ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಗತ್ತಿಗೆ ಮತ್ತೊಂದು ವೈರಸ್‌ ಆತಂಕ, ಭಾರತದಲ್ಲಿ ತಾಪಮಾನ ಏರಿಕೆ: ಬಾಬಾ ವಂಗಾ ಭವಿಷ್ಯ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು ಸೇರಿದಂತೆ ಹತ್ತು ಹಲವು ಘಟನೆಗಳನ್ನು ಬಹಳ ಮುಂಚೆಯೇ ನುಡಿದಿದ್ದರು 'ಬಾಬಾ ವಂಗಾ'.

ಬಾಲ್ಕನ್ ಪ್ರದೇಶದ ನಾಸ್ಟ್ರಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳಲ್ಲಿ ಶೇ 85ರಷ್ಟು ಭವಿಷ್ಯವಾಣಿ ನಿಜವಾಗಿದೆ. 1996ರಲ್ಲಿ ಬಾಬಾ ವಂಗಾ ಸಾವಿಗೀಡಾಗಿದ್ದರೂ ಆಕೆ ನುಡಿದ ಭವಿಷ್ಯವಾಣಿಗಳು ನಿಜವಾಗುತ್ತವೆ ಎಂದು ಬಹುತೇಕ ಜನರು ಈಗಲೂ ನಂಬುತ್ತಿದ್ದಾರೆ. ಬಾಬಾ ವಂಗಾ ಅವರ ಮುಂದಿನ ಭವಿಷ್ಯವಾಣಿ ಜಗತ್ತಿಗೆ ಕೆಟ್ಟದ್ದು ಸಂಭವಿಸುತ್ತದೆ ಎಂಬುದರ ಬಗ್ಗೆಯಾಗಿದೆ.

ಅವರ ಭವಿಷ್ಯವಾಣಿಯ ಪ್ರಕಾರ, 2022ರಲ್ಲಿ ಜಗತ್ತಿಗೆ ಮತ್ತೊಂದು ಅಪಾಯ ಕಾದಿದೆ. ಕೋವಿಡ್-19ನಿಂದಾಗಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಂಡು, ಈಗಷ್ಟೇ ಜನರು ಚೇತರಿಕೆಯ ಹಾದಿಯಲ್ಲಿದ್ದಾರೆ. ಹೆಚ್ಚು ಸಮಯ ಮನೆ ಅಥವಾ ಇದ್ದಲ್ಲಿಯೇ ಕಳೆದ ಜನರು, ಗ್ಯಾಜೆಟ್‌ಗಳ ವರ್ಚುವಲ್‌ ಜಗತ್ತಿಗೆ ಹಿಂದಿಗಿಂತಲೂ ಆಪ್ತರಾಗಿದ್ದಾರೆ. ವರ್ಚುವಲ್‌ ರಿಯಾಲಿಟಿಯು ಈಗ ಅಧಿಪತ್ಯ ಸಾಧಿಸಿದೆ. ಈ ಕಾಲಘಟ್ಟದಲ್ಲಿ ಮತ್ತೊಂದು ವೈರಸ್‌ ವ್ಯಾಪಿಸುವ ಕುರಿತು ಬಾಬಾ ವಂಗಾ ಅವರ ಅಂದಾಜಿದೆ.

ಈಕೆ ಇನ್ನೊಂದು ಸಾಂಕ್ರಾಮಿಕ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಹೆಪ್ಪುಗಟ್ಟಿದ ವೈರಸ್​​ನಿಂದ ಈ ರೋಗ ಉಂಟಾಗಲಿದ್ದು ಇದು ಸೈಬಿರಿಯಾದಲ್ಲಿ ಪತ್ತೆಯಾಗುತ್ತದೆ ಎಂದಿದ್ದರು. 2021 ಜುಲೈ ತಿಂಗಳಲ್ಲಿ ಸಂಶೋಧಕರ ತಂಡ ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಪ್ರಾಚೀನ ವೈರಸ್​​ಗಳಿಂದ ಹೆಪ್ಪುಗಟ್ಟಿದ ವೈರಸ್​​ಗಳನ್ನು ಪತ್ತೆ ಮಾಡಿದ್ದು, ಇವುಗಳು ಹಿಂದೆಂದೂ ಪತ್ತೆಯಾಗದವುಗಳಾಗಿವೆ. 2015ರಲ್ಲಿ ಸಂಗ್ರಹಿಸಲಾದ ಮಂಜುಗಡ್ಡೆಗಳಲ್ಲಿ ಕನಿಷ್ಠ ಪಕ್ಷ 14,400 ವರ್ಷಗಳ ಹಿಂದೆ ಹೆಪ್ಪುಗಟ್ಟಿದ ವೈರಸ್ ಗಳಾಗಿವೆ ಇವು ಎಂದು ಸಂಶೋಧಕರು ಮನಗಂಡಿದ್ದಾರೆ.

ಅವುಗಳ ವಿಶ್ಲೇಷಣೆಯಲ್ಲಿ 33 ರೀತಿಯ ವೈರಸ್‌ನ ಆನುವಂಶಿಕ ಸಂಕೇತಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ ನಾಲ್ಕು ಆನುವಂಶಿಕ ಸಂಕೇತಗಳ ವೈರಸ್‌ ವಂಶವನ್ನು ಗುರುತಿಸಲಾಗಿದೆ. ಅವು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ ಮೇಲೆ ದಾಳಿ ಮಾಡುವಂಥವು. ಉಳಿದ 28 ವೈರಸ್‌ಗಳು ಈ ಹಿಂದೆಂದೂ ಪತ್ತೆಯಾಗದೆ ಇರುವಂಥವು.

ಜಗತ್ತಿನ ಹಲವು ನಗರಗಳಲ್ಲಿ (ಪೋರ್ಚುಗಲ್‌, ಇಟಲಿ) ನೀರಿನ ಕೊರತೆ ಎದುರಾಗುತ್ತದೆ ಹಾಗೂ ಅದು ರಾಜಕೀಯದ ಪರಿಣಾಮ ಬೀರುತ್ತದೆ. ಹಲವು ರಾಷ್ಟ್ರಗಳು ಪರಿರ್ಯಾಯ ವ್ಯವಸ್ಥೆಗಳ ಹುಡುಕಾಟಕ್ಕೆ ತೊಡಗುತ್ತವೆ. ಭೂಮಿಯ ಮೇಲಿನ ಜೀವಜಗತ್ತಿನ ಬಗ್ಗೆ ತಿಳಿಯಲು ಅನ್ಯಗ್ರಹ ಜೀವಿಗಳು ಪ್ರಯತ್ನಿಸುತ್ತವೆ ಎಂದು ಬಾಬಾ ವಂಗಾ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಉಷ್ಣಾಂಶವು 50 ಡಿಗ್ರಿ ಸೆಲ್ಸಿಯಸ್‌ನಷ್ಟು ಮುಟ್ಟುವ ಮೂಲಕ ಮಿಡತೆ ಕೀಟಗಳು ಬೆಳೆಯ ಮೇಲೆ ದಾಳಿ ನಡೆಸುತ್ತವೆ. ಅದರಿಂದಾಗಿ ಆಹಾರಕ್ಷಾಮ ಉಂಟಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗುತ್ತದೆ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಭೂಕಂಪಗಳು ಮತ್ತು ಸುನಾಮಿ ಸೃಷ್ಟಿಯಾಗುತ್ತವೆ.

ಅಂಗಾಂಗ ಕಸಿ ತಂತ್ರಜ್ಞಾನವು ಉನ್ನತ ಸ್ಥಿತಿಯನ್ನು ತಲುಪುವ ಮೂಲಕ 2046ರ ಹೊತ್ತಿಗೆ ಜನರು 100 ವರ್ಷಕ್ಕೂ ಹೆಚ್ಚು ಕಾಲ ಬದುಕುವಂತಾಗುತ್ತದೆ. 2100ರ ವೇಳೆಗೆ ಜಗತ್ತಿನಲ್ಲಿ ಕತ್ತಲೆಯ ದಿನಗಳು ಮಾಯವಾಗುತ್ತದೆ. ಕೃತಕ ಸೂರ್ಯನ ಬೆಳಕಿನ ಮೂಲಕ ಸದಾ ಬೆಳಕು ಪಡೆಯುವ ವ್ಯವಸ್ಥೆ ರೂಪುಗೊಳ್ಳುತ್ತದೆ.

Edited By : Vijay Kumar
PublicNext

PublicNext

19/07/2022 02:07 pm

Cinque Terre

21.44 K

Cinque Terre

1