ಚಿತ್ರದುರ್ಗ: ರಾಜ್ಯದಲ್ಲಿ ಟೊಮೆಟೊ ಬೆಲೆ ಕುಸಿತ ಕಂಡಿದ್ದು ಲಕ್ಷಾಂತರ ರೂಪಾಯಿ ಹಣ ಖರ್ಚ್ ಮಾಡಿ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಇತ್ತ ವ್ಯಾಪರಿಯೊಬ್ಬ ಉತ್ತರ ಕರ್ನಾಟಕದ ರೈತನೊಬ್ಬರಿಂದ ಟೊಮೆಟೊ ಖರೀದಿಸಿ ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿರುವಾಗ ಬೆಲೆ ಕುಸಿತ ಕೇಳಿ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ - 13 ರ ರಸ್ತೆ ಬದಿಯಲ್ಲಿ ನೂರಾರು ಟ್ರೇ ಟೊಮೇಟೊವನ್ನು ಸುರಿದು ಹೋಗಿರುವ ಘಟನೆ ನಡೆದಿದೆ.
ಅವಿನಾಶ್ ಎನ್ನುವ ವ್ಯಾಪಾರಿ ಬೀದರ್ ಜಿಲ್ಲೆಯ ರೈತರೊಬ್ಬರಿಂದ ಟೊಮೆಟೊ ಖರೀದಿಸಿ ಬೆಂಗಳೂರಿಗೆ ಲಾರಿಯಲ್ಲಿ ಟೊಮೆಟೊ ತುಂಬಿಕೊಂಡು ಬೆಂಗಳೂರಿಗೆ ಹೊರಟಿದ್ದರು. ಆದರೆ ಬೆಲೆ ಕುಸಿದಿದ್ದರಿಂದ 120 ಟೊಮೆಟೊ ಹಣ್ಣಿನ ಟ್ರೇಗಳನ್ನು ರಸ್ತೆ ಪಕ್ಕದಲ್ಲಿ ಸುರಿದು ಬೀದರ್‌ಗೆ ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.
ಮತ್ತೊಂದು ಕಡೆ ಹಿರಿಯೂರು ರೈತನಿಗೆ ಸಿಗದ ಲಾಭ: ತಾಲೂಕಿನ ಮಾರಪ್ಪನಹಟ್ಟಿ ಗ್ರಾಮದ ರೈತನಿಗೂ ಸಹ ಟೊಮೆಟೊ ದರ ಸಿಗದ ಕಾರಣ ಹತ್ತಾರು ಟೊಮೆಟೊ ಬಾಕ್ಸ್ ಹಣ್ಣುಗಳನ್ನು ರಸ್ತೆ ಪಕ್ಕದಲ್ಲಿ ಸುರಿದಿದ್ದಾರೆ. ಸಾವಿರಾರು ರೂ. ಬಂಡವಾಳ ಹಾಕಿ ಬೆಳೆ ಬೆಳೆದು, ಭೂಮಿಗೆ ಹಾಕಿದ ಬಂಡವಾಳವೂ ಕಾಣಲು ಸಾಧ್ಯವಾಗುತ್ತಿಲ್ಲ ಎನ್ನಬಹುದು.
PublicNext
12/09/2021 01:58 pm