ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗಲ್ಲ : ಸಿಎಂ ಬಿಎಸ್ ವೈ

ಬೆಂಗಳೂರು : ಇಂದು ಅನ್ನದಾತ ಕೃಷಿ ಮಸೂದೆಯನ್ನು ವಿರೋಧಿಸಿ ರಸತೆಗಿಳಿದು ಪ್ರತಿಭಟನೆ ಮಾಡುತ್ತಿರುವ ಬೆನ್ನಲ್ಲೇ ಸಿ.ಎಂ. ಬಿಎಸ್ ವೈ ರೈತರಲ್ಲಿ ಮನವಿವೊಂದನ್ನಾ ಮಾಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ ವೈ.. ರೈತರಲ್ಲಿ ಕೈಜೋಡಿಸಿ ಪ್ರಾರ್ಥಿಸಿ ಮನವಿ ಮಾಡುತ್ತೇನೆ. ಅನಾವಶ್ಯಕವಾಗಿ ರೈತರನ್ನ ಗೊಂದಲದಲ್ಲಿ ದೂಡಬೇಡಿ.

ಎಂಪಿಎಂಸಿ ಮಸೂದೆಯನ್ನ ತಿದ್ದುಪಡಿ ತಂದಿರುವ ಉದ್ದೇಶ ರೈತರಿಗೆ ಅನುಕೂಲ ಆಗಲಿ ಎಂದು. ರೈತರಿಗೆ ಅನೇಕ ಒಳ್ಳೆಯ ಕಾರ್ಯಕ್ರಮವನ್ನ ನಾವು ರೂಪಿಸುತ್ತಿದ್ದೇವೆ.

ಯಾವುದೇ ಕಾರಣಕ್ಕೂ ನಿಮಗೆ ಮೋಸ ಆಗಲ್ಲ. ನಾನು ನಿಮ್ಮ ಜೊತೆ ಇದ್ದೇನೆ ಎಂದು ಭರವಸೆ ನೀಡಿದರು.

ಇನ್ಮುಂದೆ ಯಾರು ಬೇಕಾದರೂ ಭೂಮಿಯನ್ನ ಕೊಂಡುಕೊಳ್ಳಬಹುದು.

ಯಡಿಯೂರಪ್ಪ ಇರುವವೆಗೂ ರೈತರಿಗೆ ಅನ್ಯಾಯ ಆಗಲ್ಲ, ಬನ್ನಿ ಕೂತು ಚರ್ಚೆ ಮಾಡಿ.

ವಿಧಾನಸಭೆಯಲ್ಲಿ ಚರ್ಚೆ ಮಾಡಿಯೇ ಮಸೂದೆಗಳ ಸಾಧಕ-ಭಾದಕಗಳನ್ನ ತಿಳಿದೇ ತಿದ್ದುಪಡಿ ಮಾಡಲಾಗಿದೆ.

ಭೂ-ಸುಧಾರಣಾ ಕಾಯ್ದೆ ತಿದ್ದು ಪಡಿಯಲ್ಲಿ 50 ಎಕರೆಗೆ ಸೀಮಿತವಾಗಿದೆ. ಮೊದಲು ಹೇಗಿತ್ತೋ ಹಾಗೇ ಇದೆ.

ನೀರಾವರಿ ಭೂಮಿಯನ್ನ ಯಾರಾದರೂ ಕೊಂಡುಕೊಂಡರೆ ಅದನ್ನ ನೀರಾವರಿಗೆ ಉಪಯೋಗಿಸಬೇಕು ಅನ್ನೋ ಷರತ್ತನ್ನ ವಿಧಿಸಿದ್ದೇವೆ.

ಮತ್ತೆ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಭೂಮಿಯಾದ್ರೆ ಅದನ್ನ ಯಾರಿಗೂ ಕೊಂಡುಕೊಳ್ಳುವ ಹಕ್ಕು ಇಲ್ಲ.

ಸಣ್ಣ-ಅತೀ ಸಣ್ಣ ಜಮೀನನ್ನ ಕೊಂಡುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ.

ನಮ್ಮ ರಾಜ್ಯದಲ್ಲಿ ಸುಮಾರು 19, 20 ಲಕ್ಷ ಎಕರೆ ಭೂಮಿ ಸಾಗುವಳಿ ಆಗದೇ ಬಂಜರು ಭೂಮಿಯಾಗಿ ಬಿದ್ದಿದೆ.

ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ನಮ್ಮ ರಾಜ್ಯಕ್ಕೆ ಕೈಗಾರಿಕೆಗಳ ಅಗತ್ಯ ಇದೆ.

ಎಲ್ಲಿ ಸಾಗುವಳಿ ಆಗುವುದಿಲ್ಲವೋ ಅಲ್ಲಿ ಕೈಗಾರಿಕೆಗಳನ್ನ ಮಾಡುವುದರಿಂದ ಉದ್ಯೋಗಳು ಸಿಗಲಿವೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

28/09/2020 05:23 pm

Cinque Terre

61.77 K

Cinque Terre

7