ಮೇಷ
ಭೂಮಿ- ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ವಾರದ ಆರಂಭದಲ್ಲಿ ಶುಭದಾಯಕವಾಗಿದೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿದ್ದಲ್ಲಿ ಅದರಲ್ಲಿ ನಿಮ್ಮ ಕೈ ಮೇಲಾಗುತ್ತದೆ. ದುಬಾರಿ ವಸ್ತುಗಳನ್ನು ಪಡೆಯುವ ಅವಕಾಶಗಳಿವೆ. ವಾರದ ಅಂತ್ಯಕ್ಕೆ ಸರಿಯುತ್ತಾ ಅದೃಷ್ಟ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಧಾರ್ಮಿಕ ಹಾಗೂ ಸಾಮಾಜಿಕ ಕೆಲಸ- ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಈಗ ಉದ್ಯೋಗ ಅರಸಲು ಆರಂಭಿಸುವವರಿಗೆ ಉತ್ತಮ ಕಾಲ. ಖಾಸಗಿ ಅಥವಾ ಸರಕಾರಿ ವಲಯದಲ್ಲಿ ನೀಡಿದ ಸಂದರ್ಶನಗಳು ಯಶಸ್ವಿ ಆಗಲಿವೆ. ಆರೋಗ್ಯ ವಿಚಾರದಲ್ಲಿ ವಾರದ ಮೊದಲ ಹಾಗೂ ಮಧ್ಯ ಭಾಗದಲ್ಲಿ ಉತ್ತಮ ಫಲಗಳಿಲ್ಲ. ಆದರೆ ದ್ವಿತೀಯ ಹಾಗೂ ನಾಲ್ಕನೇ ಭಾಗದಲ್ಲಿ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರ ಹಾಗೂ ಸೇವಾ ವಲಯದಲ್ಲಿ ಇರುವವರಿಗೆ ಅದ್ಬುತವಾದ ಯಶಸ್ಸು ದೊರೆಯಲಿದೆ. ಆರ್ಥಿಕ ವಿಚಾರಗಳಲ್ಲಿ ನಿರೀಕ್ಷೆಯೇ ಮಾಡಿರದಷ್ಟು ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಪ್ರೀತಿಪಾತ್ರರ ಜತೆಗೆ ಪರಸ್ಪರ ಉತ್ತಮ ಸಂಬಂಧ ಹಾಗೂ ಬಾಂಧವ್ಯ ಇರುತ್ತದೆ. ಹಣಕಾಸು ವ್ಯವಹಾರದಲ್ಲಿ ಮೈಯೆಲ್ಲ ಕಣ್ಣಾಗಿರಬೇಕು. ಇಲ್ಲದಿದ್ದರೆ ನಷ್ಟವನ್ನು ಅನುಭವಿಸ ಬೇಕಾದೀತು, ಎಚ್ಚರ.
ವೃಷಭ
ಆರ್ಥಿಕ ವ್ಯವಹಾರಗಳನ್ನು ಒಂದು ಕಡೆಯಿಂದ ಸರಿಪಡಿಸಿಕೊಂಡು ಬರುವುದರಲ್ಲಿ ಯಶಸ್ಸು ಸಾಧಿಸುತ್ತೀರಿ. ವ್ಯಾಪಾರ ಹಾಗೂ ಸೇವಾ ಕ್ಷೇತ್ರದಲ್ಲಿ ಅದ್ಭುತವಾದ ಯಶಸ್ಸು ಸಾಧಿಸುತ್ತೀರಿ. ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಇನ್ನು ಈ ಸಂಬಂಧ ಭಾಗವಹಿಸುವ ಸಂದರ್ಶನಗಳಲ್ಲೂ ಯಶಸ್ಸು ಪಡೆಯಲಿದ್ದೀರಿ. ವಾರದ ಮೊದಲ ಭಾಗದಲ್ಲಿ ವೈಯಕ್ತಿಕ ಸಂಬಂಧದಲ್ಲಿ ಸಮಾಧಾನಕರವಾದ ಬೆಳವಣಿಗೆಗಳು ಆಗಲಿವೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಸೋದರ ಸಂಬಂಧಿಗಳ ಜತೆಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಹಳೆಯ ಮನಸ್ತಾಪಗಳು ನಿವಾರಣೆ ಆಗುತ್ತವೆ. ವಿದೇಶಿ ವ್ಯವಹಾರಗಳು ಹಾಗೂ ಹೂಡಿಕೆಯಲ್ಲಿ ಸಮಾಧಾನಕರವಾದ ಬೆಳವಣಿಗೆ ಆಗಲಿದೆ. ಈ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯಪೂರ್ಣವಾದ ಪಥ್ಯವನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ನೀವು ಅವಿವಾಹಿತರಾಗಿದ್ದಲ್ಲಿ, ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಈ ಅವಧಿಯಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳಿವೆ. ನಿಮ್ಮ ವ್ಯಾಪಾರ- ವ್ಯವಹಾರವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿಕೊಳ್ಳಲು ಸೂಕ್ತವಾದ ಸನ್ನಿವೇಶ ನಿರ್ಮಾಣ ಆಗುತ್ತದೆ.
ಮಿಥುನ
ವಾರದ ಆರಂಭದಿಂದಲೇ ವೃತ್ತಿಪರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಕಾಣಲು ಆರಂಭಿಸುತ್ತದೆ. ಎಲ್ಲ ವಿಚಾರಗಳ ಬಗ್ಗೆಯೂ ಸಕಾರಾತ್ಮಕ ಧೋರಣೆ ಇರುತ್ತದೆ. ದೈಹಿಕ ಕ್ಷಮತೆ ಉತ್ತಮವಾಗಿರುತ್ತದೆ. ವಾರದ ದ್ವಿತೀಯಾರ್ಧದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಪ್ರೀತಿ-ಪ್ರೇಮ ಸಂಬಂಧದಲ್ಲಿ ಉತ್ತಮ ಬಾಂಧವ್ಯ, ಪರಸ್ಪರ ಬೆಂಬಲ ಇರುತ್ತದೆ. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ, ಕ್ರೀಡಾ ಕ್ಷೇತ್ರಗಳಲ್ಲಿ ನೀಡುವ ಇಂಟರ್ ವ್ಯೂಗಳಲ್ಲಿ ಯಶಸ್ಸು ಕಾಣುತ್ತೀರಿ. ಈ ವಾರ ನಿಮ್ಮ ಸಂಪತ್ತು ವೃದ್ಧಿ ಆಗಲಿದೆ. ಇದರ ಜತೆಗೆ ಹಣ ಬಂದು ನಿಮ್ಮ ಬಳಿ ಸೇರಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ ಸ್ನೇಹಿತರು, ಸಂಬಂಧಿಗಳ ಜತೆಗೆ ಬಾಂಧವ್ಯ ಗಟ್ಟಿ ಆಗಲಿದೆ. ವಾರದ ಅಂತ್ಯಕ್ಕೆ ಸರಿದಂತೆ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಆರೋಗ್ಯದಲ್ಲಿ ಏರಿಳಿತಗಳು ಕಾಣಿಸಿಕೊಳ್ಳುತ್ತವೆ. ಆದರೆ ಹೂಡಿಕೆ, ವಿದೇಶ ವ್ಯವಹಾರ ಹಾಗೂ ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಕೈ ಮೇಲಾಗುತ್ತದೆ. ವಾರಾಂತ್ಯವು ಹೆಚ್ಚು ಸಕಾರಾತ್ಮಕವಾಗಿ ಇರುತ್ತದೆ. ಜತೆಗೆ ಹೆಚ್ಚು ಉತ್ಪಾದಕತೆ ಇರುತ್ತದೆ. ಆದ್ದರಿಂದ ಯೋಚನೆ ಮಾಡುವ ಅಗತ್ಯ ಇಲ್ಲ.
ಕರ್ಕಾಟಕ
ವಾರದ ಆರಂಭದಿಂದಲೇ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಹೆಚ್ಚುವರಿ ಆದಾಯ ಮೂಲದ ಆರ್ಥಿಕ ಸ್ಥಿತಿ ಮತ್ತೊಂದು ಎತ್ತರಕ್ಕೆ ಏರುತ್ತದೆ. ಕೌಟುಂಬಿಕವಾಗಿ ನಿಮ್ಮ ಸ್ಥಾನಮಾನದಲ್ಲಿ ಏರಿಕೆ ಆಗಲಿದೆ. ಶೈಕ್ಷಣಿಕ ರಂಗದಲ್ಲಿ ಮಹತ್ತರವಾದ ಪ್ರಗತಿ ಸಾಧಿಸಲಿದ್ದೀರಿ. ಪ್ರೀತಿ-ಪ್ರೇಮ ವಿಚಾರಗಳಲ್ಲಿ ವಾರದ ಆರಂಭದಲ್ಲಿ ಮಹತ್ತರವಾದ ಬೆಳವಣಿಗೆ ಆಗಲಿದೆ. ಆದರೆ ವಾರದ ದ್ವಿತೀಯಾರ್ಧದಲ್ಲಿ ನೀವು ಸಂಬಂಧ ಸಂಭಾಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕಬೇಕು. ದಿಢೀರನೇ ದೂರ ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಆರೋಗ್ಯ ಸ್ಥಿತಿಯು ಕ್ಷೀಣಿಸಲಿದೆ. ಶತ್ರುಗಳಿಂದ ಬಾಧೆ ಏರ್ಪಡಲಿದೆ. ವಾರದ ಅಂತ್ಯಕ್ಕೆ ಸರಿಯುತ್ತಾ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಸಮತೋಲನದ ಜೀವನ ಕ್ರಮದಿಂದ ಅನುಕೂಲ ಆಗಲಿದೆ. ನಿಮ್ಮ ಬಾಅಹ್ಯ ಸೌಂದರ್ಯದಲ್ಲಿ ವೃದ್ಧಿ ಆಗಲಿದೆ. ಪಾರ್ಟ್ ನರ್ ಜತೆಗೆ ಸ್ನೇಹಯುತವಾದ ವಾತಾವರಣ ನಿರ್ಮಿಸಿಕೊಳ್ಳುವಲ್ಲಿ ಸಫಲರಾಗುತ್ತೀರಿ. ವಾರದ ಅಂತ್ಯದಲ್ಲಿ ಯಾವುದೇ ವಿಚಾರದಲ್ಲಿ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಸಿಂಹ
ವಾರದ ಆರಂಭದಲ್ಲಿ ವಿದೇಶಿ ಹಾಗೂ ಹೂಡಿಕೆ ವಿಚಾರದಲ್ಲಿ ಸ್ಥಿರವಾದ ಅನುಕೂಲಗಳನ್ನು ಪಡೆಯಲಿದ್ದೀರಿ. ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ವಾರದ ಮೊದಲ ಭಾಗ ಆರೋಗ್ಯದ ವಿಚಾರಕ್ಕೆ ಅಂಥ ಪ್ರಶಸ್ತವಾಗಿಲ್ಲ. ಸಾಲ ಮರುಪಾವತಿಗೆ ಕಷ್ಟಗಳು ಎದುರಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ಹೆಚ್ಚು ಉತ್ಸಾಹದಿಂದ, ಚೈತನ್ಯದಿಂದ ಕಾಣಿಸಿಕೊಳ್ಳಲಿದ್ದೀರಿ. ಈ ಹಿಂದೆ ಹಾಕಿದ ಶ್ರಮಕ್ಕೆ ಸಮಾಧಾನಕರವಾದ ಫಲಿತಾಂಶ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಂತೋಷವಾದ ಕ್ಷಣಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಭೂಮಿ ಹಾಗೂ ಆಸ್ತಿ ವ್ಯವಹಾರಗಳಲ್ಲಿ ವಾರದ ಮಧ್ಯ ಭಾಗದಲ್ಲಿ ಸಮಾಧಾನಕರ ಫಲಿತಾಂಶ ಸಿಗಲಿದೆ. ವಾರಾಂತ್ಯದಲ್ಲಿ ಕುಟುಂಬ ಸದಸ್ಯರ ಜತೆಗೆ ಉತ್ತಮವಾದ ಬಾಂಧವ್ಯ ಇರುತ್ತದೆ. ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ನಿಮ್ಮ ಸ್ಥಾನಮಾನ ಗಟ್ಟಿ ಆಗುವಂಥ ಅತಿ ಮುಖ್ಯವಾದ ಅವಕಾಶ ನಿಮ್ಮ ಪಾಲಿಗೆ ದೊರೆಯಲಿದೆ. ಸರಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ದೊರೆಯುವ ಅವಕಾಶಗಳಿವೆ. ವಾರದ ಮೊದಲ ಹಾಗೂ ಕೊನೆ ಭಾಗದಲ್ಲಿ ಕೆಲವು ಅನಿರೀಕ್ಷಿತ, ಅಹಿತಕರ ಬೆಳವಣಿಗೆ ಆಗುವ ಸಾಧ್ಯತೆಗಳಿದ್ದು, ಆ ಬಗ್ಗೆ ಎಚ್ಚರವಹಿಸಬೇಕು.
ಕನ್ಯಾ
ಕುಟುಂಬದೊಳಗಿನ ಹಳೆ ಭಿನ್ನಾಬಿಪ್ರಾಯಗಳನ್ನು ಬಗೆಹರಿಸುವಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ಕುಟುಂಬ ಸದಸ್ಯರನ್ನು ಹೆಚ್ಚು ಸಂತುಷ್ಟವಾಗಿ, ನೆಮ್ಮದಿಯಾಗಿ ಇರಿಸಿಕೊಳ್ಳಬೇಕು ಎಂಬ ನಿಮ್ಮ ಉದ್ದೇಶ ಈಡೇರುತ್ತದೆ. ನಿಮ್ಮ ಪಾಲಿಗೆ ಅದೃಷ್ಟ ತುಂಬ ಚೆನ್ನಾಗಿ ಕೆಲಸ ಮಾಡುತ್ತದೆ. ಸಾಮಾಜಿಕ ಕೆಲಸ-ಕಾರ್ಯಗಳಲ್ಲಿ, ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ವಾರದ ಮೊದಲ ಭಾಗ ಸಾಧಾರಣವಾಗಿ ಇರುತ್ತದೆ. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಕೆಲಸ-ಕಾರ್ಯಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತೀರಿ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತೀರಿ. ವಾರದ ಅಂತ್ಯಕ್ಕೆ ಸರಿದಂತೆ ಆರ್ಥಿಕ ವ್ಯವಹಾರಗಳಲ್ಲಿ ಗಮನಾರ್ಹವಾದ ಸಾಧನೆ ಮಾಡುತ್ತೀರಿ. ಹೆಚ್ಚಿನ ಆದಾಯ ಮೂಲದಿಂದ ದೊಡ್ಡ ಪ್ರಮಾಣದ ಲಾಭ ಗಳಿಸುವ ಸಾಧ್ಯತೆಗಳಿವೆ. ವೈಯಕ್ತಿಕ ಸಂಬಂಧಗಳು ಸುಧಾರಿಸುತ್ತವೆ. ವಾರಾಂತ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಿಶ್ರ ಫಲ ಅನುಭವಿಸುತ್ತೀರಿ. ಒಟ್ಟಾರೆಯಾಗಿ ನೋಡಿದಾಗ ಈ ವಾರ ಮಿಶ್ರ ಫಲಗಳು ಅನುಭವಕ್ಕೆ ಬರುತ್ತವೆ.
ತುಲಾ
ಹಣ ಹೂಡಿಕೆ ಹಾಗೂ ವಿದೇಶ ವ್ಯವಹಾರಗಳಿಗೆ ಬಹಳ ಅನುಕೂಲಕರವಾದ ಸಮಯ ಇದು. ಮಾರಾಟಕ್ಕೆ ಸಂಬಂಧಿಸಿದಂತೆ ನೀಡಿದ ಗುರಿ ಸಾಧಿಸುವಲ್ಲಿ ಯಶಸ್ವಿ ಆಗುತ್ತೀರಿ. ಅದಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ವಾರದ ಮೊದಲ ಭಾಗದಲ್ಲಿ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಗುಪ್ತಾಂಗ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಪಾಲಿಗೆ ಅದೃಷ್ಟ ಇದೆ. ನಿಮ್ಮ ಈ ಹಿಂದಿನ ಶ್ರಮಕ್ಕೆ ಸಮಾಧಾನಕರವಾದ ಫಲಿತಾಂಶ ದೊರೆಯಲಿದೆ. ಖಾಸಗಿ ಅಥವಾ ಸರಕಾರಿ ವಲಯದಲ್ಲಿ ನೀಡಿದ ಸಂದರ್ಶನಗಳು ಯಶಸ್ವಿ ಆಗಲಿವೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಕಡೆಗೆ ನಿಮ್ಮ ಮನಸ್ಸು ವಾಲುತ್ತದೆ. ರಾಜಕೀಯ ಜೀವನದಲ್ಲಿ ಪ್ರಗತಿ ಕಾಣುತ್ತೀರಿ. ವಾರದ ಮಧ್ಯ ಭಾಗದಲ್ಲಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ನಿಮ್ಮ ನಡತೆಯಿಂದ ತಂದೆ-ತಾಯಿಗಳಿಗೆ ಸಂತೋಷವಾಗುತ್ತದೆ. ವಾರದ ಅಂತ್ಯಕ್ಕೆ ಆರ್ಥಿಕ ವ್ಯವಹಾರಗಳಲ್ಲಿ ಮಹತ್ತರವಾದ ಬೆಳವಣಿಗೆ ಆಗಲಿದೆ. ವೈಯಕ್ತಿಕ ಸಂಬಂಧಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ಅಗತ್ಯವಿದೆ. ತುಂಬ ಸುಂದರವಾದ ಪ್ರದೇಶಗಳಿಗೆ ಸಂಗಾತಿಯ ಜೊತೆಗೂಡಿ ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ.
ವೃಶ್ಚಿಕ
ಉದ್ಯೋಗ ಸ್ಥಳದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಸಫಲರಾಗುತ್ತೀರಿ. ಕೆಲಸ-ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ವೃತ್ತಿಪರ ಬದುಕಿನಲ್ಲಿ ಯಶಸ್ಸು ಪಡೆಯುವ ಸಲುವಾಗಿ ಕೆಲವು ತಂತ್ರಗಳನ್ನು ರೂಪಿಸುತ್ತೀರಿ. ನಿಮ್ಮ ಪೋಷಕರು ನೀವು ಮಾಡುವ ಕೆಲಸಗಳಿಂದ ಸಂತುಷ್ಟರಾಗುತ್ತಾರೆ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಆರೋಗ್ಯವಾಗಿ, ದೈಹಿಕವಾಗಿ ಸದೃಢರಾಗಿ ಇರುತ್ತೀರಿ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಸಫಲರಾಗುತ್ತೀರಿ. ಹೊಸ ಆದಾಯ ಮೂಲವೊಂದು ಗೋಚರಿಸಲಿದೆ. ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವವರಿಗೆ ವಾರದ ದ್ವಿತೀಯಾರ್ಧದಲ್ಲಿ ಉಜ್ವಲವಾದ ಅವಕಾಶಗಳಿವೆ. ವೈಯಕ್ತಿಕ ಸಂಬಂಧಗಳು ಗಟ್ಟಿ ಆಗಲಿವೆ. ಅಂತಃಕರಣ ಹೆಚ್ಚಾಗಲಿದೆ. ಆದರೆ ವಾರದ ಅಂತ್ಯಕ್ಕೆ ಸರಿದಂತೆ ಸಂಬಂಧಗಳ ವಿಚಾರದಲ್ಲಿ ನೀವು ಹೆಚ್ಚಿನ ಆಸ್ಥೆ ವಹಿಸಬೇಕು. ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕು. ವಾರಾಂತ್ಯದಲ್ಲಿ ಸಕಾರಾತ್ಮಕ ಹಾಗೂ ಶುಭ ಫಲಿತಾಂಶಗಳು ದೊರೆಯಲಿವೆ.
ಧನುಸ್ಸು ವಾರದ ಆರಂಭದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ. ನಿತ್ಯದ ಕೆಲಸ-ಕಾರ್ಯಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವಲ್ಲಿ ನಿಮಗೆ ಉತ್ತೇಜನ ದೊರೆಯುತ್ತದೆ. ವೈವಾಹಿಕ ಜೀವನದಲ್ಲಿ ಉತ್ತಮ ಬೆಂಬಲ, ಸಹಕಾರ ಕಂಡುಬರುತ್ತದೆ. ವಾರದ ಮಧ್ಯಭಾಗದಲ್ಲಿ ಕುಟುಂಬ ಸದಸ್ಯರು ನಿಮ್ಮ ಸಾಮಾಜಿಕ ಬದುಕಿನಲ್ಲಿ ಸಹಕಾರ ನೀಡುತ್ತಾರೆ. ಆಸ್ತಿ ವ್ಯವಹಾರಗಳಲ್ಲಿ ಉತ್ತಮ ಅನುಕೂಲಗಳನ್ನು ಪಡೆಯಲಿದ್ದೀರಿ. ಆರ್ಥಿಕ ಹಾಗೂ ವಿದೇಶ ವ್ಯವಹಾರಗಳಲ್ಲಿ ಯಶಸ್ಸು ಪಡೆಯುವ ಅವಕಾಶಗಳಿವೆ. ವಾರದ ತೃತೀಯ ಭಾಗದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಚಟುವಟಿಕೆಯಿಂದ ಪಾಲ್ಗೊಳ್ಳುತ್ತೀರಿ. ಕೌಟುಂಬಿಕವಾಗಿ ಪ್ರಮುಖವಾದ ವಿಚಾರವೊಂದರಲ್ಲಿ ಸೋದರ ಅಥವಾ ಸೋದರಿ ಜತೆಗೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಬಗೆಹರಿಸಿಕೊಳ್ಳುತ್ತೀರಿ. ಈ ಹಿಂದಿನ ಮನಸ್ತಾಪಗಳನ್ನು ಮರೆಯುತ್ತೀರಿ. ವೃತ್ತಿಪರರು ಗುರಿಯನ್ನು ಸಾಧಿಸುವಲ್ಲಿ ಸಫಲರಾಗಲಿದ್ದೀರಿ. ಯತ್ನ ಕಾರ್ಯಗಳಲ್ಲಿ ಸಲೀಸಾಗಿ ಗೆಲುವು ನಿಮ್ಮದಾಗಲಿದೆ. ನಿಮ್ಮ ಕೌಶಲದ ಮೂಲಕ ಉದ್ಯೋಗ ಅಥವಾ ವ್ಯಾಪಾರದಲ್ಲಿ ಬೆರಗು ಮೂಡಿಸುವಂಥ ಸಾಧನೆ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ವಾರದ ಮೊದಲ ಹಾಗೂ ಕೊನೆ ಭಾಗ ನಿಮಗೆ ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ, ನಗದು ಕೊರತೆ ಕಾಡುತ್ತಿದ್ದಲ್ಲಿ ವಾರಾಂತ್ಯಕ್ಕೆ ನಿವಾರಣೆ ಆಗುತ್ತದೆ.
ಮಕರ
ವಾರದ ಆರಂಭದಿಂದಲೇ ನಿಮಗೆ ಅನುಕೂಲಕರವಾದ ವಾತಾವರಣ ಇರಲಿದೆ. ಒಂದು ವೇಳೆ ನೀವು ಅವಿವಾಹಿತರಾಗಿದ್ದಲ್ಲಿ ಸೂಕ್ತ ಸಂಬಂಧ ದೊರೆಯಲಿದೆ. ವೈವಾಹಿಕ ಜೀವನ ಕೂಡ ಸಂತೋಷದಾಯಕವಾಗಿ ಇರುತ್ತದೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವಿದೇಶ ವ್ಯವಹಾರ, ಹೂಡಿಕೆಯಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ವಿರೋಧಿ ಪಾಳಯದವರಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ವೃತ್ತಿಪರ ಯಶಸ್ಸು ಸಾಧಿಸುವ ಸಲುವಾಗಿ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ. ವಾರದ ಅಂತ್ಯಕ್ಕೆ ಸರಿಯುತ್ತಾ ನಿಮ್ಮ ಪಾಲಿಗೆ ಅದೃಷ್ಟ ಒದಗಿ ಬರಲಿದೆ. ರಾಜಕೀಯ ಜೀವನದಲ್ಲಿ ಹೆಸರು- ಕೀರ್ತೀ ಸಂಪಾದಿಸಲಿದ್ದೀರಿ. ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ಯೋಜನೆ ರೂಪಿಸುತ್ತೀರಿ. ಸಂಬಂಧಿಕರು, ಸ್ನೇಹಿತರ ಜತೆಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡುವ ಸಾಧ್ಯತೆ ಇದೆ.
ಕುಂಭ
ಕುಟುಂಬ ಹಾಗೂ ಸ್ನೇಹಿತರ ಜತೆಗೆ ಉತ್ತಮವಾದ ಸಮಯ ಕಳೆಯುವ ಅವಕಾಶ ಇದೆ. ಸೋದರ ಸಂಬಂಧದಲ್ಲಿ ಇರುವ ಭಿನ್ನಾಭಿಪ್ರಾಯಗಳು ದೂರ ಆಗಲಿವೆ. ಆರೋಗ್ಯ ವಿಚಾರದಲ್ಲಿ ಏರಿಳಿತಗಳು ಕಾಣಿಸಿಕೊಳ್ಳಲಿವೆ. ನಿಮ್ಮ ಕೆಲಸದ ವಿಚಾರಗಳನ್ನು ಅಂದುಕೊಂಡಂತೆ ಮಾಡಿ ಮುಗಿಸಲು ಕಷ್ಟವಾಗುತ್ತದೆ. ವಾರದ ಮಧ್ಯ ಭಾಗದಲ್ಲಿ ಸಂಗಾತಿ ಜತೆಗೆ ಸಂಬಂಧ ಗಾಢವಾಗುತ್ತದೆ. ಸುಮಧುರವಾದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ಬಾಹ್ಯ ಸೌಂದರ್ಯ ವೃದ್ಧಿ ಆಗಲಿದೆ. ವಾರದ ಅಂತ್ಯಕ್ಕೆ ಸರಿಯುತ್ತಾ ವೈಯಕ್ತಿಕ ಸಂಬಂಧದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತವೆ. ಶತ್ರುಗಳು ನಿಮಗೆ ಬಾಧೆ ನೀಡುವ ಸಾಧ್ಯತೆಗಳಿವೆ. ಈ ವಾರ ಆರ್ಥಿಕ ಹೂಡಿಕೆಯಲ್ಲಿ ಮಹತ್ತರವಾದ ಬೆಳವಣಿಗೆ ಸಾಧಿಸುತ್ತೀರಿ. ವಾರದ ಅಂತ್ಯಕ್ಕೆ ಸರಿಯುತ್ತಾ ನಿಮ್ಮ ಉದ್ದೇಶ ಈಡೇರಿಕೆಗೆ ವಿವಿಧ ಕಡೆಯಿಂದ ಬೆಂಬಲ ದೊರೆಯುತ್ತದೆ. ದೀರ್ಘ ಕಾಲದಿಂದ ಬಾಕಿ ಉಳಿದುಹೋಗಿದ್ದ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸಕಾರಾತ್ಮಕವಾದ ಧೋರಣೆ ನಿಮ್ಮಲ್ಲಿ ಮೂಡುತ್ತದೆ. ಸಾಮಾಜಿಕ ಜೀವನದಲ್ಲಿ ಹೆಸರು-ಕೀರ್ತಿ ಪಡೆಯುವ ಅವಕಾಶ ದೊರೆಯುತ್ತದೆ.
ಮೀನ
ವಾರದ ಆರಂಭದಿಂದಲೇ ತುಂಬ ಅದೃಷ್ಟ ತರಲಿದೆ. ಸಾಮಾಜಿಕ ಜೀವನದಲ್ಲಿ ಗಮನಾರ್ಹವಾದ ಯಶಸ್ಸು ಪಡೆಯಲಿದ್ದೀರಿ. ಸೋದರ- ಸೋದರಿಯರ ಜತೆಗೆ ಗಾಢವಾದ ಬಾಂಧವ್ಯ ಬೆಳೆಯಲಿದೆ. ಈ ಹಿಂದೆ ಯಾವಾಗಲೋ ನಡೆದಿದ್ದ ವಾಗ್ವಾದವನ್ನು ಈಗ ಮತ್ತೆ ನೆನಪಿಸಿಕೊಳ್ಳುವ ಸಾಧ್ಯತೆಗಳಿವೆ. ದಾನ-ಧರ್ಮ, ಸಾಮಾಜಿಕ ಕೆಲಸ- ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಉದ್ಯೋಗ ಅಥವಾ ವ್ಯಾಪಾರ ರಂಗದಲ್ಲಿ ಇರುವವರಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ. ವಿವಿಧ ಮೂಲಗಳಿಂದ ಗಮನಾರ್ಹವಾದ ಅಸ್ತಿ ಅಥವಾ ಸಂಪತ್ತು ದೊರೆಯುವ ಅವಕಾಶಗಳಿವೆ. ಸೇವಾ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಬಡ್ತಿ ದೊರೆಯುವ ಅವಕಾಶಗಳು ಹೆಚ್ಚಾಗಿವೆ. ನಿಮ್ಮ ಕೌಶಲಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಹಣಕಾಸು ವಿಚಾರಗಳಿಗೆ ವಾರದ ಅಂತ್ಯಕ್ಕೆ ಸರಿಯುತ್ತಾ ಅನುಕೂಲಕರವಾದ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಅಹಾರ ಪಥ್ಯ, ಸೌಖ್ಯ ಹೀಗೆ ಕುಟುಂಬದಲ್ಲಿ ನೆಮ್ಮದಿ ದೊರೆಯಲಿದೆ. ವಾರದ ಕೊನೆ ಭಾಗದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕೋರ್ಟ್ ವ್ಯವಹಾರಗಳಲ್ಲಿ ನಿಮ್ಮ ಶತ್ರುಗಳಿಂದ ತೊಂದರೆ ಎದುರಾಗುವ ಸಾಧ್ಯತೆಗಳಿವೆ.
PublicNext
20/12/2020 08:07 am