ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯಲ್ಲಿ ಹೆದ್ದಾರಿಯಲ್ಲಿ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಅನ್ನಧಾತರ ಹೈವೆ ಬಂದ್ ಮಾಡಿ ಪ್ರತಿಭಟನೆ.

ಬೆಳಗಾವಿ:ಕೆಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಭಾರತೀಯ ಕಿಸಾನ ಯುನಿಯನ್ ಸಂಘದ "ಹೆದ್ದಾರಿ ಬಂದ್" ಕರೆಗೆ ಬೆಳಗಾವಿಯಲ್ಲಿ ರೈತ ಮತ್ತು ದಲಿತ ಸಂಘಟನೆಗಳು ಸಾಥ್ ನೀಡಿ ವಿನೂತನ ಪ್ರತಿಭಟನೆ ಮಾಡಿದವು.

ಬೆಳಗಾವಿಯ ತಾಲೂಕಿನ ಪುಣೆ ಹಾಗು ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4 ಹಿರೇಬಾಗೆವಾಡಿ ಟೋಲ್ ಬಳಿ ಇಂದು ಮುಂಜಾನೆ ನೂರಾರು ರೈತರು ಸೇರಿದಂತೆ ನೂರಾರು ರೈತ ಮಹಿಳೆಯರು ಚೆಕ್ ಜಾಮ್ ಮಾಡಿ ಪ್ರತಿಭಟನೆ ನಡಿಸಿ

ಮಧ್ಯಾಹ್ನ ೧೨ ರಿಂದ ಭಾರತೀಯ ಕೃಷಿಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದುಗೌಡ ಮೊದಗಿ ಸಂಘದ ರೈತರು ಹಾಗು ಕೆಲವು ದಲಿತ ಸಂಘಟನೆಯ ಸದಸ್ಯರು ಹಿರೇಬಾಗೇವಾಡಿ ಟೋಲ್ ನಾಕ್ ಬಳಿ ರಸ್ತೆ ತಡೆದು ಭಿತ್ತಿ ಪತ್ರಗಳನ್ನ ಹಿಡಿದು ಕೇಂದ್ರ ಸರಕಾರದ ವಿರುದ್ಧ ಘೊಷನೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.

ಇದೇ ವೇಳೆ, ಕೆಂದ್ರ ಸರಕಾರದ ಕಾರ್ಮಿಕ ನೀತಿ ರದ್ದಾಗಲಿ, ಭೂಸುಧಾರಣಾ ಕಾಯ್ದೆ ರದ್ದಾಗಲಿ ಅಂತಾ, ಮಾನವ ಸರಪಳಿ ಮಾಡಿ ರಸ್ತೆ ಬಂದ್ ಮಾಡಿದರು. ರೈತ ಮಹಿಳೆಯರು ತೆಲೆ ಮೇಲೆ ಕಲ್ಲು ಹೊತ್ತುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದರು. ಮತ್ತು ರೈತರು ರಸ್ತೆಯಲ್ಲಿ ಮಲಗಿ ಉರುಳು ಸೇವೆ ಮಾಡಿದರು. ಈ ವೇಳೆ ವಾಹನಗಳ ಸಂಚಾರ ಅಸ್ತವ್ಯಸ್ತತೆ ಉಂಟಾಗಿ ಟ್ರಾಫಿಕ್ ಜಾಮ್ಗ ಗೆ ವಾಹನಗಳು ಸುಮಾರು ಒಂದು ಗಂಟೆ ವೇಳೆ ವಾಹನಗಳ ರಸ್ತೆಯೂದ್ದಕ್ಕು ನಿಲ್ಲುವಂತಾಯಿತು.

ಮುನ್ನೆಚ್ಚರಿಕೆವಾಗಿ ಪೋಲಿಸರ ಸಾರ್ವಜನಿಕರ ತೊಂದರೆಯಾಗದಂತೆ ಬೀಗು ಬಂದೊಬಸ್ತ್ ಮಾಡಲಾಗಿತ್ತು. ಅನ್ಬದಾತರು ತಮ್ಮ ಪ್ರತಿಭಟನೆ ತಿವೃಗೊಳಿಸಿದಾಗ ರಸ್ತೆಯಲ್ಲಿ ಉರುಳು ಸೇವೆ ಮಾಡುತ್ತಿರುವ ರೈತರನ್ನು ಎಳೆದು ವಾಹನದಲ್ಲಿ ಕುಡಿಸಯವ ಪೋಲಿಸರ ಪ್ರಯತ್ನ ಮಾಡಿದರು, ಇದೇ ವೇಳೆ ಆಕ್ರೊಶಭರಿತ ರೈತರ ಹಾಗು ಪೋಲಿಸರ ನಡುವೆ ಮಾತಿನ ಚಕಮಕಿಗೆ ಪ್ರತಿಭಟನೆ ವೇದಿಕೆಯಾಯಿತು. ಅದರೆ ಇಂದು ದೇಶಾದ್ಯಂತ ರೈತರ ಪ್ರತಿಭಟನೆಗೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದ್ದು ರಸ್ತೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್ ಬಿಸಿ ಪ್ರಯಾಣಿಕರಿಗೆ ಮುಟ್ಟಿತು.

Edited By : Manjunath H D
PublicNext

PublicNext

06/02/2021 03:41 pm

Cinque Terre

58.74 K

Cinque Terre

0