ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಪತ್ತಿಗೆ ಬಂದಿದ್ದ ಆಂಬ್ಯುಲೆನ್ಸ್ ಗೆ ಕಾರು ಡಿಕ್ಕಿ 5 ಜನ ಸಾವು

ಮುಂಬೈ : ಅಲ್ಲೊಂದು ಅಪಘಾತ ನಡೆದಿತ್ತು ಹಾಗಾಗಿ ಅವರ ರಕ್ಷಣೆಗೆಂದು ಆಂಬ್ಯುಲೆನ್ಸ್ ಕೂಡಾ ಬಂದಿತ್ತು. ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ಸಾಗಿಸಲು ನಿಲ್ಲಿಸಿದ್ದ ಆಂಬ್ಯುಲೆನ್ಸ್ ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನ ಬಾಂದ್ರಾ-ವೊರ್ಲಿ ಸಮುದ್ರ ಸಂಪರ್ಕ (ಸೀ ಲಿಂಕ್) ರಸ್ತೆಯಲ್ಲಿ ನಡೆದಿದೆ.

ಈ ಅಪಘಾತ ಬುಧವಾರ ಬೆಳಗ್ಗೆ 3.30ರ ಸುಮಾರಿಗೆ ನಡೆದಿದೆ. ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಾಗಿಸಲು. ರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್ ಒಳಗೆ ಸಾಗಿಸಿ, ಆಸ್ಪತ್ರೆಗೆ ದಾಖಲಿಸಲು ತಯಾರಿ ನಡೆಸುವಾಗ ಕಾರು ಬಂದು ಡಿಕ್ಕಿ ಹೊಡೆದಿದೆ.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದು, ಓರ್ವ ಮಹಿಳೆ ಹಾಗೂ ಸೀ ಲಿಂಕ್ ಉದ್ಯೋಗಿ ಸೇರಿದಂತೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲಿ ಆರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

05/10/2022 01:28 pm

Cinque Terre

92.34 K

Cinque Terre

0

ಸಂಬಂಧಿತ ಸುದ್ದಿ