ಜಲ್ಪೈಗುರಿ : ದುರ್ಗಾದೇವಿ ವಿಸರ್ಜನೆ ವೇಳೆ ದಿಢೀರ್ ಸೃಷ್ಟಿಯಾದ ಪ್ರವಾಹದಿಂದ ಹಲವು ಭಕ್ತರು ಕೊಚ್ಚಿ ಹೋದ ಘಟನೆ ಪಶ್ಚಮ ಬಂಗಾಳದ ಜಲ್ಪೈ ಗುರಿಯಲ್ಲಿ ನಡೆದಿದೆ.
ಈಗಾಗಲೇ ಪ್ರವಾಹದಿಂದ 7 ಜನ ಸಾವನ್ನಪ್ಪಿದ್ದು ಹಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.ಹೌದು ಜಲ್ಪೈಗುರಿ ಜಿಲ್ಲೆಯ ನಿಯೋರಾ ನದಿ ದಂಡೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದೆ. ಕಳೆದೆರಡು ದಿನದಿಂದ ಸತತ ಮಳೆಯಾಗುತ್ತಿದ್ದ ಕಾರಣ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ.ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
7 ಮಂದಿ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. 60ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ರಕ್ಷಿಸಿದ ಭಕ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
06/10/2022 07:41 am