ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳ್ಳದಲ್ಲಿ ಕೊಚ್ಚಿಹೋದ ಪೊಲೀಸರು : ಓರ್ವನ ಮೃತದೇಹ ಪತ್ತೆ: ಮತ್ತೋರ್ವನಿಗಾಗಿ ಶೋಧ

ಗದಗ: ನಿರಂತರ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಇಬ್ಬರು ಪೊಲೀಸರು ಕಾನ್ಸ್ ಟೇಬಲ್ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.ಆ ಪೈಕಿ ಒಬ್ಬರ ಮೃತ ದೇಹ ಸಿಕ್ಕಿದ್ದು,ಇನ್ನೊಬ್ಬರಿಗಾಗಿ ಹುಡುಕಾಟ ನಡೆದಿದೆ.

ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಹಳ್ಳಗಳಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದೆ.ಈ ಮಧ್ಯೆ ನಿನ್ನೆ ಸಂಜೆ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿಯಲ್ಲಿ ಹಳ್ಳಕ್ಕೆ ಭಾರಿ ಪ್ರಮಾಣದ ಪ್ರವಾಹ ಉಂಟಾಗಿತ್ತು.

ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಳಾದ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ ವಕ್ರದ ಎಂಬುವವರು ಬೈಕ್ ನಲ್ಲಿ ಹಳ್ಳ ದಾಟಲು ಯತ್ನಿಸಿದಾಗ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.ರಾತ್ರಿ ವೇಳೆ ಅವರ ಬಗ್ಗೆ ಮಾಹಿತಿ ಸಿಕ್ಕಿಲ್ಲ.ಆದರೆ ಮುಂಜಾನೆ ಅವರು ಮುಂಡರಗಿ ಪೊಲೀಸ್ ಠಾಣೆಗೆ ಬಾರದ ಹಿನ್ನೆಲೆ ಅವರಿಗೆ ಫೋನ್ ಮಾಡಲಾಗಿದೆ. ಈ ವೇಳೆ ಇಬ್ಬರ ಫೋನ್ ಸ್ವಿಚ್ಡ್ ಆಫ್ ಆಗಿದೆ.

ಈ ಫೋನ್ ತೊಂಡಿಹಾಳ ಹಳ್ಳದ ಬಳಿಯಲ್ಲಿ ಸ್ವಿಚ್ಡ್ ಆಫ್ ಆಗಿರುವುದು ಗೊತ್ತಾಗಿದೆ.ವಿಷಯ ತಿಳಿದು ಇಂದು ಮುಂಜಾನೆಯಿಂದಲೇ ಕೊಪ್ಪಳ ಅಗ್ನಿ ಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಕಾರ್ಯಾಚರಣೆ ಮಾಡಿದ್ದು,ಮಧ್ಯಾಹ್ನ ವೇಳೆಗೆ ಹಳ್ಳದಿಂದ ಸುಮಾರು 8 ಕಿಮೀ ದೂರದಲ್ಲಿ ನಿಂಗಪ್ಪನ ಮೃತ ದೇಹ ಪತ್ತೆಯಾಗಿದೆ.

ಇನ್ನೂ ಮಹೇಶ್ ನಾಪತ್ತೆಯಾಗಿದ್ದು,ಅವರಿಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದೆ. ಮಹೇಶ್ ಸಹ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು,ನಿನ್ನೆ ಗಜೇಂದ್ರಗಡದಲ್ಲಿ ರೈತರ ಹೋರಾಟಕ್ಕೆ ಬಂದೋಬಸ್ತ್ ಒದಗಿಸಲು ಹೋಗಿದ್ದ ಇಬ್ಬರು ಮರಳಿ ವಾಪಸ್ಸಾಗುವಾಗ ಈ ಘಟನೆ ನಡೆದಿದೆ.

Edited By : Nagesh Gaonkar
PublicNext

PublicNext

06/09/2022 10:05 pm

Cinque Terre

86.22 K

Cinque Terre

2

ಸಂಬಂಧಿತ ಸುದ್ದಿ