ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುತ್ತಿದ್ದ ಬೈಕ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ!!

ಕಾರವಾರ: ಮುಂಡಗೋಡ ಪಟ್ಟಣದ ಬಂಕಾಪುರ ರಸ್ತೆಯ ದೇಸಾಯಿ ಮೆಡಿಕಲ್ ಬಳಿ ಚಲಿಸುತ್ತಿದ್ದ ಬೈಕ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದು ರಾತ್ರಿ ನಡೆದಿದೆ.

ಶಿವಾಜಿ ಸರ್ಕಲ್ ನಿಂದ ಬಂಕಾಪುರ ರಸ್ತೆಯಲ್ಲಿ ಸವಾರನೋರ್ವ ತೆರಳುತ್ತಿದ್ದ ವೇಳೆ ಸ್ಪ್ಲೆಂಡರ್ ಬೈಕ್ ನ ಪೆಟ್ರೋಲ್ ಟ್ಯಾಂಕ್ ಭಾಗದಿಂದ ಇದ್ದಕ್ಕಿದ್ದಂತೆ ಹೊಗೆ ಬರಲಾರಂಭಿಸಿದೆ. ತಕ್ಷಣ ಸವಾರ ಭಯದಿಂದ ಬೈಕ್ ಬಿಟ್ಟು ಪಕ್ಕಕ್ಕೆ ಸರಿದಿದ್ದು, ಅಷ್ಟರಲ್ಲೇ ಟ್ಯಾಂಕ್ ಮೇಲಿನಿಂದ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ಸವಾರ ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ಆರಿರಲಿಲ್ಲ. ಬಳಿಕ ಗೋಣಿಚೀಲಗಳಿಂದ ಬೈಕ್ ಅನ್ನು ಮುಚ್ಚಿ ಬೆಂಕಿ ನಂದಿಸಲಾಗಿದೆ.

Edited By : Nagesh Gaonkar
PublicNext

PublicNext

06/09/2022 10:53 pm

Cinque Terre

209.26 K

Cinque Terre

1

ಸಂಬಂಧಿತ ಸುದ್ದಿ