ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೋಧಿ, ಬೇಳೆ, ಸಾಸಿವೆ ಸೇರಿದಂತೆ 6 ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ, ಗೋಧಿ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 40 ರೂ.ಗೆ ಹೆಚ್ಚಿಸಲಾಗಿದ್ದು, ಗೋಧಿ ಬೆಂಬಲ ಬೆಲೆ 2015 ರೂಪಾಯಿಯಾಗಿದೆ. ಕಡಲೆಯ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ 130 ರೂಪಾಯಿ ಏರಿಕೆ ಮಾಡಲಾಗಿದ್ದು, ಕಡಲೆಗೆ 5,100 ರೂಪಾಯಿ ಬೆಂಬಲ ಬೆಲೆ ಸಿಗಲಿದೆ.
ಎಣ್ಣೆಬೀಜಗಳ ಬೆಂಬಲ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಸಾಸಿವೆ ದರ ಪ್ರತಿ ಕ್ವಿಂಟಾಲ್ ಗೆ 400 ರೂಪಾಯಿ ಹೆಚ್ಚಿಸಲಾಗಿದ್ದು, ಬೆಂಬಲ ಬೆಲೆ ಕ್ವಿಂಟಲ್ ಗೆ 4,650 ರೂಪಾಯಿಯಾಗಿದೆ. ಅದೇ ಸಮಯದಲ್ಲಿ, ಬೇಳೆಗಳ ಬೆಲೆ ಕೂಡ ಪ್ರತಿ ಕ್ವಿಂಟಾಲ್ ಗೆ 400 ರೂಪಾಯಿ ಹೆಚ್ಚಾಗಿದ್ದು, ಪ್ರತಿ ಕ್ವಿಂಟಲ್ ಗೆ ಬೆಂಬಲ ಬೆಲೆ 5100 ರೂಪಾಯಿಯಾಗಲಿದೆ. ಪ್ರತಿ ಕ್ವಿಂಟಾಲ್ ಬಾರ್ಲಿ ಬೆಂಬಲ ಬೆಲೆ 1635 ರೂಪಾಯಿಯಾಗಿದೆ.
PublicNext
08/09/2021 05:07 pm