ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ರಾಹುಗ್ರಸ್ತ ಚಂದ್ರಗ್ರಹಣ ಮಧ್ಯಾಹ್ನ 1.03ಕ್ಕೆ ಆರಂಭ

ನಾಳೆ 2020ರಲ್ಲಿ ಸಂಭವಿಸುತ್ತಿರುವ ಕೊನೆಯ ಚಂದ್ರಗ್ರಹಣ ಇದನ್ನು ಛಾಯಾ ಚಂದ್ರಗ್ರಹಣ ಅಂತಲೂ ಕರೆಯಲಾಗುತ್ತೆ.

ಈ ವರ್ಷದಲ್ಲಿ ಸಂಭವಿಸುತ್ತಿರುವ 4ನೇ ಚಂದ್ರಗ್ರಹಣ ಇದಾಗಿದೆ.

ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಅಡ್ಡ ಬರುವ ಖಗೋಳ ಪ್ರಕ್ರಿಯೆಯನ್ನೇ ಚಂದ್ರಗ್ರಹಣ ಎನ್ನಲಾಗುತ್ತೆ.

ಜ್ಯೋತಿಷ್ಯವಲಯದ ಪ್ರಕಾರ, ರಾಹು, ಚಂದ್ರನನ್ನು ಆವರಿಸುವ ಕಾರಣ ಇದನ್ನು ರಾಹುಗ್ರಸ್ತ ಚಂದ್ರಗ್ರಹಣ ಅಂತಾ ಹೇಳಲಾಗುತ್ತೆ.

ಈ ಖಗೋಳ ವಿದ್ಯಮಾನವು ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸುತ್ತಿದೆ.

ಚಂದ್ರಗ್ರಹಣವಾಗುವ ಸಮಯದಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುತ್ತೆ.

ಚಂದ್ರಗ್ರಹಣ ಗೋಚರ ಸಮಯ:

ಗ್ರಹಣ ಸ್ಪರ್ಶ ಕಾಲ- ಮಧ್ಯಾಹ್ನ 1.02

ಗ್ರಹಣ ಮಧ್ಯ ಕಾಲ- ಮಧ್ಯಾಹ್ನ 3.12

ಗ್ರಹಣ ಮೋಕ್ಷ ಕಾಲ- ಸಂಜೆ 5.20

ಈ ಚಂದ್ರಗ್ರಹಣ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳಲ್ಲಿ ಗೋಚರವಾಗಲಿದೆ. ಆದ್ರೆ ಈ ಚಂದ್ರಗ್ರಹಣ ಗೋಚರವಾಗುವ ಸಮಯದಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುತ್ತೆ.

ಹೀಗಾಗಿ ನಮ್ಮಲ್ಲಿ ಚಂದ್ರಗ್ರಹಣ ಆಚರಣೆಯ ಅವಶ್ಯಕತೆ ಇಲ್ಲ. ಆದ್ರೆ ಗ್ರಹಣದ ಪ್ರಭಾವ ಮಾತ್ರ ಇದ್ದೇ ಇರುತ್ತೆ ಎಂದು ಹೇಳಲಾಗುತ್ತಿದೆ.

ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ, ರಾಹುಗ್ರಸ್ತ ಚಂದ್ರಗ್ರಹಣದ ಪ್ರಭಾವದಿಂದಾಗಿ ಶೀತಗಾಳಿಯು ಹೆಚ್ಚಾಗುತ್ತೆ.

ಅದರಿಂದ ಜ್ವರಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳಲಿವೆ.

ಇದೇ ಸಮಯದಲ್ಲಿ ಕೊರೊನಾದ ಎರಡನೇ ಅಲೆಯ ಎಚ್ಚರಿಕೆಯ ಮಾತುಗಳು ಆತಂಕವನ್ನು ಸೃಷ್ಟಿಮಾಡಿವೆ.

Edited By : Nirmala Aralikatti
PublicNext

PublicNext

29/11/2020 07:23 am

Cinque Terre

92.77 K

Cinque Terre

2

ಸಂಬಂಧಿತ ಸುದ್ದಿ