ಭೋಪಾಲ್: ತಾನು ಬೆಳೆದ ಬೆಳ್ಳುಳ್ಳಿಗೆ ಸೂಕ್ತ ಬೆಲೆ ಸಿಗ್ಲಿಲ್ಲ ಅಂತ ಆಕ್ರೋಶಗೊಂಡ ರೈತ ಹರಾಜು ನಡೆಯುತ್ತಿದ್ದ ಸ್ಥಳದಲ್ಲೇ 160 ಕೆಜಿ ಬೆಳ್ಳುಳ್ಳಿಯನ್ನು ಸುಟ್ಟ ಘಟನೆ ಭೋಪಾಲ್‌ನ ಮಂಡ್ಸೌರ್ ನಲ್ಲಿ ನಡೆದಿದೆ. ಶಂಕರ್ ಸಿರ್ಫಿರಾ ಎಂಬ ರೈತ ತಾನು ಬೆಳೆದ ಬೆಳ್ಳುಳ್ಳಿಯನ್ನು ಮಂಡಿಯಲ್ಲಿ ನಡೆಯುತ್ತಿದ್ದ ಹರಾಜಿನಲ್ಲಿ ಮಾರಾಟ ಮಾಡಲು ತಂದಿದ್ದ. ಈತ 5000 ರೂ ಖರ್ಚು ಮಾಡಿ ಬೆಳೆದ ಬೆಳ್ಳುಳ್ಳಿಗೆ ಖರೀದಿದಾರರು 1100 ರೂ ನಿಗಧಿ ಮಾಡಿದ್ರು. ಇದ್ರಿಂದ ಸಿಟ್ಟಾದ ರೈತ ಬೆಳ್ಳುಳ್ಳಿಯನ್ನು ಸುಟ್ಟು ಹಾಕಿ ಜೈಜವಾನ್ ಜೈ ಕಿಸಾನ್ ಅಂತ ಘೋಷಣೆ ಕೂಗುತ್ತಿದ್ದ. ತಕ್ಷಣ ಮಂಡಿಯಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ರು. ಬೇರೆ ರೈತರ ಬೆಳೆಗೆ ಹಾನಿಯಾಗದಂತೆ ತಡೆದರು. ನಂತರ ರೈತ ಶಂಕರ್‌ನನ್ನ ಪೊಲೀಸರು ತಮ್ಮ ವಶಕ್ಕೆ ಪಡೆದರು. ಆದ್ರೆ ಬೇರೆಯವರ ಬೆಳೆಗಳಿಗೆ ಏನೂ ಹಾನಿಯಾಗದ ಕಾರಣ ರೈತನ ಮೇಲೆ ಕೇಸ್ ದಾಖಲಾಗಿಲ್ಲ.
PublicNext
19/12/2021 03:54 pm