ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾತೆಗೆ ಜಮೆ ಆಯ್ತು 52 ಕೋಟಿ ರೂ. : ಆವಾಕ್ಕಾದ ರೈತ

ಪಟನಾ: ಬಿಹಾರದಲ್ಲಿ ಇತ್ತಿಚ್ಚೆಗೆ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸುಮಾರು 900 ಕೋಟಿ ರೂ.ಗಿಂತ ಅಧಿಕ ಹಣ ಜಮೆಯಾದ ಬೆನ್ನಲ್ಲೇ ಇದೇ ರಾಜ್ಯದ ರೈತರೊಬ್ಬರ ಬ್ಯಾಂಕ್ ಖಾತೆಗೆ ಬರೋಬ್ಬರಿ 52 ಕೋಟಿ ರೂ. ಜಮೆಯಾಗಿದೆ. ಮುಜಫ್ಫರ್ಪುರ ಜಿಲ್ಲೆ ಸಿಂಗಾರಿ ಗ್ರಾಮದ ರೈತ ರಾಮ್ ಬಹದ್ದೂರ್ ಶಾ ಅವರ ಖಾತೆಗೆ ಹಣ ಜಮೆಯಾಗಿದ್ದಕ್ಕೆ ಖುದ್ದು ಶಾ ಅವರೇ ಆವಾಕ್ಕಾಗಿದ್ದಾರೆ. ಕಾತ್ರಾ ಗ್ರಾಮದಲ್ಲಿ ಶಾ ಅವರ ಬ್ಯಾಂಕ್ ಖಾತೆ ಇದೆ. ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಜಮೆಯಾಗಿರುವ ಕುರಿತು ಮಾಹಿತಿ ಪಡೆಯಲು ಇವರು ಬ್ಯಾಂಕ್ ಗೆ ತೆರಳಿದ್ದು, ಈ ವೇಳೆ ಖಾತೆಯಲ್ಲಿ 52 ಕೋಟಿ ರೂ. ಇದೆ ಎಂದು ಬ್ಯಾಂಕ್ ಅಧಿಕಾರಿ ತಿಳಿಸಿದ್ದನ್ನು ಕೇಳಿ ರೈತ ಅಚ್ಚರಿಗೊಂಡಿದ್ದಾರೆ.

ನಾವು ಗ್ರಾಮಗಳಲ್ಲಿ ವಾಸಿಸುವ ಬಡ ರೈತರಾಗಿದ್ದೇವೆ. ಹಣ ಹೇಗೆ ಬಂದಿದೆ ಎಂಬುದರ ಬಗ್ಗೆ ಗೊತ್ತಿಲ್ಲ. ಸರಕಾರ ನಮಗೆ ಹಣಕಾಸು ನೆರವು ನೀಡಿದರೆ ಸುಗಮವಾಗಿ ಜೀವನ ಸಾಗಿಸಬಹುದಾಗಿದೆ,'' ಎಂದು ರಾಮ್ ಬಹದ್ದೂರ್ ಶಾ ತಿಳಿಸಿದ್ದಾರೆ. ಕಳೆದ ಕೆಲದ ದಿನಗಳಲ್ಲಿ ಬಿಹಾರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇದೆ. ತಾಂತ್ರಿಕ ದೋಷದಿಂದ ಈ ರೀತಿ ಸಂಭವಿಸುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಹಣದ ಮೊತ್ತ ಮಾತ್ರ ಕಾಣಿಸುತ್ತದೆ. ನಿಜಕ್ಕೂ ಇಷ್ಟು ಹಣ ಜಮೆಯಾಗಿರುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Edited By : Nirmala Aralikatti
PublicNext

PublicNext

18/09/2021 10:52 pm

Cinque Terre

67.43 K

Cinque Terre

1