ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಪದವೀಧರನಾದರೂ ಕೃಷಿವೀರ ಈ ಶಿವಪ್ರಕಾಶ; "ಜೀವನವಾಯಿತು ಪ್ರಕಾಶಮಾನ"

ನರಗುಂದ: ಶಿಕ್ಷಣ ಕೇವಲ ಬದುಕಿಗಷ್ಟೇ, ನಾವೂ ಮಾಡುವ ಕಾಯಕಕ್ಕೆ ಅಲ್ಲ ಎಂಬ ಮಾತನ್ನು ಇಲ್ಲೊಬ್ಬ ಪದವೀಧರ ನಿರೂಪಿಸಿದ್ದಾರೆ. ಬಿಎ ಓದಿದ್ರೂ ಕೃಷಿಯಲ್ಲಿ ವೀರನಾಗಿ ಊರಿಗೆ ಮೆಂಬರ್ ಆಗಿ ನಾಲ್ಕು ಜನರ ನಡುವೆ ಚೆಂದದ ಬದುಕನ್ನು ಕಟ್ಟಿಕೊಂಡಿದ್ದಾರೆ.

ಹೌದು... ನರಗುಂದ ತಾಲೂಕಿನ ಯಾಸಾ ಹಡಗಲಿ ಗ್ರಾಮದ ಪ್ರಗತಿಪರ ರೈತ ಶಿವಪ್ರಕಾಶ್ ಗದಿಗೆಪ್ಪ ಬೋಪಳಾಪೂರ ದೇಶಪಾಂಡೆ ಫೌಂಡೇಶನ್ ಸಹಕಾರದಲ್ಲಿ 100×100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಸ್ವಚ್ಛಂದದ ಪೈರನ್ನು ಬೆಳೆದು ಜಯ ಕಂಡಿದ್ದಾರೆ.

ಒಣಬೇಸಾಯದ ನಡುವೆ ಕೃಷಿಯಲ್ಲಿ ಲಾಸ್ ಎಂಬ ಪದವನ್ನು ಕೃಷಿಯಲ್ಲೇ ಕೈಲಾಸ ಎಂಬಂತೆ ಸಾಧನೆ ಮಾಡಿದ್ದು, ಪ್ರಸಕ್ತ ವರ್ಷ ಕೃಷಿಹೊಂಡ ಆಶ್ರಿತವಾಗಿ ಮುಂಗಾರು ಹೆಸರು, ಈರುಳ್ಳಿ, ಗೋಧಿ, ಮೆಣಸಿನಕಾಯಿ ಬೆಳೆದ ಶಿವಪ್ರಕಾಶ್ ಕಳೆದ ವರ್ಷ ಹಿಂಗಾರು ಬೆಳೆಯ ನಿವ್ವಳ ಲಾಭ ಪಡೆದು 11 ಎಕರೆ ಜಮೀನಿನಲ್ಲಿ ಉತ್ತಮ ಇಳುವರಿ ಪಡೆದಿದ್ದಾರೆ.

ಇನ್ನು, ಕೃಷಿಗೆ ಆಧುನಿಕತೆಯಲ್ಲಿ ವರ ಎಂಬಂತೆ ದೇಶಪಾಂಡೆ ಫೌಂಡೇಶನ್ ನೀಡಿದ ಕೃಷಿಹೊಂಡ ಮಣ್ಣಿನ ಸವಕಳಿ, ಅಂತರ್ಜಲ ಮಟ್ಟ ಸುಧಾರಿಸುವಲ್ಲಿ ನೆರವಾಗಿ, ಕ್ರಿಮಿನಾಶಕ ಸಿಂಪಡಣೆಗೂ ಸಹ ಜಲದ ಬರ ನೀಗಿ ಜಾನುವಾರುಗಳಿಗೂ ಸಹ ದಾಹ ನೀಗಿಸಿದೆ.

ಒಟ್ಟಾರೆ ಕೃಷಿಹೊಂಡ ಆದೆಷ್ಟೋ ರೈತರಿಗೆ ವರವಾಗಿ ಕೃಷಿಯನ್ನು ವಾಣಿಜ್ಯೀಕರಣವನ್ನಾಗಿ ಪರಿವರ್ತಿಸುತ್ತಿದೆ.

Edited By : Nagesh Gaonkar
PublicNext

PublicNext

31/08/2022 05:16 pm

Cinque Terre

135.11 K

Cinque Terre

3