ಹಾವೇರಿ: ಅತಿವೃಷ್ಟಿ ಅನಾವೃಷ್ಟಿಯಿಂದ ತತ್ತರಿಸಿದ ರೈತರು ಅಳಿದು ಉಳಿದಿರುವ ಬೆಳೆ ಮಾರಲು ಹೋದರೆ ಬೆಲೆ ಕಡಿತದಿಂದ ಕಂಗಾಲಾಗುತ್ತಿದ್ದ, ಸದ್ಯ ಬ್ಯಾಡಗಿ ಮೆಣಸಿನಕಾಯಿ ಬೆಳೆದ ರೈತರಿಗೆ ಬಂಪರ್ ಬೆಲೆ ದೊರೆತಿದೆ.
ಹೌದು ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಾಲ್ ಗೆ ಬರೋಬ್ಬರಿ 45,111 ರೂ.ಗೆ ಮಾರಾಟವಾಗಿದೆ.
ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 10 ಗ್ರಾಂ ಚಿನ್ನದ ದರಕ್ಕೆ ಸರಿಸಮನಾಗಿ ಮೆಣಸಿನಕಾಯಿ ದರ ಏರಿಕೆಯಾಗಿ ದಾಖಲೆ ಬರೆದಿದೆ.
ಬ್ಯಾಡಗಿ ಮಾರುಕಟ್ಟೆಯಲ್ಲಿ ಬಂಗಾರದ ದರಕ್ಕೆ ಬ್ಯಾಡಗಿ ಮೆಣಸಿನಕಾಯಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಕಳೆದ ಎರಡು ವಾರಗಳಿಂದ ಇಲ್ಲಿನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಏರುಗತಿಯಲ್ಲಿ ಸಾಗುತ್ತಿದೆ.
ಗದಗ ಎಪಿಎಂಸಿಯಲ್ಲಿ ಶನಿವಾರ 41,125 ರೂಪಾಯಿಗೆ ಬ್ಯಾಡಗಿ ಮೆಣಸಿನಕಾಯಿ ಮಾರಾಟವಾಗಿ ದಾಖಲೆ ಬರೆದಿತ್ತು.
PublicNext
23/12/2020 08:26 am