ಕೇರಳ : ಅವರೆಲ್ಲ ಖುಷಿಯಿಂದ ಟೂರ ಮಾಡಲು ಹೊರಟವರು ಆದರೆ ಭೀಕರ ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೇರಳದ ಪಾಲಕ್ಕಾಡ್ ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ಬುಧವಾರ ರಾತ್ರಿ ಸಣಭವಿಸಿದೆ.ಹೌದು ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್ ಆರ್ ಟಿಸಿ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಟೂರಿಸ್ಟ್ ಬಸ್ ನಲ್ಲಿ ಒಟ್ಟು 42 ವಿದ್ಯಾರ್ಥಿಗಳಿದ್ದರು ಮತ್ತು ಕೆಎಸ್ ಆರ್ ಟಿಸಿ ಬಸ್ ನಲ್ಲಿ 49 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ.ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್ ವಿಂಟರ್ಬೋರ್ನ್ ಥಾಮಸ್, ಎಲ್ನಾ ಜೋಸ್ (ವಿದ್ಯಾರ್ಥಿಗಳು) ಮತ್ತು ಕೊಲ್ಲಂನ ವಲಿಯೋಡೆ ನಿವಾಸಿ ಅನೂಪ್ (22), ರೋಹಿತ್ ರಾಜ್ (24) ಮತ್ತು ದೀಪು (KSRTC ಪ್ರಯಾಣಿಕರು) ಎಂದು ಗುರುತಿಸಲಾಗಿದೆ.
ಗಾಯಗೊಂಡ ಸುಮಾರು 50 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
PublicNext
06/10/2022 09:00 am