ಶುಕ್ರವಾರ, ಶಾಲಿವಾಹನಶಕೆ 1942, ಶ್ರೀಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಶರದ್ ಋತು ಅಧಿಕ ಅಶ್ವಿನಮಾಸ ಕೃಷ್ಣಪಕ್ಷ ಪ್ರತಿಪದ 28.57, ರೇವತಿ ಪೂರ್ಣದಿನ, ದ್ರುವ 21.08, ಬಾಲವ 15.45.
ಬೆಂಗಳೂರು 06.10, 18.03, ಹುಬ್ಬಳ್ಳಿ ಸೂರ್ಯೋದಯ 06.20 ಸೂರ್ಯಾಸ್ತ 18.12, ವಿಜಯಪುರ ಸೂರ್ಯೋದಯ 06.18 ಸೂರ್ಯಾಸ್ತ 18.09.
ಸೌರ ಕನ್ಯಾಮಾಸ 17, ಸಫರ್ 14, ರಾಹುಕಾಲ 10.30-12.00, ಗುಳಿಕ 07.30-09.00, ಯಮಗಂಡ 03.00-04.30.
ಅಮೃತಸಿದ್ಧಿ. ಶುಭದಿನ, ಲಾಲಬಹದ್ದೂರ ಶಾಸ್ತ್ರಿ ಜಯಂತಿ, ಗಾಂಧಿ ಜಯಂತಿ.
ಮೇಷ : ಮಾತು ಮಂಥನಗಳಿಂದ ಆದಾಯ ವೃದ್ಧಿ. ಕರ್ತವ್ಯ ನಿಷ್ಟೆಯಿಂದ ಕೀರ್ತಿದಾಯಕ ದಿನಗಳಿವೆ. ನಿಷ್ಟುರತೆಯಿಂದ ದೂರ
ಇರುವಿರಿ. ಸಿಟ್ಟೂ ಕೂಡ ಲಾಭದಾಯಕವಾಗಲಿದೆ.
ವೃಷಭ : ತೋರಿಕೆಗಾಗಿ ಧನ ವಿನಿಯೋಗ ಮಾಡುವ ಸಂಭವವಿದೆ. ಅವಶ್ಯಕತೆಗೆ ಮೀರಿದ ವಸ್ತು ಖರೀದಿಸದೇ ಇರುವದು ಸೂಕ್ತ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಆಗುವದು.
ಮಿಥುನ : ಆತುರತೆಯಿಂದ ಕಾರ್ಯ ವಿರೋಧ. ಸಂಶಯದ ಬದಲು ಸಮಾಧಾನ ಮೂಡುವದು. ಉಡಾಫೆ ಮಾತುಗಳಿಂದ ತೊಂದರೆ ಸಂಭವ. ಕೌಟುಂಬಿಕ ಸೌಖ್ಯ ಹೆಚ್ಚಲಿದೆ.
ಕರ್ಕ : ಒತ್ತಡದ ಕೆಲಸಕಾರ್ಯಗಳಲ್ಲಿ ಮಗ್ನರಾಗುವಿರಿ. ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣ ಸಂಭವವಿದೆ. ಕೋರ್ಟಕಛೇರಿಯ ವ್ಯವಹಾರದಲ್ಲಿ ಲಾಭವಾಗುವದು.
ಸಿಂಹ : ವೈಯಕ್ತಿಕ ವ್ಯವಹಾರಗಳಲ್ಲಿ ಧಿಡೀರ್ ನಿರ್ಧಾರ ತೆಗೆದುಕೊಳ್ಳುವಿರಿ. ಅಪೆಕ್ಷಿತ ಲಾಭ ದೊರೆಯುವದು. ಮನೆಯಲ್ಲಿ ಮಂಗಲಕಾರ್ಯ ಜರುಗುವವು. ನಿಷ್ಟುರತೆಯಂದ ವರ್ತಿಸುವದು ಒಳ್ಳೆಯದಲ್ಲ.
ಕನ್ಯಾ : ಕಳೆದ ಘಟನೆಗಳು ನೆನಪಿಗೆ ಬರದಂತೆ ಯತ್ನ. ಸಮಾಧಾನಕ್ಕಾಗಿ ಅಲೆದಾಟವಿರುವದು. ಅಸಹಾಯಕ ಮನಸ್ಥಿತಿ ಇರುವದು. ಚಿಂತನೆಗಳು ಕಾರ್ಯರೂಪಕ್ಕೆ ಬರುವವು.
ತುಲಾ : ಹೆದರಿಕೆ ಇಲ್ಲದೇ ಕಾರ್ಯನಿರ್ವಹಣೆ ಮಾಡುವಿರಿ. ಅಧಿಕ ಲಾಭ ದೊರೆಯಲಿದೆ. ಪರಿವಾರದಲ್ಲಿ ಸಂತೋಷವಿರುವದು. ಎಲ್ಲವನ್ನೂ ಸರಿದೂಗಿಸುವ ಪ್ರಯತ್ನ ಸಫಲವಾಗುವದು.
ವೃಶ್ಚಿಕ : ಗೆಲ್ಲಬೇಕೆಂಬ ಗುರಿ, ಆತ್ಮಬಲ, ದೈರ್ಯದಿಂದ ಕಾರ್ಯಸಾಧನೆ. ಶತ್ರುಗಳು ತಾವಾಗಿಯೇ ಹಿಂದೆಸರಿಯುವರು. ಪರರ ಹೊಟ್ಟೆಕಿಚ್ಚಿಗೆ ಚಿಂತೆ ಮಾಡದೇ ಮುಂದುವರೆಯುವಿರಿ.
ಧನು : ನಿರಂತರ ಕೆಲಸದಿಂದ ದೇಹಾಲಸ್ಯ. ದೂರ ಪ್ರಯಾಣದ ಆಲೋಚನೆ ಇರುವದು. ಆರೋಗ್ಯದಲ್ಲಿ ಏರುಪೇರು ಸಂಭವ, ಧನಲಾಭ. ಅನಿರೀಕ್ಷಿತ ಕ್ಷೇತ್ರದರ್ಶನ ಯೋಗ.
ಮಕರ : ಚಂಚಲತೆಯಿಂದ ಕಾರ್ಯಗಳಲ್ಲಿ ವ್ಯತ್ಯಯ. ಅನುಕರಣೆಯಿಂದ ಕಾರ್ಯದಲ್ಲಿ ಅಪಯಶಸ್ಸು, ಬೌದ್ಧಿಕ ಬಲದಿಂದ ಕುತ್ತಿನಿಂದ ಪಾರಾಗುವಿರಿ. ಆಯಾಸವಿಲ್ಲದಂತೆ ಕಾಯಕ ಮಾಡುವಿರಿ.
ಕುಂಭ : ವಾಸ್ತವವನ್ನು ಮುಚ್ಚಿಡುವ ಪ್ರಯತ್ನ ಮಾಡುವಿರಿ. ಬಹಳ ದಿನದ ಆಸೆ ಪೂರ್ಣಗೊಳ್ಳುವದು. ಆಸ್ತಿ ಖರೀದಿ, ವಾಹನ ಖರೀದಿಯ ವಿಷಯದಲ್ಲಿ ಪ್ರಗತಿ.
ಮೀನ : ಹಿರಿಯರಿಂದ ಶುಭ ಸಮಾಚಾರ ದೊರೆಯುವದು. ಉದ್ಯೋಗದಲ್ಲಿ ಉನ್ನತಿಯಾಗುವದು. ವಿಚಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುವಿರಿ.
PublicNext
02/10/2020 07:25 am