ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಲಿಕಾರರು ಸಿಗದೆ ಅಜವಾನ ರಾಶಿಗೆ ಕಾರ್ ಬಳಸಿ ಸ್ಫೂರ್ತಿಯಾದ ರೈತ

ವಿಜಯಪುರ:ಕೃಷಿ ಮಾಡುವುದು ಈಗ ಅಷ್ಟು ಸುಲಭವಲ್ಲ. ಎಲ್ಲವೂ ಸರಿ ಇದೆ ಅನ್ನೋ ಹೊತ್ತಿಗೆ ಕೃಷಿ ಕಾರ್ಮಿಕರು ಕೈಕೊಡ್ತಾರೆ. ಇಲ್ಲವೇ ಹೆಚ್ಚಿನ ದುಡ್ಡುಕೊಟ್ಟು ಅವರನ್ನ ಮನೆಗೆ ಹೋಗಿ ಕರೆದುಕೊಂಡು ಬರಬೇಕು.ಈ ಒಂದು ಸಮಸ್ಯೆಗೆ ಈಗ ವಿಜಯಪುರದ ರೈತ ಹೊಸ ಐಡಿಯಾ ಕಂಡು ಹಿಡಿದಿದ್ದಾರೆ.ನೋಡಿ.

ಮುದ್ದೇಬಿಹಾಳ ತಾಲೂಕಿನ ಶಿರೂರ ಗ್ರಾಮದ ರೈತ ಮುತ್ತಣ್ಣ ಪ್ಯಾಟಿಗೌಡರ ಅಜವಾನ ಬೆಳೆದಿದ್ದರು. ಆದರೆ ಇದನ್ನ ರಾಶಿ ಮಾಡಲು ಕೂಲಿಕಾರರೇ ಸಿಗಲಿಲ್ಲ. ಆಗ ಈ ಮುತ್ತಣ್ಣನಿಗೆ ಹೊಳೆದಿದ್ದೇ ಈ ಕಾರ್ ಐಡಿಯಾ.ತಮ್ಮ ಮಹೀಂದ್ರಾ ಕೆಯುವಿ100 ಕಾರ್ ನಿಂದಲೇ ಹೊಲದಲ್ಲಿ ಬೆಳೆದಿದ್ದ ಅಜವಾನವನ್ನ ರಾಶಿ ಮಾಡಿದ್ದಾರೆ.

ಅಜವಾನ ರಾಶಿ ಮಾಡಲು ಕಾರ್ ಬಳಸಿದ್ದರಿಂದ ಕೂಲಿಕಾರರ ಅಗತ್ಯ ಕಡಿಮೆ ಆಯಿತು. ಇದರಿಂದ ಸಹಾಯವೂ ಆಯಿತು ಅಂತಲೇ ಮುತ್ತಣ್ಣ ಹೇಳಿಕೊಂಡಿದ್ದಾರೆ.

ಅಂದ್ಹಾಗೆ ಇವರಿಗೆ ಈ ಕಾರ್ ಬಳಕೆ ಐಡಿಯಾ ಬಂದದ್ದು ಯುಟ್ಯೂಬ್‌ನಿಂದಲೇ. ಯುಟ್ಯೂಬ್‌ ನಲ್ಲಿ ಅದ್ಯಾರೋ ಒಬ್ಬರು ರಾಶಿ ಮಾಡಲು ಕಾರ್ ಬಳಸಿದ್ದರಂತೆ. ಅದನ್ನೆ ಇಲ್ಲಿ ಸ್ಫೂರ್ತಿಯಾಗಿಟ್ಟುಕೊಂಡು ಅಜವಾನ ರಾಶಿ ಮಾಡಿ

ಊರ ಜನರ ಗಮನ ಸೆಳೆದ್ದಾರೆ.

Edited By : Shivu K
PublicNext

PublicNext

22/12/2021 10:55 am

Cinque Terre

47.06 K

Cinque Terre

0