ಚಿತ್ರದುರ್ಗ : ನಗರದ ಹಿರಿಯೂರಿನ ಕೆ.ಆರ್ ಹಳ್ಳಿ ಗೇಟ್ ಬಳಿ ಕೃಷಿ ಇಲಾಖಾಧಿಕಾರಿ ಉಲ್ಫತ್ ಜೈಬಾ ರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಚೆನ್ನಾಗಿರುವ ಬೆಳೆ ಬಗ್ಗೆ ಸಮೀಕ್ಷೆ ನಡೆಸುತ್ತೀರಾ !ಟೊಮ್ಯಾಟೋ ಬೆಳೆಗೆ ಏಳು ಲಕ್ಷ ಖರ್ಚು ಮಾಡಿದ್ದೇವೆ, ನಮಗೆ ಸಿಕ್ಕಿ ರುವುದು ಮಾತ್ರ 70 ಸಾವಿರ ಎಂದು ರೈತರು ಅಧಿಕಾರಿಯ ವಿರುದ್ಧ ಅಸಮಾಧಾನ ಹೊರಹಾಕಿದರು.
ಅಲ್ಲದೇ ರಸ್ತೆ ಪಕ್ಕದಲ್ಲಿರುವ ಜಮೀನುಗಳಿಗೆ ಮಾತ್ರ ಸಮೀಕ್ಷೆ ನಡೆಸುತ್ತೀರಿ.ಒಳಗಿರುವ ಜಮೀನುಗಳನ್ನು ಕೂಡ ಸಮೀಕ್ಷೆ ನಡೆಸಿ ಎಂದು ರಾಜಣ್ಣ ತಿಪ್ಪೇಸ್ವಾಮಿ ಮತ್ತು ಚಿಕ್ಕಣ್ಣ ಪಟ್ಟು ಹಿಡಿದು ದಬಾಯಿಸಿರುವ ಘಟನೆ ನಡೆದಿದೆ.
PublicNext
17/08/2021 12:54 pm