ಉತ್ತರ ಪ್ರದೇಶ : ಧಾರಾಕಾರ ಮಳೆಯಿಂದ ರಸ್ತೆಗಳೆಲ್ಲ ಕಿತ್ತುಹೋಗಿವೆ. ಸದ್ಯ ಜಲಾವೃತಗೊಂಡ ರಸ್ತೆಯಲ್ಲಿ ಇ-ರಿಕ್ಷಾವೊಂದು ಉರುಳಿ ಬಿದ್ದ ಘಟನೆ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿ ನಡೆದಿದೆ.ಸದ್ಯ ಜನರನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಬಿದ್ದ ವಿಡಿಯೋ ವೈರಲ್ ಆಗಿದೆ. ಇನ್ನು ಯುಪಿ ಅಧಿಕಾರಿಗಳ ಬೆಂಗಾವಲು ಪಡೆ ರಿಕ್ಷಾ ಬಿದ್ದ ರಸ್ತೆಯಲ್ಲಿಯೇ ಸಾಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವೆಂಬರ್ 15 ರೊಳಗೆ ರಾಜ್ಯದಲ್ಲಿ “ಗುಂಡಿ ಮುಕ್ತ ರಸ್ತೆ” ಗಾಗಿ ಬೃಹತ್ ಅಭಿಯಾನವನ್ನು ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಕೆಲವೇ ದಿನಗಳಲ್ಲಿ ಈ ಅಪಘಾತ ಸಂಭವಿಸಿದೆ.
PublicNext
11/10/2022 02:45 pm