ನರಗುಂದ: ಆತನ ವಯಸ್ಸು ಈಗಿನ್ನೂ ಕೇವಲ 23. ಆದ್ರೆ, ಕಾಯಕ ಮಾತ್ರ ಯಾವ ಪ್ರಗತಿಪರ ರೈತನಿಗಿಂತ ಕಡಿಮೆ ಇಲ್ಲಾ! ಎಲ್ಲರೂ ಓದು, ಉದ್ಯೋಗ ಎನ್ನುವ ಕಾಲದಲ್ಲಿ ಈತ ಶಿಕ್ಷಣ ಸಾಕು, ರೈತಾಪಿ ಕಾಯಕವೇ ಬೇಕು ಅಂತಾನೇ.
ಹೀಗೂ ಇದ್ದಾರಾ ? ಈಗಲೂ ಕೃಷಿ ಕಾಯಕಕ್ಕೆ ಯುವಕರು ಬರ್ತಾರಾ ? ಎಂಬ ಮಾತಿಗೆ ನೈಜ ಉದಾಹರಣೆಯೇ ಈ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಯುವ ರೈತ ವಿಠ್ಠಲ ರಾವ್ ಅಶೋಕ್ ಜಾಧವ್ ಅವರ ಪ್ರಸ್ತುತ ಕಾಯಕವೇ ಸ್ಫೂರ್ತಿ.
ಮೆಟ್ರಿಕ್ ಪರೀಕ್ಷೆ ಮುಗಿಸಿ ಐಟಿಐ ಎಲೆಕ್ಟ್ರಿಷಿಯನ್ ಆಗಿದ್ದೇ ತಡ, ಈತ ತಂದೆ- ತಾಯಿಗೆ ನೆರವಾಗಿ ಕೃಷಿ ಕಾಯಕ ಅವಲಂಬಿಸಿ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು ತನ್ನ 2 ಎಕರೆ 11 ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿ ಚಿನ್ನದ ಬೆಳೆ ಬೆಳೆದು ಬೆಲೆ ಪಡೆದಿದ್ದಾನೆ.
ತಮ್ಮ ಜಮೀನಿನಲ್ಲಿ ಕೃಷಿಹೊಂಡ ಆಶ್ರಿತವಾಗಿ ತರಕಾರಿ, ಹಣ್ಣು ಹಂಪಲು, ಮಸಾಲೆ ಪದಾರ್ಥದ ಜೊತೆ ವಾಣಿಜ್ಯ ಸಿರಿವಂತಿಕೆ ಫಲ ಶ್ರೀಗಂಧ, ಮಹಾಗಣಿ ಹಾಗೂ ಮೀನು ಸಾಕಾಣಿಕೆ ಆರಂಭಿಸಿದ ವಿಠ್ಠಲ ರಾವ್ ಜಾಧವ್ ಕೃಷಿ ಉತ್ಸಾಹದ ಜೊತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...
PublicNext
28/07/2022 11:30 am