ರಾಂಚಿ- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ಪ್ಲ್ಯಾನ್ ಹಾಕಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದರಲ್ಲೂ ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯ ಕಪ್ಪು ಕೋಳಿಗಳನ್ನೇ ಸಾಕಲು ಮುಂದಾಗಿದ್ದಾರಂತೆ.
ಧೋನಿ ಅವರ ಆರ್ಗಾನಿಕ್ ಫಾರ್ಮ್ ನೊಂದಿಗೆ ರಾಂಚಿಯಲ್ಲಿರುವ ಸಾವಯವ ಕೃಷಿಗೆ ಸಂಬಂಧಿಸಿದ ತಂಡ, ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಕೃಷಿಕರಿಂದ ಸುಮಾರು 2 ಸಾವಿರ ಕಟಕನಾಥ್ ಕೋಳಿ ಮರಿಗಳನ್ನು ನೀಡುವಂತೆ ಆರ್ಡರ್ ಕೊಟ್ಟಿದ್ದಾರೆ.
ಈಗಾಗಲೇ ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎಮ್ ಎಸ್ ಧೋನಿ ಈಗ ಕಪ್ಪು ತಳಿಯ ಕೋಳಿ ಸಾಕಾಣಿಕೆಗೂ ಮುಂದಾಗಿದ್ದಾರೆ.
PublicNext
12/11/2020 12:40 pm