ಅಣ್ಣಿಗೇರಿ : ಅಬ್ಬಾ ! ಒಣ ಬೇಸಾಯದ ಕೃಷಿಯಲ್ಲಿದ್ದ ರೈತರಿಗೆ ಕೃಷಿಹೊಂಡ ವರದಾನವಾಗಿ ಅನ್ನದಾತನ ಮೊಗದಲ್ಲಿ ಆನಂದ ತಂದಿದೆ.
ಹೌದು ! ಇಂತಹ ಆನಂದದ ಕ್ಷಣಗಳನ್ನು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 120/120 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಪ್ರಗತಿಪರ ರೈತ ಮಲ್ಲಪ್ಪ ಫಕ್ಕೀರಪ್ಪ ತೊರವಿ ಅವರು ತಮ್ಮದಾಗಿಸಿಕೊಂಡಿದ್ದಾರೆ.
ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ರೈತ ಮಲ್ಲಪ್ಪ ತೊರವಿ ಮುಂಗಾರು ಹೆಸರು, ಶೇಂಗಾ ಬೆಳೆಯ ಅತ್ಯುತ್ತಮ ಲಾಭದ ಜೊತೆ ಹಿಂಗಾರು ಕಡಲೆ, ಗೋಧಿ ಬೆಳೆ ಬೆಳೆದು ಉತ್ತಮ ಲಾಭ ಕಂಡುಕೊಂಡಿದ್ದಾರೆ.
ಇದೇ ಮೊದಲು ಒಣ ಬೇಸಾಯದ ಮಾರ್ಗ ಅನುಸರಿಸಿ ಅಷ್ಟಕಷ್ಟೇ ಲಾಭ ಪಡೆಯುತ್ತಿದ್ದ ರೈತಾಪಿ ಮಕ್ಕಳಿಗೆ ಕೃಷಿಹೊಂಡ ವರದಾನವಾಗಿ ವಾರ್ಷಿಕ 5 ಎಕರೆ ಜಮೀನಿನಲ್ಲಿ 4 ಲಕ್ಷ ರೂಪಾಯಿ ಆದಾಯಕ್ಕೆ ಸೈ ಎಂದು, ಇನ್ನುಳಿದ ಜಮೀನಿಗೆ ಮತ್ತೊಂದು ಕೃಷಿಹೊಂಡ ನಿರ್ಮಿಸಿಕೊಳ್ಳುವ ಉತ್ಸಾಹ ತೋರಿದ್ದಾರೆ.
PublicNext
30/03/2022 07:14 pm