ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 08.10.2020

ಮೇಷ : ಬಂದುಗಳ ತೊಡಕು ನಿವಾರಿಸಲು ಕೂಲಂಕುಷ ವಿಚಾರ. ತಮ್ಮತನವನ್ನು ಮೆರೆಯುವ ಉಮೇದಿ. ಮಂಗಲಕಾರ್ಯದಲ್ಲಿ ಭಾಗಿಯಾಗುವ ಯೋಗ.

ವೃಷಭ : ಹೊಸ ಯೋಜನೆ ಜಾರಿಯಿಂದ ನೆಮ್ಮದಿ. ಕಂಟಕ ನಿವಾರಣೆಯಾಗಿ ಸಂತೋಷ ವೃದ್ಧಿಸುವದು. ಅಪೇಕ್ಷಿತರ ಬೇಟಿ. ಆಸ್ತಿ ವ್ಯವಹಾರದಲ್ಲಿ ಪ್ರಗತಿ.

ಮಿಥುನ : ಜಿಪುಣತನದ ಸ್ವಭಾವಕ್ಕೆ ಕಡಿವಾಣ ಹಾಕುವಿರಿ. ಅಪೇಕ್ಷಿತ ಕಾರ್ಯ ಸಾಧನೆಗೆ ತತ್ಪರರಾಗುವಿರಿ. ವ್ಯವಹಾರಗಳಲ್ಲಿ ಸಂತೃಪ್ತಿ ಇರುವದು.

ಕರ್ಕ : ಮಕ್ಕಳ ಚಿಂತೆ. ವಿದ್ಯಾಭ್ಯಾಸದಲ್ಲಿ ಇರುವ ತೊಂದರೆ ನಿವಾರಣೆಯಾಗುವದು. ಸ್ಥಿರಾಸ್ಥಿ ಖರೀದಿ. ಹಣಕಾಸಿನ ತೊಂದರೆ ಪರಿಹಾರವಾಗುವದು.

ಸಿಂಹ : ವ್ಯಾಪಾರ, ಉದ್ಯೋಗದ ನಿಮಿತ್ತ ತಿರುಗಾಟ. ಹಿಡಿದ ಕಾರ್ಯ ಯಶಸ್ವಿಗೊಳಿಸಲು ಸರ್ವ ಪ್ರಯತ್ನ. ಅಧಿಕ ಖರ್ಚು, ಸಮಾಧಾನ ಚಿತ್ತ.

ಕನ್ಯಾ : ಸಾಲಗಾರರ ತೊಂದರೆ ಹೆಚ್ಚಾದರೂ ನಿಭಾಯಿಸುವಿರಿ. ಆದಾಯಕ್ಕೆ ಮೀರಿದ ವ್ಯವಹಾರಗಳಿಂದ ದೂರವಿರುವಿರಿ. ಪಾಲುಗಾರಿಕೆಯ ವ್ಯವಹಾರದಿಂದ ಲಾಭ.

ತುಲಾ : ಚಾಣಕ್ಷತೆಯಿಂದ ಲಾಭ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಧ್ಯತೆ ಇರುವದು. ಸಜ್ಜನರ ಸಾಂಗತ್ಯದಿಂದ ಸಂತೋಷವಾಗುವದು.

ವೃಶ್ಚಿಕ : ವೃತ್ತಿಪರತೆಯಿಂದ ಕಷ್ಟ ಪರಿಹಾರ. ಬಹಳ ದಿನಗಳಿಂದ ಇರುವ ದೈಹಿಕ ತೊಂದರೆ ನಿವಾರಣೆಯಾಗುವದು. ಆಪತ್ತು ದೂರಾಗುವದು.

ಧನು : ಅವಿರತ ಪರಿಶ್ರಮದಿಂದ ಕಾರ್ಯಸಾಧನೆ. ಸಮಾಧಾನ ಚಿತ್ತ. ಕುಟುಂಬದಲ್ಲಿ ಸಂತೋಷವಿರುವದು. ನೆನೆಗುದಿಗೆ ಬಿದ್ದ ಕಾರ್ಯ ಕೈಗೂಡುವದು.

ಮಕರ : ದೂರ ಪ್ರಯಾಣದ ಯೋಗವಿದೆ. ಅಹಮಿಕೆಗೆ ಪೆಟ್ಟು ಬೀಳುವ ಸಾಧ್ಯತೆ ಇರುವದು. ಚಿಂತನ ಮಂಥನ ಮಾಡಿ ಕಾರ್ಯ ಪ್ರವೃತ್ತರಾಗುವಿರಿ.

ಕುಂಭ : ವಿಘ್ನಗಳಿಲ್ಲದೇ ಕಾರ್ಯ ಮುಂದುವರೆಯುವದು. ಆತ್ಮೀಯರ ಬೇಟಿಯಾಗುವದು. ಅಪೇಕ್ಷಿತ ಧಾರ್ಮಿಕ ಕ್ಷೇತ್ರದ ದರ್ಶನ ಯೋಗವಿದೆ. ಮಿತ್ರರಿಂದ ಸಹಕಾರ ದೊರೆಯುವದು.

ಮೀನ : ಅಸಂತುಷ್ಟಿ, ವಿವಿಧ ವಿಚಾರ, ಅನ್ಯರ ಬಿರುನುಡಿಗಳಲ್ಲಿಯೂ ಅಂಜಿಕೆ ಇಲ್ಲದೇ ಕಾರ್ಯಮಗ್ನರಾಗುವಿರಿ. ತಿಂಗಳ ಕೊನೆಗೆ ದೈಹಿಕ ತೊಂದರೆ ಕಂಡುಬರುವ ಸಂಭವವಿದೆ.

Edited By : Nirmala Aralikatti
PublicNext

PublicNext

08/10/2020 07:07 am

Cinque Terre

23.9 K

Cinque Terre

0