ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : ದುಡಿಮೆ ಮೀರಿದ ಆದಾಯ ಕೃಷಿಹೊಂಡವೇ ಲಕ್ಷ ಲಕ್ಷಕ್ಕೆ ಅಡಿಪಾಯ

ನರಗುಂದ : ಅಬ್ಬಾ ! ಆ ಒಣ‌ಬೇಸಾಯ, ದುಡಿಮೆಗೆ ತಕ್ಕಷ್ಟೂ ಸಿಗದ ಪ್ರತಿಫಲ, ಮಳೆಯನ್ನೇ ಆಶ್ರಿಯಿಸುತ್ತಾ ಕಾಯುವ ಸಮಯ ಋತುಮಾನಕ್ಕೆ ಹೊಂದಿಕೊಂಡೆ ಭೂಮಿಯನ್ನು ಉತ್ತಿ ಬಿತ್ತಿ ಬೆಳೆಯಬೇಕಾದ ಒತ್ತಡ ಎಲ್ಲವೂ ಈಗ ಒಂದೇ ಒಂದು ಕೃಷಿಹೊಂಡದಿಂದ ಬದಲಾಗಿದೆ.

ಹೌದು ! ಒಣ ಬೇಸಾಯದ ಮಾರ್ಗದ ಮೂಲಕ ಮಳೆ ಅಭಾವ ಅನುಭವಿಸುತ್ತಿದ್ದ ರೈತರಿಗೆ ನೆರವಾದ ಕೃಷಿಹೊಂಡ ದುಡಿಮೆಗಿಂತ ಅಧಿಕ ಫಲ, ಮಿಶ್ರ ಬೆಳೆ ಬೆಳೆಯುವ ಛಲ, ಎಲ್ಲದಕ್ಕಿಂತ ಮಿಗಿಲಾಗಿ ತನ್ನಿಷ್ಟದ ವರಮಾನ ಹೆಚ್ಚಿಸುವ ವಾಣಿಜ್ಯ ಬೆಳೆಗೂ ಸಹಕಾರಿಯಾಗಿದೆ.

ಅದರಂತೆ ನರಗುಂದ ತಾಲೂಕಿನ ಹದಲಿ ಗ್ರಾಮದ ರೈತ ಈರನಗೌಡ ಜುಟ್ಟಪ್ಪನವರ ತಮ್ಮ 8 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಹತ್ತಿ, ಗೋವಿನಜೋಳ, ಹೆಸರು ಬೆಳೆ ಅತ್ಯಧಿಕ ಇಳುವರಿಯ ಆದಾಯ ಪಡೆದಿದ್ದಾರೆ.

ಇದೇ ಒಣಬೇಸಾಯದ ಕೃಷಿಯಲ್ಲಿ ದುಡಿಮೆಗೆ ತಕ್ಕ ಪ್ರತಿಫಲ ಸಿಗದಾದ ಇವರು, ಇದೀಗ ಕೃಷಿಹೊಂಡ ನಿರ್ಮಾಣದ ಮೂಲಕ ಹಸನ್ಮುಖಿ ಆಗಿ 80 ಸಾವಿರ ಮೌಲ್ಯದ ಹತ್ತಿ, ಲಕ್ಷ ಮೌಲ್ಯದ ಹೆಸರು, ಲಕ್ಷ ಮೌಲ್ಯದ ಗೋವಿನಜೋಳ ಬೆಳೆದಿದ್ದಾರೆ.

ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ರೈತರ ಛಲ, ಬಲದ ಜೊತೆ ಆತ್ಮವಿಶ್ವಾಸದ ಒಲವನ್ನು ಹೆಚ್ಚಿಸಿ ಸಾಧನೆ ಎಡೆಗೆ ಪ್ರೇರೆಪಿಸುತ್ತಿದೆ.

Edited By : Nagesh Gaonkar
PublicNext

PublicNext

30/07/2022 05:04 pm

Cinque Terre

150.42 K

Cinque Terre

0