ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಚಲಿಸುತ್ತಿದ್ದ ಬಸ್ ಏಕಾಏಕಿ ಹೊತ್ತಿ ಉರಿದಿದ್ದು ಬಸ್ಸಿನಲ್ಲಿದ್ದ ಸುಮಾರು 18 ಜನ ಸಜೀವ ದಹನವಾಗಿದ್ದಾರೆ.ಈ ವರೆಗೆ 18 ಪ್ರಯಾಣಿಕರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸದೀಯ ಆರೋಗ್ಯ ಕಾರ್ಯದರ್ಶಿ ಸಿರಾಜ್ ಖ್ವಾಸಿಂ ಮಾಹಿತಿ ನೀಡಿದ್ದಾರೆ.
ಇನ್ನು ಬಸ್ ನಲ್ಲಿ 35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದವರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದವರು. ಅವರೆಲ್ಲ ಖಾಸಗಿ ವಾಹನದ ಮೂಲಕ ದಾದು ಜಿಲ್ಲೆಗೆ ವಾಪಸ್ ಆಗುತ್ತಿದ್ದರು ಎಂದು ಜಂಶೋರೊ ಜಿಲ್ಲಾ ಕಮಿಷನರ್ ಆಸಿಫ್ ಜಮೀಲ್ ಹೇಳಿದ್ದಾರೆ.
ಬಸ್ ನ ಹಿಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕೆನ್ನಾಲಿಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ ಈ ವೇಳೆ ಕೆಲವರು ಬಸ್ ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.ಇನ್ನು ಬೆಂಕಿಯ ಕೆನ್ನಾಲಿಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಪ್ರಯಾಣಿಕರ ಮೃತದೇಹ ಗುರುತು ಸಿಗದಂತಾಗಿವೆ.ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಈವರೆಗೆ ತಿಳಿದುಬಂದಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
PublicNext
13/10/2022 01:51 pm