ನರಗುಂದ : ಇವರು ಬಿ.ಎ ಪದವೀಧರು 1987 ರಲ್ಲೇ ಇವ್ರು ಓದಿದ ಬಿಎ ಪದವಿಯಿಂದ ಮನಸ್ಸು ಮಾಡಿದ್ರೆ ಇವತ್ತು ಯಾವುದೋ ಉನ್ನತ ಹುದ್ದೆಯಲ್ಲಿ ಇರಬೇಕಾಗಿತ್ತು.
ಆದ್ರೇ ! ಇವ್ರಿಗೆ ಉನ್ನತ ಹುದ್ದೆ ಬದಲಾಗಿ ಭೂತಾಯಿಯ ಕೃಷಿಯಲ್ಲೇ ಹೊಸ ಕನಸು ಕಂಡು ತಮ್ಮ ಬಿಎ ಹಾಗೂ ಐಟಿಐ ಶಿಕ್ಷಣದ ಉನ್ನತ ಹುದ್ದೆ ಬದಲಾಗಿ ರೈತಾಪಿ ಕಾಯಕ ಮಾಡುತ್ತಾ ಅದರಲ್ಲೇ ಜಯ ವಿಜಯ ಕಂಡಿದ್ದಾರೆ.
ಅರೆ.! ಯಾರಿವರು ಎಲ್ಲೀಯವರು ಅಂದ್ರಾ ? ಇವರೇ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಪ್ರಗತಿಪರ ಶಿಕ್ಷಣಸ್ಥ ರೈತ ಅಪ್ಪಣ್ಣಪ್ಪ ಯಲ್ಲಪ್ಪ ಉಡಕೇರಿ ತಮ್ಮ 13 ಎಕರೆ 20 ಗುಂಟೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಬರೋಬ್ಬರಿ 40 ಕ್ಕೂ ಅಧಿಕ ವಿಧ ವಿಧದ ಬೆಳೆ ಬೆಳೆದು ಇಂದಿನ ದೇಶ್ ಕೃಷಿ ಸಂಚಿಕೆಯ ಸಾಧಕ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ.
ಇವರ ಜಮೀನಿನಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಹೊಸ ತರಹದ ಬೆಳೆ ಅಂದ್ರೇ ಕಪ್ಪು ಮಣ್ಣಿನಲ್ಲಿ ವಿರಳವಾದ ಪಪ್ಪಾಯಿ, ನಿಂಬೆ, ಅಡಿಕೆ, ಮಹಾಗಣಿ, ಶ್ರೀಗಂಧ ತರಕಾರಿ ಬೆಳೆಗಳಾದ ಕ್ಮಾಬೀಜ್, ಟೊಮೆಟೊ, ವಾಣಿಜ್ಯ ಬೆಳೆ ಕಬ್ಬು, ಉದ್ದು, ಹೆಸರು, ಸೇರಿದಂತೆ ಹಣ್ಣು ಮಸಾಲೆ ಪದಾರ್ಥ ದಾಲ್ಚಿನ್ನಿ, ಸೀತಾಫಲ, ದಾಳಿಂಬೆ, ಕಂಚಿ, ಅಂಜೂರ ಅಬ್ಬಾ ! ಇನ್ನೂ ಯಾವ ಯಾವ ಫಲವಿದೆ ಅದನ್ನು ಬೆಳೆದ ಛಲ ಹೇಗಿದೆ ಎಂಬುದರ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ರೈತ ಅಪ್ಪಣ್ಣಪ್ಪ ಯಲ್ಲಪ್ಪ ಉಡಕೇರಿ ಜೊತೆ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ.
PublicNext
27/07/2022 04:11 pm