ಗದಗ: ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತನಿಗೆ ಕೀಟಬಾಧೆಯ ಆತಂಕ ಶುರುವಾಗಿದೆ.ಹೌದು..ಕೋರಿಹುಳುವಿನ ಕಾಟ ಅನ್ನದಾತನನ್ನ ಕೊರಗುವಂತೆ ಮಾಡಿದೆ. ಗದಗ ತಾಲೂಕಿನ ಸಂಭಾಪುರ ಗ್ರಾಮದ ರೈತರಿಗೆ ಕೋರಿಹುಳಗಳ ಕಾಟ ತಲೆನೋವಾಗಿದೆ. ಗ್ರಾಮದ ಮಂಜು ಮನ್ನೂರ ಅನ್ನೋ ರೈತ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾನೆ. ಆದ್ರೆ ಚಿಗುರೊಡೆದ ಎಲೆ ಹಾಗೂ ತೆನೆಗಳನ್ನ ಕೋರಿಕೀಟಗಳು ತಿಂದು ಹಾಕುತ್ತಿವೆ. ಗ್ರಾಮದ ಬಹುತೇಕ ಬೆಳೆಗಳಿಗೆ ಈ ಕೀಟಬಾಧೆ ಅಂಟಿಕೊಂಟಿದ್ದು ಇನ್ನಿತರ ಹಿಂಗಾರಿನ ಬೆಳೆಗಳಿಗೂ ವ್ಯಾಪಿಸುತ್ತಿದೆ. ಹೀಗೆ ಬೆಳೆ ಹಾಳಾಗುತ್ತಿರೋದನ್ನ ರೈತ ಮಂಜು ಸ್ವತಃ ತಾನೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಆ ಮೂಲಕ ಕೃಷಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾನೆ. ಸದ್ಯ ರೈತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜಮೀನುಗಳಿಗೆ ಕೃಷಿ ಅಧಿಕಾರಿಗಳು ಬಂದು ಭೇಟಿ ನೀಡುವಂತೆ ರೈತ ಅಳಲು ತೋಡಿಕೊಂಡಿದ್ದಾನೆ.
PublicNext
25/10/2021 01:48 pm