ಮೇಷ : ಯಾವದೇ ಅಳುಕಿಲ್ಲದೇ ಜವಾಬ್ದಾರಿ ನಿಭಾಯಿಸುವಿರಿ. ಗುರಿ ಮುಟ್ಟಲು ಲೆಕ್ಕಾಚಾರ ಮಾಡುವಿರಿ. ಮಿತ್ರರ ಸಹಾಯದಿಂದ ಅನುಕೂಲವಾಗುವದು.
ವೃಷಭ : ಆಣ್ಣತಮ್ಮಂದಿರು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವರು. ಅಪೇಕ್ಷೆಗೆ ತಕ್ಕಂತೆ ಕಾರ್ಯ ಪೂರ್ಣಗೊಳಿಸುವಿರಿ. ಗೌರವ ಪ್ರಾಪ್ತಿಯಾಗುವದು. ದೂರಾಲೋಚನೆಯ ನಿರ್ಧಾರ ಇರುವದು.
ಮಿಥುನ : ಧಾರ್ಮಿಕ ಪ್ರವೃತ್ತಿ ಹೆಚ್ಚುವದು. ಮಾಡುವ ಎಲ್ಲ ಕಾರ್ಯಗಳಲ್ಲಿಯೂ ಯಶಸ್ಸು ದೊರೆಯುವದು. ಮನೆ ಕಟ್ಟುವ ಯೋಚನೆಗೆ ಪ್ರಾಶಸ್ಥ್ಯ ಕೊಡುವಿರಿ. ಹಣಕಾಸಿನ ಸೌಲಭ್ಯ ಒದಿಬರುವದು.
ಕರ್ಕ : ಸಂಪತ್ತು ವೃದ್ಧಿಯಾಗುವಂತಹ ವ್ಯವಹಾರ ಕೈಗೊಳ್ಳುವಿರಿ. ಕೃಷಿಕಾರ್ಯಗಳಲ್ಲಿ ಆಸಕ್ತಿ ತೋರಿಸುವಿರಿ. ಸಂಜೆವರೆಗೆ ಉತ್ತಮ ಲಾಭದೊರೆತು ಸಂತಸ ಮೂಡುವದು.
ಸಿಂಹ : ತಾಳ್ಮೆಯಿಂದ ನಿರ್ಣಯ ತೆಗೆದುಕೊಳ್ಳುವಿರಿ. ಸಮತೋಲಿತ ಜೀವನ ನಡೆಸುವಿರಿ. ಮನಸ್ಸಿಗೆ ಬಂದAತೆಯೇ ನಡೆಯುವ ಧೋರಣೆ ಇರುವದು. ಹಠಮಾರಿತನದಿಂದ ತೊಂದರೆ.
ಕನ್ಯಾ : ಮಂಗಲ ಕಾರ್ಯಕ್ಕೆ ತರಾತುರಿಯ ಸಿದ್ಧತೆ ನಡೆಸುವಿರಿ. ಕಾರ್ಯಯಶ. ಅಪೇಕ್ಷಿತ ಲಾಭವಾಗುವದು. ಗುರಬಲದಿಂದ ಮುಂದೆ ಸಾಗಿರಿ. ಹಿರಿಯರ ಮಾತು ಕೇಳಿ.
ತುಲಾ : ನೂತನ ಮೂಲದಿಂದ ಆದಾಯ ಪ್ರಾಪ್ತಿಯಾಗುವದು. ಸತ್ಕಾರಕೂಟದಿಂದ ಹೊಸ ಚೈತನ್ಯ ಮೂಡುವದು. ಆದಾಯದ ಇನ್ನಷ್ಟು ಮಾರ್ಗೊಪಾಯವನ್ನು ಹುಡುಕುವಿರಿ.
ವೃಶ್ಚಿಕ : ಪರರ ಸಲಹೆ ಸ್ವೀಕರಿಸುವ ಸೌಜನ್ಯ ತೋರುವಿರಿ. ನಿಯಮಿತ ಖರ್ಚುವೆಚ್ಚಗಳು ಇರುವವು. ಅಂದುಕೊಂಡಷ್ಟು ಲಾಭ ದೊರೆಯಲಾರದು. ಮನೋಚಿಂತೆ.
ಧನು : ಧೈರ್ಯದಿಂದ ಮಾಡಿದ ಕೆಲಸ ಪೂರ್ಣವಾಗುವದು. ನಿರಾಳ ಭಾವನೆ ಇರುವದು. ಕೋರ್ಟ ಕಛೇರಿಗಾಗಿ ನಡೆಸಿದ ಹೋರಾಟಕ್ಕೆ ಜಯ ದೊರೆಯುವ ಮುನ್ಸೂಚನೆ ಇದೆ.
ಮಕರ : ಬುದ್ಧಿಹೀನರ ಸಹವಾಸದಿಂದ ಧನಹಾನಿ. ಅಪಯಶಸ್ಸು. ಇರುವ ಸವಲತ್ತುಗಳ ಉಪಯೋಗ ಮಾಡುವಿರಿ. ಅತಿಯಾದ ಭರವಸೆಗೆ ಮಾರು ಹೋಗುವಿರಿ.
ಕುಂಭ : ಚಮತ್ಕಾರದಂತೆ ಸಾಲ ಮರುಪಾವತಿಯಾಗುವದು. ಹೆಚ್ಚಿನ ಹೊಣೆಗಾರಿಕೆ ಬರುವ ಸಧ್ಯತೆ ಇದೆ. ಇತರರ ಮನಸ್ಸು ನೋಯಿಸದಂತೆ ವರ್ತಿಸುವಿರಿ.
ಮೀನ : ವ್ಯಥಾ ಚಿಂತೆ ಇರುವದು. ಅಸಾಧ್ಯವಾದದ್ದು ಎಂದು ತಿಳಿದರೂ ಪ್ರಯತ್ನಿಸುವಿರಿ. ತೆಗಳಿಕೆಗೆ ಸೊಪ್ಪು ಹಾಕದೇ ಮುನ್ನುಗ್ಗುವಿರಿ. ಆರ್ಥಿಕ ಸಧೃಢತೆ ಇರುವದು.
PublicNext
06/10/2020 07:17 am