಿ ತೋರಿಸಬೇಕಾಗುತ್ತದೆ. ಕುಟುಂಬ ವೈದ್ಯರ ಬಳಿ ಬೇಗ ತೋರಿಸಿದರೆ ಕ್ಷೇಮವಿದೆ.
ಮಕರ: ಕೆಲಸಗಳ ಮಧ್ಯೆ ಕುಟುಂಬದ ಜವಾಬ್ದಾರಿಗಳ ನಿರ್ವಹಣೆಯನ್ನು ತಪ್ಪಿ ಕೂಡ ಮರೆಯದಿರಿ. ಮನಸ್ತಾಪಗಳಿಂದ ದೂರವಿರಿ.
ಕುಂಭ: ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಮಂಜಿನಂತೆ ಕರಗಲಿದೆ. ಭಕ್ತಿಯಿಂದ ಕುಲದೇವರನ್ನು ಪ್ರಾರ್ಥಿಸಿಕೊಳ್ಳಿ.
ಮೀನ: ಹೊಸ ಹೂಡಿಕೆಗಳು ಲಾಭಕರವಾಗಿರುತ್ತವೆ ಎಂಬುದೇನೋ ಸತ್ಯ. ಆದರೆ ಒಮ್ಮೆಲೇ ದೊಡ್ಡ ಮಟ್ಟದ ಬಂಡವಾಳ ಹಾಕದಿರಿ.
PublicNext
04/01/2021 07:18 am