ಬೆಳಗಾವಿ: ಈ ಒಂದು ತರಕಾರಿ ಆ ಒಂದು ಭಾಗದಲ್ಲಿ ರೈತರು ಅತಿ ಹೆಚ್ಚು ಬೆಳೆಯುತ್ತಾರೆ.ಕಾರಣ ಆ ತರಕಾರಿ ಒಂದ್ ರೀತಿಯ ಅನ್ನಧಾತನಿಗೆ ಬಂಪರ್ ಲಾಟರಿ ಇದ್ದ ಹಾಗೇ.ಒಮ್ಮೆ ದರ ಬಂದ್ರೆ ರೈತನಿಗೆ ಲಾಭವಾಗುತ್ತೆ.. ಆದ್ರೆ ಅದೇ ದರ ಕಡಿಮೆ ಆದ್ರೆ ರೈತರಿಗೆ ನಯಾಪೈಸೆ ಲಾಭ ಬರಲ್ಲ.. ಮತ್ತೊಂದೆಡೆ ಕಳಪೆ ಬೀಜಗಳಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತನದ್ದಾಗಿದೆ. ಅಷ್ಟಕ್ಕೂ ನಾವು ಹೇಳ್ತಿರೋ ಆ ತರಕಾರಿ ಬೆಳೆ ಯಾವುವು ಅಂತೀರಾ ಈ ಸ್ಟೋರಿ ನೋಡಿ
ಬೆಳಗಾವಿ ತಾಲೂಕಿನ ಪಶ್ಚಿಮ ಭಾಗದಲ್ಲಿರುವ ಗ್ರಾಮಗಳಾದ ಕಡೋಲಿ, ಅಗಸಗಾ, ಅಲತಗಾ, ದೇವಗಿರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಎಲೆಕೋಸು ಬೆಳೆಯನ್ನು ಸಾಕಷ್ಟು ಬೆಳೆಯಲಾಗುತ್ತದೆ. ಈ ಭಾಗದ ರೈತರಿಗೆ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಎಲೆಕೋಸು, ಹೂಕೋಸು. ಬೆಳಗಾವಿ ತಾಲೂಕಿನ ಪಶ್ಚಿಮ ಭಾಗದ ಲಾಟರಿ ಬೆಲೆ ಅಂತಾನೇ ಎಲೆಕೋಸು ಅಂದ್ರೆ ಕ್ಯಾಬೇಜ್‌ಗೆ ಕರೆಯಲಾಗುತ್ತದೆ. ಕಾರಣ ಒಂದ್ಸಾರಿ ಈ ಬೆಳೆ ಕೈ ಹೀಡಿತೆಂದರೇ ರೈತನಿಗೆ ದುಪ್ಪಟ್ಟು ಲಾಭ ಮಾಡಿಕೊಡುತ್ತೆ. ಇಲ್ಲವಾದ್ರೆ ಸಾಗಾಣಿಕಾ ವೆಚ್ಚ, ಸಸಿ ತಂದು ನಾಟಿ ಮಾಡಿದ ವೆಚ್ಚವೂ ಬಾರದ ಸ್ಥಿತಿಗೆ ತಂದೊಡ್ಡುತ್ತೆ. ಇತ್ತೀಚೆಗೆ ಲಾಕ್‌ಡೌನ್ ಅವಧಿಯಲ್ಲಿ ಕ್ಯಾಬೇಜ್ ಅಂದ್ರೆ ಎಲೆಕೋಸಿಗೆ ಉತ್ತಮ ಬೆಲೆ ಸಿಗದೇ ಟ್ರ್ಯಾಕ್ಟರ್‌ನಿಂದ ಎಲೆಕೋಸನ್ನು ನೆಲದಲ್ಲೇ ಕಟಾವು ಮಾಡಿ ನೆಲಕ್ಕೆ ಗೊಬ್ಬರ ಮಾಡಿದ್ರು. ಈಗ ಮತ್ತೆ ಅದೇ ಸ್ಥಿತಿ ಈ ಭಾಗದ ರೈತರಿಗೆ ಬಂದೊದಗಿದೆ. ಎಲೆಕೋಸಿಗೆ ಒಳ್ಳೆಯ ದರ ಬಂದು ಲಾಭ ಗಳಿಸಿ ಮಾಡಿದ್ದ ಸಾಲವನ್ನಾದರೂ ತೀರಿಸಬಹುದು ಅಂತಾ ಕನಸು ಕಂಡಿದ್ದ ರೈತರು ಮತ್ತೊಮ್ಮೆ ಕಂಗಾಲಾಗಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ದರ ಕುಸಿತದಿಂದಾಗಿ ಸಾಗಾಣಿಕೆ ವೆಚ್ಚವು ಬಾರದೇ ಕೃಷಿ ಯಂತ್ರೋಪಕರಣಗಳು ಹಾಗೂ ಕೊಡಲಿಯಿಂದ ಕಷ್ಟಪಟ್ಟು ೪ ಎಕರೆಯಲ್ಲಿ ಬೆಳೆದ ಬೆಳೆಯನ್ನು ನೆಲದಲ್ಲೇ ನಾಶ ಮಾಡಿ ಅಲ್ಲೇ ಗೊಬ್ಬರ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇದೇ ಪರಿಸ್ಥಿತಿ ಬರುತ್ತಿದೆ. ಲಾಕ್‌ಡೌನ್ ವೇಳೆ ನಷ್ಟವಾದ ಕ್ಯಾಬೇಜ್ ಬೆಳೆಗೆ ಪರಿಹಾರ ನೀಡ್ತೀವಿ ಅಂತಾ ಸರ್ಕಾರ ಹೇಳಿತ್ತಾದರೂ ಯಾವುದೇ ಪರಿಹಾರ ನೀಡಿಲ್ಲ. ಈಗ ಮತ್ತೆ ಸಾಲ ಮಾಡಿ ಬೆಳೆದ ಕ್ಯಾಬೇಜ್ ಅಂದ್ರೆ ಎಲೆಕೋಸು ನಾಶವಾಗಿದ್ದು ಸರ್ಕಾರ ತರಕಾರಿಗಳಿಗೆ ನಿರ್ದಿಷ್ಟ ದರ ನಿಗದಿ ಮಾಡಬೇಕು. ಕೇರಳ ಸರ್ಕಾರದ ಮಾದರಿಯಲ್ಲಿ ಮೂಲಬೆಲೆ ನಿಗದಿ ಮಾಡಬೇಕು ಅಂತಾ ಕಡೋಲಿ ಎಂಬ ಹಳ್ಳಿಯ ಭಾಗದ ರೈತರು ಒತ್ತಾಯಿಸಿದ್ದಾರೆ.
ಅಷ್ಟಕ್ಕೂ ಕೇರಳ ಸರ್ಕಾರ ದೇಶದಲ್ಲೇ ಮೊದಲ ಬಾರಿ ತರಕಾರಿ ಮೂಲ ಬೆಲೆ ನಿಗದಿ ಮಾಡಿತ್ತು. ತರಕಾರಿ ಉತ್ಪಾದನೆಗಿಂತಲೂ 20 ಪರ್ಸೆಂಟ್ ಅಧಿಕ ಮೊತ್ತವನ್ನು ಸರ್ಕಾರ ನಿಗದಿ ಮಾಡುತ್ತೆ. ನಿಯಮಿತವಾಗಿ ಮೂಲದರದ ಪರಿಷ್ಕರಣೆ ಆಗುತ್ತಿರುತ್ತೆ. ಒಂದು ವೇಳೆ ಮಾರುಕಟ್ಟೆಯಲ್ಲಿ ತರಕಾರಿ ಮೂಲದರಕ್ಕಿಂತ ಕಡಿಮೆ ಇದ್ರೆ ತರಕಾರಿಯ ಗುಣಮಟ್ಟದ ಆಧಾರದಲ್ಲಿ ಮೂಲಬೆಲೆಗೆ ಸರ್ಕಾರವೇ ಖರೀದಿ ಮಾಡುತ್ತೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ತರಕಾರಿಗಳಿಗೆ ಮೂಲ ಬೆಲೆ ದರ ನಿಗದಿ ಮಾಡಿ ಎಂಬುದು ರೈತರ ಆಗ್ರಹ. ಇನ್ನು ದರ ಕುಸಿತದಿಂದ ಎಲೆಕೋಸು ಬೆಳೆಗೆ ಸಮಸ್ಯೆಯಾದ್ರೆ ಮತ್ತೊಂದೆಡೆ ಕಳಪೆ ಬೀಜದ ಸಸಿಗಳನ್ನು ನಾಟಿ ಮಾಡಿದ್ದರಿಂದ ಹೂಕೋಸು ಗಡ್ಡೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೇ ಇರುವುದು ಈ ಭಾಗದ ರೈತರಿಗೆ ಮತ್ತೊಂದು ತಲೆನೋವಾಗಿದೆ. ನರ್ಸರಿಗಳಿಂದ ಸಸಿ ತಂದು ಬೆಳೆಸಿದ್ದ ಹೂಕೋಸು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೇ ದೇವಗಿರಿ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ನರ್ಸರಿ ಮಾಲೀಕರನ್ನು ಕೇಳಿದ್ರೆ ಕಂಪನಿಯವರು ಬಂದು ಪರಿಶೀಲಿಸುತ್ತಾರೆ ಅಂತಾ ಹೇಳುತ್ತ ಹೊರತು ಅನ್ನಧಾತರ ಬಾಳಲ್ಲಿ ಚಲ್ಲಾಟವಾಡುತ್ತಿದ್ದಾರೆ, ಇದುವರಿಗೂ ಬೀಜ ವಿತರಣೆ ಮಾಡಿದ್ದ ಯಾರೊಬ್ಬರೂ ಬಂದಿಲ್ಲಾ ಅಂತಾ ರೈತರಾದ ಅಪ್ಪಾಸಾಬ್ ದೇಸಾಯಿ ಹಾಗು ಶಂಕರ್ ಪಾಟೀಲ್, ಹೂಕೋಸು ಬೆಳೆದ ರೈತರು ಆರೋಪಿಸಿತ್ತಿದ್ದಾರೆ.
ಅದೇನೇ ಇರಲಿ ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಒಂದಿಲ್ಲ ಒಂದು ಸಂಕಷ್ಟ ಬರುತ್ತಲೇ ಇವೆ. ಸಾಲಸೋಲ ಮಾಡಿ ಬೆಳೆದ ಬೆಳೆಗೆ ದರ ಸಿಗದೇ ಇರೋದು ರೈತರಿಗೆ ದಿಕ್ಕೇ ತೋಚದಂತಾಗಿದೆ. ರೈತರ ಬಳಿ ಒಂದು ರೂಪಾಯಿ ಪ್ರತಿ ಕೆಜಿಗೆ ನೀಡಿ ಎಲೆಕೋಸು ಪಡೆಯುವ ಸಗಟು ವ್ಯಾಪಾರಿಗಳು ಅದೇ ಎಲೆಕೋಸನ್ನು ಮಾರುಕಟ್ಟೆಯಲ್ಲಿ 10 ರಿಂದ 15 ರೂ. ಪ್ರತಿ ಕೆಜಿಗೆ ಮಾರಾಟ ಮಾಡ್ತಿದ್ದಾರೆ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಕಷ್ಟವಾಗುತ್ತಿದ್ದು ಕೇರಳ ಸರ್ಕಾರ ಮಾದರಿಯಲ್ಲಿ ತರಕಾರಿಗಳಿಗೆ ಮೂಲ ದರ ನಿಗದಿ ಮಾಡಿ ಎಂಬುದು ರೈತರ ಆಗ್ರಹ.
PublicNext
11/02/2021 04:26 pm