ಹುಬ್ಬಳ್ಳಿ: ರಾಜ್ಯದಲ್ಲಿ ಹೆಸರುಕಾಳು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಮಂಗಳವಾರ ಈ ವಿಷಯವನ್ನು ತಿಳಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ ಕುಸಿದಿದ್ದು, ಕೂಡಲೇ 2021-21 ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಕಾಳನ್ನು ಕನಿಷ್ಠ ಬೆಂಬಲ ಬೆಲೆಯನ್ವಯ ನೋಂದಾಯಿತ ರೈತರಿಂದ ಖರೀದಿಸಲು ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು.
ಈ ಹಿನ್ನೆಲೆಯಲ್ಲಿ 30.000 ಮೆಟ್ರಿಕ್ ಟನ್ ಹೆಸರುಕಾಳನ್ನು ಬೆಂಬಲ ದರದಲ್ಲಿ ಖರೀದಿಸಲು ಕೇಂದ್ರ ಸರಕಾರ ಆದೇಶ ಹೊರಡಿಸಿ ರಾಜ್ಯಸರಕಾರಕ್ಕೆ ಸೂಚಿಸಿದೆಯೆಂದು ಸಚಿವ ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಕನಾಟಕ ರಾಜ್ಯ ಸರಕಾರ ಇದೇ ತಿಂಗಳು ದಿ. 18ರಂದು ಕೇಂದ್ರ ಕೃಷಿ ಇಲಾಖೆಗೆ ಪತ್ರ ಬರೆದು 2021-22 ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಮಾರುಕಟ್ಟೆಗೆ ಹೆಸರುಕಾಳು ಬರುತ್ತಿದ್ದು ರೂ. 3355 ರಿಂದ ರೂ. 7000 ಪ್ರತಿ ಕ್ವಿಂಟಾಲ್‍ಗೆ ಬೆಲೆ ಇದ್ದು, ಇದು ಸರಕಾರ ಘೋಷಿತ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಇದೆ.
ಇದರಿಂದ ರೈತರಿಗೆ ನಷ್ಟವಾಗುತ್ತಿದೆಯಲ್ಲದೆ ಮುಂಬರುವ ದಿನಗಳಲ್ಲಿ ಹೆಸರು ಕಾಳು ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಬೇಗನೆ ಖರೀದಿ ಕೇಂದ್ರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿಲಾಗಿತ್ತು.
ಮಂಗಳವಾರ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ತಮಗೆ ಈ ಬಗ್ಗೆ ಆದೇಶ ಪ್ರತಿ ಕಳುಹಿಸಿದ್ದಾರೆಂದು ತಿಳಿಸಿರುವ ಸಚಿವ ಜೋಶಿ ಅವರು, ಕಳೆದ ಒಂದು ತಿಂಗಳಿನಿಂದ ರೈತರ ಸಂಕಷ್ಟಗಳ ಕುರಿತು ಬೇಗನೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಪತ್ರ ಬರೆದ್ದರು.
PublicNext
24/08/2021 08:32 pm