ಝಿಪ್ಪಿ ಗ್ರಫಿ.. ಇದೊಂದು ವಿಶೇಷ ಬಯೋಗ್ರಫಿ. ಸಾಹಿತ್ಯ ಕ್ಷೇತ್ರದಲ್ಲಿ ವ್ಯಕ್ತಿಗಳ ಮೇಲೆ ಬಯೋಗ್ರಫಿ ಬಂದಿವೆ. ನನ್ನ ಪ್ರಕಾರ ಇದು ಮೊದಲ ಪ್ರಾಣಿಯ ಬಯೋಗ್ರಫಿ ಆಗಿದೆ.
ಇಲ್ಲಿ ಎರಡು ಹೆಣ್ಣು ಜೀವಗಳ ಅತೀಯಾದ ಪ್ರೀತಿಯ ಜರ್ನಿ ಇದೆ. ಅದನ್ನ ಇಲ್ಲಿ ಅಧ್ಯಾಯ ರೂಪದಲ್ಲಿಯೇ ಹೇಳಿರೋದು ವಿಶೇಷ. ಓದುಗರು ತಮಗಿಷ್ಟವಾದ ಅಧ್ಯಾಯವನ್ನ ನೇರವಾಗಿಯೇ ಓದಬಹುದು. ಇಲ್ಲವೇ ತಮಗೆ ಟೈಮ್ ಸಿಕ್ಕಾಗ ಒಂದೊಂದೆ ಅಧ್ಯಾಯ ಓದ ಬಹುದಾಗಿದೆ.
ಈಗ ಮೂಲ ಝಿಪ್ಪಿಗ್ರಫಿಗೆ ಬಂದ್ರೆ ಇಲ್ಲಿ ಝಿಪ್ಪಿ ಅಂದ್ರೆ ಲ್ಯಾಬ್ರಾಡಾಗ್. ಮತ್ತೊಬ್ಬ ಹೆಣ್ಣುಮಗಳು ಅಂದ್ರೆ ಅದು ಲೇಖಕಿ ಶೃತಿ ಜೈನ್. ಇಡೀ ಝಿಪ್ಪಿಗ್ರಫಿ ಓದಿಸಿಕೊಂಡು ಹೊಗುತ್ತದೆ. ಓದುಗರು ಶ್ವಾನ ಪ್ರಿಯರು ಆಗಿದ್ದರೇ, ಅವರೂ ಈ ಝಿಪ್ಪಿಗ್ರಫಿಯ ಭಾಗವೇ ಆಗಿ ಬಿಡುತ್ತಾರೆ.
ಇಲ್ಲಿ ಒಟ್ಟು 15 ಅಧ್ಯಾಯಗಳಿವೆ. ಒಂದೊಂದು ಅಧ್ಯಾಯವೂ ಝಿಪ್ಪಿಯ ಆಟ-ಓಟ-ಮತ್ತು ಜೀವನ-ಮರಣದ ಕಥೆ ಹೇಳುತ್ತವೆ. ಝಿಪ್ಪಿ ಕೂಡ ಹೆಣ್ಣಲ್ಲವೇ ಅನ್ನೊ ಅಧ್ಯಾಯ ಶ್ವಾನದ ಹೆಣ್ತನದ ಸತ್ಯ ಬಿಚ್ಚಿಡುತ್ತವೆ. ಲೇಖಕಿ ಕೂಡ ಅದನ್ನ ಅಷ್ಟೇ ಸೂಕ್ಷ್ಮವಾಗಿಯೇ ಹೇಳಿರೋದು ವಿಶೇಷ.
ಝಿಪ್ಪಿಯ ತಾಯ್ತನದ ಖುಷಿಯನ್ನ ಲೇಖಕಿ ಕೂಡ ಅನುಭವಿಸಿರೋ ಚಿತ್ರಣ ಇಲ್ಲಿ ಸಿಗುತ್ತದೆ. ಮಕ್ಕಳಾಗದಂತೆ ಝಿಪ್ಪಿಗೆ ಆಪರೇಷನ್ ಮಾಡಿಸಿದಾಗ ಆದಂತಹ ಕಷ್ಟಗಳನ್ನ ಲೇಖಕಿ ಮತ್ತು ಝಿಪ್ಪಿ ಅನುಭವಿಸಿದ್ದಾರೆ.
ಈ ಝಿಪ್ಪಿಗ್ರಫಿ ನಿಮ್ಮ ಹೃದಯ ತಟ್ಟುತ್ತದೆ. ಹೆಣ್ಣು ಶ್ವಾನದ ಜೀವನ ಕೂಡ ಹೆಣ್ಣುಮಕ್ಕಳ ಜೀವನದ ಹಾಗೆನೇ ಅನ್ನೊದನ್ನ ಇದು ಶ್ವಾನ ದ್ವೇಷಿಗಳಿಗೆ ಒತ್ತಿ ಹೇಳುತ್ತದೆ. ಶ್ವಾನ ಪ್ರೀಯರ ಎದೆಯಲ್ಲಿ ಹೆಣ್ಣು ಶ್ವಾನದ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿಯನ್ನ ಹುಟ್ಟಿಸುತ್ತದೆ.
-ರೇವನ್ ಪಿ.ಜೇವೂರ್
PublicNext
29/01/2022 08:10 pm